ಇನ್ಫೋಸಿಸ್ ಸಿಎಫ್ಒ ರಂಗನಾಥ್ ರಾಜೀನಾಮೆ
ಮುಂಬೈ, ಆ.18: ಇನ್ಫೋಸಿಸ್ನ ಸಿಎಫ್ಒ (ಮುಖ್ಯ ಆರ್ಥಿಕ ಅಧಿಕಾರಿ) ಎಂ.ಡಿ.ರಂಗನಾಥ್ ತಮ್ಮ ಹುದ್ದೆಗೆ ನೀಡಿರುವ ರಾಜೀನಾಮೆಯನ್ನು ಆಡಳಿತ ಮಂಡಳಿ ಸ್ವೀಕರಿಸಿದೆ ಎಂದು ಸಂಸ್ಥೆಯ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಭಾರತದ ಎರಡನೇ ಅತೀ ದೊಡ್ಡ ಸಾಫ್ಟ್ವೇರ್ ಸೇವೆ ರಫ್ತುಗೊಳಿಸುವ ಸಂಸ್ಥೆಯಾಗಿರುವ ಇನ್ಫೋಸಿಸ್ನಲ್ಲಿ ಕಳೆದ 18 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ರಂಗನಾಥನ್ರನ್ನು ಸಂಸ್ಥೆಯ ಸಿಎಫ್ಒ ಆಗಿ 2015ರಲ್ಲಿ ನೇಮಿಸಲಾಗಿತ್ತು. ರಂಗನಾಥನ್ ರಾಜೀನಾಮೆಗೆ ಕಾರಣ ಏನೆಂಬುದನ್ನು ತಿಳಿಸಲಾಗಿಲ್ಲ. ಅವರು 2018ರ ನವೆಂಬರ್ 16ರವರೆಗೆ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ .ಈ ಹುದ್ದೆಗೆ ಸೂಕ್ತ ಅಭ್ಯರ್ಥಿಯ ಶೋಧನೆ ಆರಂಭಿಸಲಾಗಿದೆ ಎಂದು ಎಂದು ಸಂಸ್ಥೆಯ ಹೇಳಿಕೆ ತಿಳಿಸಿದೆ.
Next Story