ಮೈಸೂರು: ಕೌಟುಂಬಿಕ ಕಲಹ ಹಿನ್ನೆಲೆ; ಗೃಹಿಣಿ ಆತ್ಮಹತ್ಯೆ

ಮೈಸೂರು,ಆ.18: ಕೌಟುಂಬಿಕ ಕಲಹದಿಂದ ಬೇಸತ್ತ ಗೃಹಿಣಿಯೋರ್ವರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ ರಾಜರಾಜೇಶ್ವರಿ ನಗರದಲ್ಲಿ ನಡೆದಿದೆ.
ಮೃತರನ್ನು ಸೌಮ್ಯ (35) ಎಂದು ಗುರುತಿಸಲಾಗಿದ್ದು, ಕುಡುಕ ಪತಿಯ ದುರ್ವರ್ತನೆಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಸೌಮ್ಯಾರ ಪತಿ ಶ್ರೀಶೈಲ ಕುಡಿತದ ಚಟಕ್ಕೆ ಮನೆಯನ್ನು ಗಿರವಿ ಇಟ್ಟು ಲಕ್ಷಾಂತರ ಹಣ ಕಳೆದಿದ್ದ. ಅಲ್ಲದೆ ಆಸ್ತಿಪಾಸ್ತಿಯನ್ನೂ ಕಳೆದುಕೊಂಡಿದ್ದ. ಈ ವಿಚಾರದಲ್ಲಿ ಗಂಡ ಹೆಂಡಿರ ನಡುವೆ ಗಲಾಟೆ ನಡೆಯುತ್ತಿತ್ತು. ಗಲಾಟೆ ಹೆಚ್ಚಿದ ಹಿನ್ನೆಲೆಯಲ್ಲಿ ಬೇಸತ್ತ ಸೌಮ್ಯ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ಪತಿ ಶ್ರೀಶೈಲನನ್ನು ಸರಸ್ವತಿಪುರಂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Next Story





