Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ಏಶ್ಯನ್ ಗೇಮ್ಸ್: ಭಾರತದ ಅಗ್ರ-10...

ಏಶ್ಯನ್ ಗೇಮ್ಸ್: ಭಾರತದ ಅಗ್ರ-10 ಸ್ಮರಣೀಯ ಕ್ಷಣಗಳು

ವಾರ್ತಾಭಾರತಿವಾರ್ತಾಭಾರತಿ16 Aug 2018 11:20 PM IST
share
ಏಶ್ಯನ್ ಗೇಮ್ಸ್: ಭಾರತದ ಅಗ್ರ-10 ಸ್ಮರಣೀಯ ಕ್ಷಣಗಳು

 ಹೊಸದಿಲ್ಲಿ, ಆ.16: ಭಾರತ ಚೊಚ್ಚಲ ಆವೃತ್ತಿಯ ಏಶ್ಯನ್ ಗೇಮ್ಸ್‌ನ ಆತಿಥ್ಯವಹಿಸಿದ ಮೊದಲ ದೇಶ ಹಾಗೂ ಹಲವು ಕ್ರೀಡೆಗಳಲ್ಲಿ ಚಿನ್ನ ಜಯಿಸಿರುವುದು ಸೇರಿದಂತೆ ಏಶ್ಯಾಡ್‌ನಲ್ಲಿ ಹಲವು ಮಹತ್ವದ ಕ್ಷಣಗಳಿಗೆ ಸಾಕ್ಷಿಯಾಗಿದೆ. ಭಾರತ ಏಶ್ಯಾಡ್‌ನಲ್ಲಿ ದಾಖಲಿಸಿದ ಅಗ್ರ-10 ಸ್ಮರಣೀಯ ಕ್ಷಣಗಳು ಇಂತಿವೆ.

1951ರ ಮೊದಲ ಏಶ್ಯಾ ಗೇಮ್ಸ್‌ಗೆ ಭಾರತ ಆತಿಥ್ಯ

ಏಶ್ಯಾಕಪ್ ಗೇಮ್ಸ್ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ನಡೆಯುತ್ತದೆ. 1951ರಲ್ಲಿ ಏಶ್ಯನ್ ಗೇಮ್ಸ್‌ನ ಮೊತ್ತ ಮೊದಲ ಆವೃತ್ತಿಯ ಆತಿಥ್ಯವನ್ನು ಭಾರತ ವಹಿಸಿಕೊಂಡಿತ್ತು. ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ಹೊಸದಿಲ್ಲಿಯ ಧ್ಯಾನ್‌ಚಂದ್ ಸ್ಟೇಡಿಯಂನಲ್ಲಿ ಗೇಮ್ಸ್‌ನ್ನು ಅಧಿಕೃತವಾಗಿ ಉದ್ಘಾಟಿಸಿದ್ದರು. 11 ರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಗಳ 489 ಅಥ್ಲೀಟ್‌ಗಳು 12 ಕ್ರೀಡೆಗಳಲ್ಲಿ ಭಾಗವಹಿಸಿದ್ದರು.

ಭಾರತಕ್ಕೆ ಮೊದಲ ಏಶ್ಯಾ ಗೋಲ್ಡ್

1951ರ ಏಶ್ಯನ್ ಗೇಮ್ಸ್‌ನಲ್ಲಿ 100 ಮೀ. ಫ್ರೀಸ್ಟೈಲ್ ವಿಭಾಗದಲ್ಲಿ ಸಚಿನ್ ನಾಗ್ ಭಾರತಕ್ಕೆ ಮೊತ್ತಮೊದಲ ಚಿನ್ನದ ಪದಕ ಗೆದ್ದುಕೊಟ್ಟು ಐತಿಹಾಸಿಕ ಸಾಧನೆ ಮಾಡಿದ್ದರು. ಹೊಸದಿಲ್ಲಿಯಲ್ಲಿ ನಡೆದ ಗೇಮ್ಸ್ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಜವಾಹರಲಾಲ್ ನೆಹರೂ ಸ್ವಿಮ್ಮರ್ ಸಚಿನ್ ನಾಗ್‌ಗೆ ಅಭಿನಂದನೆ ಸಲ್ಲಿಸಿದ್ದರು. ಇದೇ ಗೇಮ್ಸ್‌ನಲ್ಲಿ ನಾಗ್ ಅವರು 4X100 ಮೀ. ಫ್ರೀಸ್ಟೈಲ್ ಹಾಗೂ 3X100 ಮೀ.ಮೆಡ್ಲೆಯಲ್ಲಿ ಇನ್ನೆರಡು ಕಂಚು ಪದಕ ಜಯಿಸಿದ್ದರು.

        

 1951 ಹಾಗೂ 1962ರಲ್ಲಿ ಫುಟ್ಬಾಲ್‌ನಲ್ಲಿ ಚಿನ್ನ

50-60ರ ದಶಕ ಭಾರತದ ಫುಟ್ಬಾಲ್‌ಗೆ ಸುವರ್ಣಯುಗವಾಗಿತ್ತು. ಪ್ರಧಾನಿ ನೆಹರೂ ಅವರ ಸಮ್ಮುಖದಲ್ಲಿ ನಡೆದ ಫುಟ್ಬಾಲ್ ಫೈನಲ್‌ನಲ್ಲಿ ಇರಾನ್ ತಂಡವನ್ನು 1-0 ಅಂತರದಿಂದ ಮಣಿಸಿದ್ದ ಸೈಲೆನ್ ಮನ್ನಾ ನೇತೃತ್ವದ ಭಾರತದ ಫುಟ್ಬಾಲ್ ತಂಡದ ಆಟಗಾರರ ಮುಖದಲ್ಲಿ ಆತ್ಮವಿಶ್ವಾಸ ಪ್ರತಿಬಿಂಬಿಸುತ್ತಿತ್ತು. ಬ್ರೆಝಿಲ್‌ನಲ್ಲಿ 1950ರಲ್ಲಿ ನಡೆದ ಫಿಫಾ ವಿಶ್ವಕಪ್‌ಗೆ ಭಾರತ ತಂಡವನ್ನು ಕಳುಹಿಸಿಕೊಡದೇ ಟೀಕೆಗೆ ಗುರಿಯಾಗಿದ್ದ ಭಾರತದ ಅಧಿಕಾರಿಗಳು ಈ ಫಲಿತಾಂಶದಿಂದ ನಿಟ್ಟುಸಿರು ಬಿಟ್ಟಿದ್ದರು. ಭಾರತ ಫುಟ್ಬಾಲ್ ತಂಡ 1982ರಲ್ಲಿ ಜಕಾರ್ತಾದಲ್ಲಿ ನಡೆದ ಏಶ್ಯನ್ ಗೇಮ್ಸ್‌ನಲ್ಲಿ ಮತ್ತೊಂದು ಚಿನ್ನ ಜಯಿಸಿತ್ತು.

                  

ಚಿನ್ನ ಜಯಿಸಿದ ಮಿಲ್ಖಾ ಸಿಂಗ್‌ಮಿಲ್ಖಾ ಸಿಂಗ್

ಅವಧಿಯಲ್ಲಿ ಭಾರತ ಟ್ರಾಕ್ ಇವೆಂಟ್‌ನಲ್ಲಿ ಅಪೂರ್ವ ಪ್ರದರ್ಶನ ನೀಡಿತ್ತು. ‘ಫ್ಲೈಯಿಂಗ್ ಸಿಖ್’ ಖ್ಯಾತಿಯ ಮಿಲ್ಖಾ ಸಿಂಗ್ 1958ರಲ್ಲಿ ಟೋಕಿಯೊದಲ್ಲಿ ನಡೆದಿದ್ದ ಏಶ್ಯನ್ ಗೇಮ್ಸ್‌ನಲ್ಲಿ 200 ಮೀ. ಹಾಗೂ 400 ಮೀ. ಓಟದ ಸ್ಪರ್ಧೆಯಲ್ಲಿ ಎರಡು ಚಿನ್ನ ಜಯಿಸಿದ್ದರು. ಏಶ್ಯಾದ ವೇಗದ ಓಟಗಾರನೆಂಬ ಖ್ಯಾತಿ ಪಡೆದಿದ್ದ ಮಿಲ್ಖಾ ಸಿಂಗ್ ವೃತ್ತಿಜೀವನದ ಯಶಸ್ಸಿನ ಹಿನ್ನೆಲೆಯಲ್ಲಿ ಸಿಪಾಯಿ ಹುದ್ದೆಯಿಂದ ಜೂನಿಯರ್ ಕಮಿಶನ್ ಅಧಿಕಾರಿಯಾಗಿ ಭಡ್ತಿ ಪಡೆದಿದ್ದರು.

 1982ರಲ್ಲಿ ಮತ್ತೊಮ್ಮೆ ಗೇಮ್ಸ್ ಆತಿಥ್ಯವಹಿಸಿದ ಭಾರತ

1982ರಲ್ಲಿ ಎರಡನೇ ಬಾರಿ ಏಶ್ಯನ್ ಗೇಮ್ಸ್ ಆತಿಥ್ಯದ ಹಕ್ಕನ್ನು ಗಿಟ್ಟಿಸಿಕೊಂಡ ಭಾರತ ತನ್ನ ಪದಕಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದ್ದಲ್ಲದೆ ಬ್ಯಾಂಕಾಕ್ ಬಳಿಕ ಒಂದಕ್ಕಿಂತ ಹೆಚ್ಚು ಬಾರಿ ಗೇಮ್ಸ್ ಆತಿಥ್ಯವಹಿಸಿಕೊಂಡ ಗೌರವಕ್ಕೆ ಪಾತ್ರವಾಯಿತು. 2ನೇ ಬಾರಿ ಏಶ್ಯನ್ ಗೇಮ್ಸ್ ಆಯೋಜಿಸಿದ ದಿಲ್ಲಿಯ ಚಿತ್ರಣ ಬದಲಾಗಿತ್ತು. ಹೊಸ ರಸ್ತೆಗಳು ಹಾಗೂ ಫ್ಲೈಓವರ್‌ಗಳು ನಿರ್ಮಿಸಲ್ಪಟ್ಟವು.ಹಳೆ ರಸ್ತೆಗಳನ್ನು ಅಗಲಗೊಳಿಸಲಾಯಿತು. ಹೊಸ ಬಸ್‌ಗಳು, ಫೋನ್ ಲೈನ್‌ಗಳನ್ನು ಪರಿಚಯಿಸಲಾಯಿತು. 60,000 ಪ್ರೇಕ್ಷಕರ ಸಾಮರ್ಥ್ಯದ ಜವಾಹರಲಾಲ್ ನೆಹರೂ ಸ್ಟೇಡಿಯಂ ಕಟ್ಟಡವು ರಾಜಧಾನಿಗೆ ಲಭಿಸಿದ ದೊಡ್ಡ ಕೊಡುಗೆಯಾಗಿತ್ತು. 1982ರ ಗೇಮ್ಸ್‌ಗೆ ಭಾರತದ ಒಲಿಂಪಿಕ್ಸ್ ಕೌನ್ಸಿಲ್‌ನ ಬೆಂಬಲವಿತ್ತು. ಇದೇ ಗೇಮ್ಸ್‌ನಲ್ಲಿಮೊದಲ ಬಾರಿ ‘ಅಪ್ಪು’ ಹೆಸರಿನ ಆನೆಯ ಲಾಂಛನವನ್ನು ಪರಿಚಯಿಸಲಾಯಿತು. ಭಾರತದ ರಾಷ್ಟ್ರಪತಿ ಜೈಲ್ ಸಿಂಗ್ ಜವಾಹರಲಾಲ್ ನೆಹರೂ ಸ್ಟೇಡಿಯಂನಲ್ಲಿ ಗೇಮ್ಸ್‌ನ್ನುಅಧಿಕೃತವಾಗಿ ಉದ್ಘಾಟಿಸಿದ್ದರು. ಭಾರತದ ಶ್ರೇಷ್ಠ ಅಥ್ಲೀಟ್‌ಗಳ ಪೈಕಿ ಓರ್ವರಾಗಿದ್ದ ಪಿ.ಟಿ. ಉಷಾ ಅಥ್ಲೀಟ್‌ಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದ್ದರು.

ಸಿಯೋಲ್ ಗೇಮ್ಸ್‌ನಲ್ಲಿ ಪಿ.ಟಿ. ಉಷಾ ಶೈನ್                            

ಮಿಲ್ಖಾ ಸಿಂಗ್ ಹಾದಿಯನ್ನು ಅನುಸರಿಸಿದ ಕೇರಳದ ಓಟದ ರಾಣಿ ಪಿ.ಟಿ ಉಷಾ 1982ರಲ್ಲಿ ನಡೆದಿದ್ದ ಏಶ್ಯನ್ ಗೇಮ್ಸ್‌ನಲ್ಲಿ ಎರಡು ಬೆಳ್ಳಿ ಪದಕ ಜಯಿಸಿದ್ದರು. 1986ರಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆದಿದ್ದ ಸಿಯೋಲ್ ಗೇಮ್ಸ್‌ನಲ್ಲಿ ಈ ಸಾಧನೆಯನ್ನು ಉತ್ತಮಪಡಿಸಿಕೊಂಡ ‘ಪಯ್ಯೋಳಿ ಎಕ್ಸ್‌ಪ್ರೆಸ್’ ಖ್ಯಾತಿಯ ಉಷಾ 200 ಮೀ.,400 ಮೀ., 400 ಮೀ. ಹರ್ಡಲ್ಸ್ ಹಾಗೂ 4x 400 ಮೀ. ಓಟದ ಸ್ಪರ್ಧೆಯಲ್ಲಿ ನಾಲ್ಕು ಚಿನ್ನ ಹಾಗೂ 100ಮೀ. ರೇಸ್‌ನಲ್ಲ್ಲಿ ಬೆಳ್ಳಿ ಸಹಿತ ಒಟ್ಟು ಐದು ವೈಯಕ್ತಿಕ ಪದಕಗಳನ್ನು ಬಾಚಿಕೊಂಡರು. ‘‘ಹೊಸದಿಲ್ಲಿಯಲ್ಲಿ 1982ರಲ್ಲಿ ನಡೆದ ಏಶ್ಯನ್ ಗೇಮ್ಸ್ ನನ್ನ ಮೊದಲ ಗೇಮ್ಸ್,1988ರ ಬ್ಯಾಂಕಾಕ್ ಗೇಮ್ಸ್ ಕೊನೆಯದ್ದಾಗಿದೆ. ಎಲ್ಲ ಐದು ಗೇಮ್ಸ್ ನಲ್ಲಿನ ನನ್ನ ರೇಸ್ ಬಗ್ಗೆ ಚೆನ್ನಾಗಿ ನೆನಪಿದೆ. ಆದರೆ, 1986ರ ಗೇಮ್ಸ್ ನನ್ನ ಪಾಲಿಗೆ ಸ್ಮರಣೀಯ’’ಎಂದು ಉಷಾ ಹೇಳಿದ್ದಾರೆ.

1998ರ ಗೇಮ್ಸ್‌ನಲ್ಲಿ ಭಾರತ ಹಾಕಿಗೆ ಸ್ವರ್ಣ ಸಂಭ್ರಮ         

ವಿಶ್ವಕಪ್‌ನಲ್ಲಿ 9ನೇ ಸ್ಥಾನ ಗಳಿಸಿ ಕಳಪೆ ಪ್ರದರ್ಶನ ನೀಡಿದ್ದ ಭಾರತದ ಹಾಕಿ ತಂಡ 1998ರ ಏಶ್ಯನ್ ಗೇಮ್ಸ್‌ಗೆ ಒತ್ತಡದಿಂದ ತೆರಳಿತ್ತು. ಧನರಾಜ್ ಪಿಳ್ಳೈ ನೇತೃತ್ವದಲ್ಲಿ ನಿರೀಕ್ಷೆಗೂ ಮೀರಿ ಪ್ರದರ್ಶನ ನೀಡಿದ ಭಾರತ ಪೆನಾಲ್ಟಿ ಶೂಟೌಟ್‌ನಲ್ಲಿ ದಕ್ಷಿಣ ಕೊರಿಯಾವನ್ನು 5-3ರಿಂದ ಮಣಿಸಿ ಚಿನ್ನದ ಪದಕ ಬಾಚಿಕೊಂಡಿತು. ನಾಯಕ ಪಿಳ್ಳೈ 6 ಪಂದ್ಯಗಳಲ್ಲಿ 11 ಗೋಲುಗಳನ್ನು ಬಾರಿಸಿ ಹೆಮ್ಮೆಯಿಂದ ಸ್ವದೇಶಕ್ಕೆ ವಾಪಸಾಗಿದ್ದರು.

        

ಬಾಕ್ಸಿಂಗ್‌ನಲ್ಲಿ ಮೊದಲ ಚಿನ್ನ ಗೆದ್ದುಕೊಟ್ಟ ಡಿಂಕೊ ಸಿಂಗ್‌

ಬ್ಯಾಂಕಾಕ್‌ನಲ್ಲಿ 1998ರಲ್ಲಿ ನಡೆದ ಏಶ್ಯನ್ ಗೇಮ್ಸ್‌ನಲ್ಲಿ ಚಿನ್ನ ಜಯಿಸಿದ್ದ ಬಾಕ್ಸರ್ ಡಿಂಕೊ ಸಿಂಗ್ ಬಾಕ್ಸಿಂಗ್‌ನಲ್ಲಿ ಭಾರತದ 16 ವರ್ಷಗಳ ಪದಕದ ಬರ ನೀಗಿಸಿದ್ದರು. 54 ಕೆಜಿ ಬಾಟಮ್‌ವೇಟ್ ವಿಭಾಗದಲ್ಲಿ ಸೆಮಿ ಫೈನಲ್‌ನಲ್ಲಿ ಥಾಯ್ಲೆಂಡ್ ಆಟಗಾರನಿಂದ ಕಠಿಣ ಹೋರಾಟ ಎದುರಿಸಿದ್ದ ಸಿಂಗ್ ಫೈನಲ್‌ನಲ್ಲಿ ಎದುರಾಳಿ ಗಾಯಾಳು ನಿವೃತ್ತಿಯಾದ ಕಾರಣ ಸುಲಭದಲ್ಲಿ ಚಿನ್ನ ಜಯಿಸಿದ್ದರು.

 ಗೀತ್ ಸೇಥಿ-ಅಶೋಕ್ ಶಾಂಡಿಲ್ಯ-ಬಿಲಿಯರ್ಡ್ಸ್ ಚಾಂಪಿಯನ್‌ಗಳು             

1998ರ ಗೇಮ್ಸ್‌ನಲ್ಲಿ ಮೊದಲ ಬಾರಿ ಬಿಲಿಯರ್ಡ್ಸ್ ಕ್ರೀಡೆ ಸೇರ್ಪಡೆಯಾಗಿತ್ತು. ಗೀತ್ ಸೇಥಿ ಹಾಗೂ ಅಶೋಕ್ ಶಾಂಡಿಲ್ಯ ಇಂಗ್ಲೀಷ್ ಬಿಲಿಯರ್ಡ್ಸ್ ಡಬಲ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು. 1-2 ಹಿನ್ನಡೆಯಿಂದ ಚೇತರಿಸಿಕೊಂಡ ಸೇಥಿ-ಶಾಂಡಿಲ್ಯ ಸ್ಥಳೀಯ ಫೇವರಿಟ್ ಆಟಗಾರರ ವಿರುದ್ಧ 4-3 ಅಂತರದಿಂದ ಜಯ ಸಾಧಿಸಿದ್ದರು.

                   

 ಚಿನ್ನಕ್ಕಾಗಿ ಹೋರಾಡಿದ ಮೇರಿ ಕೋಮ್

2014ರ ಏಶ್ಯನ್ ಗೇಮ್ಸ್‌ನಲ್ಲಿ ಬಾಕ್ಸಿಂಗ್‌ನಲ್ಲಿ ಚಿನ್ನ ಜಯಿಸಿದ ಭಾರತದ ಮೊದಲ ಮಹಿಳಾ ಬಾಕ್ಸರ್ ಎನಿಸಿಕೊಂಡಿದ್ದ ಮೇರಿ ಕೋಮ್ ಐತಿಹಾಸಿಕ ಸಾಧನೆ ಮಾಡಿದ್ದರು. ದಕ್ಷಿಣ ಕೊರಿಯಾದಲ್ಲಿ ನಡೆದಿದ್ದ ಗೇಮ್ಸ್‌ನಲ್ಲಿ 51 ಕೆಜಿ ವಿಭಾಗದಲ್ಲಿ ಕಝಕ್‌ಸ್ತಾನದ ಎದುರಾಳಿ ಝೈನಾ ಶೆಕೆರ್‌ಬೆಕೊವಾರನ್ನು 2-0 ಅಂತರದಿಂದ ಸೋಲಿಸಿದ್ದ ಮೇರಿಕೋಮ್ ಚಿನ್ನಕ್ಕೆ ಮುತ್ತಿಟ್ಟಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X