ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ: ನಾಮಪತ್ರ ಸಲ್ಲಿಕೆಗೆ ಆ.18 ಕೊನೆ ದಿನ
ಉಡುಪಿ, ಆ.17: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನದ ನಿಮಿತ್ತ ರಾಜ್ಯ ಚುನಾವಣಾ ಆಯೋಗ ಎರಡು ದಿನಗಳ ಕಾಲ ಮುಂದೂಡಿರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ನಾಮಪತ್ರ ಸಲ್ಲಿಸಲು ನಾಳೆ (ಆ.18) ಕೊನೆಯ ದಿನವಾಗಿರುತ್ತದೆ.
ಚುನಾವಣಾ ಆಯೋಗ ಪ್ರಕಟಿಸಿರುವ ಹೊಸ ವೇಳಾ ಪಟ್ಟಿಯಂತೆ ಆ.29ರಂದು ನಡೆಯಬೇಕಿದ್ದ ಮತದಾನ ಇದೀಗ ಆ.31ರಂದು ನಡೆಯಲಿದೆ. ಇಂದು ಸಾರ್ವಜನಿಕ ರಜಾ ದಿನವಾದ ಕಾರಣ ನಾಮಪತ್ರ ಸಲ್ಲಿಸುವ ಕೊನೆಯ ದಿನವನ್ನು ನಾಳೆಯವರೆಗೆ ಮುಂದುವರಿಸಲಾಗಿದೆ. 20ರಂದು ನಾಮಪತ್ರಗಳ ಪರಿಶೀಲನೆ ನಡೆದರೆ, 23 ನಾಮಪತ್ರ ಹಿಂದೆಗೆದುಕೊಳ್ಳಲು ಕೊನೆಯ ದಿನವಾಗಿರುತ್ತದೆ. ಆ.31ರಂದು ಮತದಾನ (ಬೆಳಗ್ಗೆ 7 ರಿಂದ ಸಂಜೆ 5 ರವರೆಗೆ) ನಡೆಯಲಿದ್ದು, ಅಗತ್ಯ ಬಿದ್ದರೆ ಸೆ.2ರಂದು ಮರು ಮತದಾನ ಹಾಗೂ ಸೆ.3ರಂದು ಮತಗಳ ಎಣಿಕೆ ನಡೆಯಲಿದೆ.
ಜಿಲ್ಲೆಯಲ್ಲಿ 113 ನಾಮಪತ್ರ ಸಲ್ಲಿಕೆ: ಗುರುವಾರ ಸಂಜೆಯವರೆಗೆ ಉಡುಪಿ ಜಿಲ್ಲೆಯ ಉಡುಪಿ ನಗರಸಭೆ, ಕುಂದಾಪುರ ಮತ್ತು ಕಾರ್ಕಳ ಪುರಸಭೆ ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯತ್‌ಗಳಿಗೆ ಒಟ್ಟು 113 ಮಂದಿ ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ಉಡುಪಿ ನಗರಸಭೆಯ 35 ವಾರ್ಡುಗಳಿಗೆ ಸಂಬಂಧ ಪಟ್ಟಂತೆ 40 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಇವುಗಳಲ್ಲಿ ಕಾಂಗ್ರೆಸ್‌ನ 11, ಬಿಜೆಪಿಯ 24, ಜೆಡಿಎಸ್‌ನ4 ಹಾಗೂ ಇತರೆ ಒಬ್ಬರು ನಾಮಪತ್ರ ಸಲ್ಲಿಸಿದ್ದಾರೆ.
ಕುಂದಾಪುರ ಪುರಸಭೆಯ 23 ಸ್ಥಾನಗಳಿಗೆ 14 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಇವರಲ್ಲಿ ಕಾಂಗ್ರೆಸ್‌ನ 2, ಬಿಜೆಪಿ 4, ಜೆಡಿಎಸ್‌ನ 2, ಸಿಪಿಎಂನ 4 ಹಾಗೂ ಇತರೆ ಇಬ್ಬರು ಸೇರಿದ್ದಾರೆ.
ಕಾರ್ಕಳ ಪುರಸಭೆಯ 23 ಸ್ಥಾನಗಳಿಗೆ 17 ನಾಮಪತ್ರಗಳು ಸಲ್ಲಿಕೆಯಾಗಿದ್ದು ಕಾಂಗ್ರೆಸ್‌ನ 6, ಬಿಜೆಪಿಯ 8, ಜೆಡಿಎಸ್‌ನ 1 ಹಾಗೂ ಪಕ್ಷೇತರ ಇಬ್ಬರು ತಮ್ಮ ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ಸಾಲಿಗ್ರಾಮ ಪಟ್ಟಣ ಪಂಚಾಯತ್‌ನ 16 ಸ್ಥಾನಗಳಿಗೆ ಒಟ್ಟು 42 ಮಂದಿ ನಾಮಪತ್ರವನ್ನು ಸಲ್ಲಿಸಿದ್ದು, ಇವರಲ್ಲಿ ಕಾಂಗ್ರೆಸ್‌ನ 23, ಬಿಜೆಪಿಯ 16 ಹಾಗೂ ಇತರೆ ಮೂವರು ಸೇರಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಗರಸಭೆ ನಾಮಪತ್ರದ ವಿವರ:
ಉಡುಪಿ ನಗರಸಭೆಗೆ ಗುರುವಾರ ವಡಬಾಂಡೇಶ್ವರ ವಾರ್ಡ್‌ಗೆ ಜೆಡಿಎಸ್1, ಮಲ್ಪೆ ಸೆಂಟ್ರಲ್‌ಗೆ ಕಾಂಗ್ರೆಸ್ 1, ಬಿಜೆಪಿ 2, ಮೂಡಬೆಟ್ಟಿಗೆ ಬಿಜೆಪಿ 1, ಇತರೆ 1, ಗೋಪಾಲಪುರ ವಾರ್ಡಿಗೆ ಕಾಂಗ್ರೆಸ್ 1, ಬಿಜೆಪಿ2, ಕರಂಬಳ್ಳಿಗೆ ಕಾಂಗ್ರೆಸ್1, ಬಿಜೆಪಿ2, ಜೆಡಿಎಸ್1, ಈಶ್ವರ ನಗರ ಕ್ಕೆ ಕಾಂಗ್ರೆಸ್1, ಬಿಜೆಪಿ2, ಸಗ್ರಿ ವಾರ್ಡಿಗೆ ಕಾಂಗ್ರೆಸ್1, ಇಂದ್ರಾಳಿಗೆ ಕಾಂಗ್ರೆಸ್ 1, ಬಿಜೆಪಿ2, ಬಡಗಬೆಟ್ಟುಗೆ ಕಾಂಗ್ರೆಸ್1, ಬಿಜೆಪಿ1, ಚಿಟ್ಪಾಡಿಗೆ ಕಾಂಗ್ರೆಸ್1, ಬಿಜೆಪಿ1, ಕುಂಜಿಬೆಟ್ಟುಗೆ ಬಿಜೆಪಿ2 , ಕಡಿಯಾಳಿಗೆ ಕಾಂಗ್ರೆಸ್1, ಬಿಜೆಪಿ2, ತೆಂಕಪೇಟೆಗೆ ಬಿಜೆಪಿ1, ಒಳಕಾಡುಗೆ ಬಿಜೆಪಿ2, ಬೈಲೂರಿಗೆ ಬಿಜೆಪಿ2, ಅಜ್ಜರಕಾಡುಗೆ ಬಿಜೆಪಿ2, ಜೆಡಿಎಸ್1, ಶಿರಿಬೀಡುಗೆ ಜೆಡಿಎಸ್1, ಅಂಬಲಪಾಡಿ ವಾರ್ಡ್‌ಗೆ ಕಾಂಗ್ರೆಸ್‌ನಿಂದ 2 ನಾಮಪತ್ರ ಸೇರಿದಂತೆ ಒಟ್ಟು 40 ನಾಮಪತ್ರಗಳು ಸಲ್ಲಿಕೆಯಾಗಿವೆ.
ಉಡುಪಿನಗರಸೆಗೆ ಗುರುವಾರ ವಡಬಾಂಡೇಶ್ವರ ವಾರ್ಡ್‌ಗೆ ಜೆಡಿಎಸ್1, ಮಲ್ಪೆ ಸೆಂಟ್ರಲ್‌ಗೆ ಕಾಂಗ್ರೆಸ್ 1, ಬಿಜೆಪಿ 2, ಮೂಡಬೆಟ್ಟಿಗೆ ಬಿಜೆಪಿ 1, ಇತರೆ 1, ಗೋಪಾಲಪುರ ವಾರ್ಡಿಗೆ ಕಾಂಗ್ರೆಸ್ 1, ಬಿಜೆಪಿ2, ಕರಂಬಳ್ಳಿಗೆ ಕಾಂಗ್ರೆಸ್1, ಬಿಜೆಪಿ2, ಜೆಡಿಎಸ್1, ಈಶ್ವರ ನಗರ ಕ್ಕೆ ಕಾಂಗ್ರೆಸ್1, ಬಿಜೆಪಿ2, ಸಗ್ರಿ ವಾರ್ಡಿಗೆ ಕಾಂಗ್ರೆಸ್1, ಇಂದ್ರಾಳಿಗೆ ಕಾಂಗ್ರೆಸ್ 1, ಬಿಜೆಪಿ2, ಬಡಗಬೆಟ್ಟುಗೆ ಕಾಂಗ್ರೆಸ್1, ಬಿಜೆಪಿ1, ಚಿಟ್ಪಾಡಿಗೆ ಕಾಂಗ್ರೆಸ್1, ಬಿಜೆಪಿ1, ಕುಂಜಿಬೆಟ್ಟುಗೆ ಬಿಜೆಪಿ2 , ಕಡಿಯಾಳಿಗೆ ಕಾಂಗ್ರೆಸ್1, ಬಿಜೆಪಿ2, ತೆಂಕಪೇಟೆಗೆ ಬಿಜೆಪಿ1, ಒಳಕಾಡುಗೆ ಬಿಜೆಪಿ2, ಬೈಲೂರಿಗೆ ಬಿಜೆಪಿ2, ಅಜ್ಜರಕಾಡುಗೆ ಬಿಜೆಪಿ2, ಜೆಡಿಎಸ್1, ಶಿರಿಬೀಡುಗೆ ಜೆಡಿಎಸ್1, ಅಂಬಲಪಾಡಿ ವಾರ್ಡ್‌ಗೆ ಕಾಂಗ್ರೆಸ್‌ನಿಂದ 2 ನಾಮಪತ್ರ ಸೇರಿದಂತೆ ಒಟ್ಟು 40 ನಾಮಪತ್ರಗಳು ಸಲ್ಲಿಕೆಯಾಗಿವೆ.
ಸೆ.4ಕ್ಕೆ ಉಡುಪಿ ಜಿಪಂ ಸಾಮಾನ್ಯ ಸಭೆ
ಉಡುಪಿ ಜಿಪಂನ 13ನೇ ಸಾಮಾನ್ಯ ಸಭೆ ಸೆಪ್ಟಂಬರ್ ತಿಂಗಳ 4ರಂದು ಬೆಳಗ್ಗೆ 11 ಗಂಟೆಗೆ ಜಿಪಂ ಅಧ್ಯಕ್ಷ ದಿನಕರಬಾಬು ಅಧ್ಯಕ್ಷತೆ ಯಲ್ಲಿ ಮಣಿಪಾಲದ ಡಾ. ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆಯಲಿದೆ ಎಂದು ಜಿಪಂ ಸಿಇಒ ಅವರ ಪ್ರಕಟಣೆ ತಿಳಿಸಿದೆ.







