ಉರ್ದು ಅಕಾಡೆಮಿ ಅಧ್ಯಕ್ಷರ ಅಧಿಕಾರ ಸ್ವೀಕಾರ

ಬೆಂಗಳೂರು, ಆ.18: ರಾಜ್ಯ ಉರ್ದು ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಮುಬೀನ್ ಮುನವ್ವರ್ ಅಧಿಕಾರ ಸ್ವೀಕರಿಸಿದರು. ಅಕಾಡೆಮಿ ಹಂಗಾಮಿ ರಿಜಿಸ್ಟ್ರಾರ್ ಹಾಗೂ ಸರಕಾರದ ಅಧೀನ ಕಾರ್ಯದರ್ಶಿ ಅಕ್ರಮ್ ಪಾಷ ಅಧಿಕಾರ ಹಸ್ತಾಂತರಿಸಿದರು.
ಶನಿವಾರ ನಗರದ ರಿಚ್ಮಂಡ್ ಟೌನ್‌ನಲ್ಲಿರುವ ರಾಜ್ಯ ಹಜ್ ಸಮಿತಿಯ ಕಟ್ಟಡದಲ್ಲಿರುವ ಉರ್ದು ಅಕಾಡೆಮಿ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಅಧಿಕಾರ ಹಸ್ತಾಂತರ ಪ್ರಕ್ರಿಯೆ ನಡೆಯಿತು. ಈ ಸಂದರ್ಭದಲ್ಲಿ ಅಕಾಡೆಮಿಯ ಸದಸ್ಯರಾದ ಡಾ.ಮುಹಮ್ಮದ್ ಇಕ್ಬಾಲ್, ಮುಹಮ್ಮದ್ ಶಾಹಿದ್ ಖಾಝಿ, ಶಫೀಖ್ ಆಬಿದಿ ಅಲಿಪುರಿ, ಶೇಖ್ ಫಯಾಝುದ್ದೀನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Next Story





