1983ರ ಕ್ರಿಕೆಟ್ ವಿಶ್ವಕಪ್ ಗೆಲುವಿನ ಕುರಿತು ಬರಲಿದೆ ಸಿನೆಮಾ
ಕಪಿಲ್ ದೇವ್ ಮತ್ತು ಅವರ ಕೋಚ್ ಪಾತ್ರ ಮಾಡಲಿದ್ದಾರೆ ಈ ಇಬ್ಬರು ಸೂಪರ್ ಸ್ಟಾರ್ಗಳು !
1983ರಲ್ಲಿ ಭಾರತ ಕ್ರಿಕೆಟ್ ತಂಡ ಕ್ರಿಕೆಟ್ ವಿಶ್ವಕಪ್ ಗೆದ್ದ ಕಥೆಯಾಧರಿತ ನೂತನ ಚಿತ್ರ ನಿರ್ದೇಶಿಸಲು ನಿರ್ದೇಶಕ ಕಬೀರ್ ಖಾನ್ ಸಜ್ಜಾಗಿದ್ದಾರೆ ಎಂದು ತಿಳಿದು ಬಂದಿದೆ. ಈಗ ಚಿತ್ರದ ಪಾತ್ರಧಾರಿಗಳ ಕುರಿತ ಕುತೂಹಲಕ್ಕೆ ತೆರೆ ಬೀಳುವ ಸುದ್ದಿ ಬಂದಿದೆ. ಈ ಬಹುನಿರೀಕ್ಷಿತ ಚಿತ್ರಕ್ಕೆ ‘83’ ಎಂದು ನಾಮಕರಣ ಮಾಡಲಾಗಿದೆ. ಚಿತ್ರದಲ್ಲಿ ಭಾರತ ತಂಡದ ನಾಯಕ ಕಪಿಲ್ ದೇವ್ ಪಾತ್ರಕ್ಕೆ ಸೂಪರ್ ಸ್ಟಾರ್ ರಣವೀರ್ ಸಿಂಗ್ ಆಯ್ಕೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ನಿರಾಶೆ ಮೂಡಿಸುವ ‘ಸತ್ಯಮೇವ ಜಯತೇ’ ಇನ್ನೊಂದು ವಿಶೇಷವೆಂದರೆ ರಣವೀರ್ಗೆ ಕೋಚ್ ಪಾತ್ರದಲ್ಲಿ ಸದ್ಯದ ಬಾಲಿವುಡ್ನ ಹಾಟ್ ಸ್ಟಾರ್ ನವಾಝುದ್ದೀನ್ ಸಿದ್ದೀಕಿ ಬರಲಿದ್ದಾರೆ ಎಂಬುದು. ಇದು ನಿಜಕ್ಕೂ ಚಿತ್ರ ಅಭಿಮಾನಿಗಳಲ್ಲಿ ಪುಳಕ ತರುವ ವಿಷಯ.
ರಣವೀರ್ ಮತ್ತು ನವಾಝುದ್ದೀನ್ ಜೋಡಿ ಎಂದರೆ ನಿಜಕ್ಕೂ ಅದು ವಿಶೇಷ. ಇಬ್ಬರೂ ಅತ್ಯಂತ ಪ್ರತಿಭಾವಂತ ನಟರು. ಇಬ್ಬರೂ ಈಗ ಬಾಲಿವುಡ್ ನಲ್ಲಿ ಬೇಡಿಕೆಯ ನಟರು. ಹಾಗಾಗಿ ಈ ಇಬ್ಬರು ಅಸಾಮಾನ್ಯ ಪ್ರತಿಭೆಗಳ ಸಂಗಮ ನೋಡಲು ಚಿತ್ರ ರಸಿಕರು ಕಾಯುವುದು ಖಚಿತ.
ಇನ್ನೊಂದು ಮೂಲದ ಪ್ರಕಾರ ರಣವೀರ್ ಗೆ ತನ್ನ ಪಾತ್ರಕ್ಕಾಗಿ ಸಜ್ಜ್ಜಾಗಲು ಸ್ವತಃ ಕಪಿಲ್ ದೇವ್ ಸಹಾಯ ಮಾಡಲಿದ್ದಾರೆ. ಅಷ್ಟೇ ಅಲ್ಲ, ಚಿತ್ರದಲ್ಲಿ ಕ್ರಿಕೆಟ್ ತಂಡದ ಎಲ್ಲ ಸದಸ್ಯರ ಪಾತ್ರಧಾರಿಗಳಿಗೆ ‘83’ರ ತಂಡದಲ್ಲಿದ್ದ ಆಟಗಾರರೇ ಮಾಹಿತಿ, ಮಾರ್ಗದರ್ಶನ ನೀಡಲಿದ್ದಾರೆ . ಆ ಎಲ್ಲಾ ಆಟಗಾರರನ್ನು ಚಿತ್ರತಂಡ ಸಲಹೆಗಾರರಾಗಿ ತೆಗೆದುಕೊಂಡಿದೆ ಎಂದು ಹೇಳಲಾಗಿದೆ.
ಕಾದು ನೋಡೋಣ, ಈ ಚಿತ್ರ ಬಾಕ್ಸ್ ಆಫೀಸಲ್ಲಿ ಚಾಂಪಿಯನ್ ಆಗುತ್ತದೋ ಇಲ್ಲವೋ ಎಂದು.