ವಾಜಪೇಯಿ ನಿಧನ: ರಾಜ್ಯ ರಾಜಕೀಯ ನಾಯಕರ ಸಂತಾಪ

ಚಿಕ್ಕಮಗಳೂರು,ಆ.16: ರಾಜಕೀಯ ಮುತ್ವದ್ದಿ, ಅಜಾತ ಶತ್ರು ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನಕ್ಕೆ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ಶಾಸಕ ಸಿ.ಟಿ.ರವಿ, ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಧರ್ಮೇಗೌಡ, ಎಸ್.ಎಲ್.ಭೋಜೇಗೌಡ, ಎಂ.ಕೆ.ಪ್ರಾಣೇಶ್, ಶಾಕರುಗಳಾದ ಎಂ.ಪಿ.ಕುಮಾರಸ್ವಾಮಿ, ಡಿ.ಎಸ್.ಸುರೇಶ್, ಟಿ.ಡಿ.ರಾಜೇಗೌಡ, ಬೆಳ್ಳಿಪ್ರಕಾಶ್, ಆಯನೂರು ಮಂಜುನಾಥ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುಜಾತ ಕೃಷ್ಣಪ್ಪ ಇವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
Next Story





