Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಶರೀರದ ತೂಕ ಇಳಿಸುವುದು ಗಂಭೀರ ಆರೋಗ್ಯ...

ಶರೀರದ ತೂಕ ಇಳಿಸುವುದು ಗಂಭೀರ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು ಗೊತ್ತೇ....?

ವಾರ್ತಾಭಾರತಿವಾರ್ತಾಭಾರತಿ19 Aug 2018 3:49 PM IST
share
ಶರೀರದ ತೂಕ ಇಳಿಸುವುದು ಗಂಭೀರ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು ಗೊತ್ತೇ....?

ಅಂತರ್ಜಾಲದ ಯಾವುದೇ ಸರ್ಚ್ ಇಂಜಿನ್‌ನಲ್ಲಿ ‘ವೇಟ್ ಲಾಸ್’ ಎಂದು ಟೈಪ್ ಮಾಡಿದ ತಕ್ಷಣ ಸಾವಿರಾರು ಬ್ಲಾಗ್‌ಗಳು,ಲೇಖನಗಳು ಮತ್ತು ವೀಡಿಯೊಗಳು ಪ್ರತ್ಯಕ್ಷವಾಗುತ್ತವೆ. ಈ ಪೈಕಿ ಹೆಚ್ಚಿನವುಗಳಲ್ಲಿ ಸಮಾನ ಅಂಶವೆಂದರೆ ಅವೆಲ್ಲ ಶರೀರದ ತೂಕವನ್ನು ಇಳಿಸಿಕೊಳ್ಳುವುದು ಹೇಗೆ ಆರೋಗ್ಯಕರ ಮತ್ತು ಮುಖ್ಯವಾಗಿದೆ ಎನ್ನುವುದರ ಬಗ್ಗೆಯೇ ಹೇಳುತ್ತವೆ ಮತ್ತು ತೂಕವನ್ನು ಇಳಿಸಿಕೊಳ್ಳುವ ಬಗ್ಗೆ ಸಲಹೆಗಳನ್ನು ನೀಡುತ್ತವೆ. ಆದರೆ ಸೂಕ್ತವಾದ ವಿಧಾನವನ್ನು ಅನುಸರಿಸದಿದ್ದರೆ ಶರೀರದ ತೂಕವನ್ನು ಇಳಿಸಿಕೊಳ್ಳುವುದು ಹೇಗೆ ಅಪಾಯಕಾರಿಯಾಗಬಹುದು ಮತ್ತು ಹೇಗೆ ಗಂಭೀರ ಆರೋಗ್ಯ ಸಮಸ್ಯೆಗಳನ್ನುಂಟು ಮಾಡಬಹುದು ಎನ್ನುವ ಬಗ್ಗೆ ಮಾಹಿತಿಗಳು ಈ ಬ್ಲಾಗ್ ಅಥವಾ ಲೇಖನಗಳಲ್ಲಿ ಸಿಗುವುದು ಅಪರೂಪ.

ಆರೋಗ್ಯಕರ ದೇಹತೂಕವನ್ನು ಕಾಯ್ದುಕೊಳ್ಳುವುದು ಮತ್ತು ನಮ್ಮ ಬಾಡಿ ಮಾಸ್ ಇಂಡೆಕ್ಸ್(ಬಿಎಂಐ) ಅಥವಾ ಭೌತಿಕ ದ್ರವ್ಯರಾಶಿ ಸೂಚಿಯು ಸಾಮಾನ್ಯಕ್ಕಿಂತ ಹೆಚ್ಚಿದ್ದಾಗ ದೇಹತೂಕವನ್ನು ಇಳಿಸಿಕೊಳ್ಳಲು ಪ್ರಜ್ಞಾಪೂರ್ವಕ ಪ್ರಯತ್ನವನ್ನು ಮಾಡುವುದು ಆರೋಗ್ಯವಂತರಾಗಿರಲು ಉತ್ತಮ ಮಾರ್ಗವಾಗಿದೆ. ನಾವು ಅತಿಯಾದ ದೇಹತೂಕ ಅಥವಾ ಬೊಜ್ಜನ್ನು ಹೊಂದಿದ್ದರೆ ಅದು ಅಜೀರ್ಣದಂತಹ ಕಿರುಸಮಸ್ಯೆಗಳಿಂದ ಹಿಡಿದು ಹೃದ್ರೋಗಗಳವರೆಗೆ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು. ಹೀಗಾಗಿ ನಾವು ಅಗತ್ಯವಿದ್ದಾಗ ದೇಹತೂಕವನ್ನು ಇಳಿಸಿಕೊಳ್ಳಲು ಖಂಡಿತ ಪ್ರಯತ್ನಿಸಬೇಕು. ಆದರೆ ಅದನ್ನು ಸೂಕ್ತ ವಿಧಾನದಲ್ಲಿ ಮಾಡಬೇಕು,ಇಲ್ಲದಿದ್ದರೆ ಅದು ಅಪಾಯಕಾರಿಯಾಗಬಹುದು. ಈ ನಿಟ್ಟಿನಲ್ಲಿ ತಪ್ಪು ಹೆಜ್ಜೆಗಳು ಆರೋಗ್ಯಕ್ಕೆ ಹಾನಿಕರವಾಗಬಹುದು ಎನ್ನಲು ಕಾರಣಗಳಿಲ್ಲಿವೆ.

►ಸಾರ್ಕೊಪಿನಿಯಾ

ತ್ವರಿತವಾಗಿ ದೇಹತೂಕವನ್ನು ಇಳಿಸಿಕೊಳ್ಳಲು ಬಯಸುವವರು ಆಹಾರ ಸೇವನೆಯನ್ನು ತುಂಬ ಕಡಿಮೆ ಮಾಡುತ್ತಾರೆ ಮತ್ತು ಅತಿಯಾದ ವ್ಯಾಯಾಮದಲ್ಲಿ ತೊಡಗಿಕೊಳ್ಳುತ್ತಾರೆ. ಇದರಿಂದ ಅವರು ಬಯಸಿದ ಫಲಿತಾಂಶವೇನೋ ಸಿಗಬಹುದು,ಆದರೆ ಅವರು ‘ಸಾರ್ಕೊಪಿನಿಯಾ’ದಿಂದಲೂ ನರಳಬಹುದು. ಇದು ಶರೀರದಲ್ಲಿಯ ಮಾಂಸಖಂಡಗಳು ನಾಶಗೊಳ್ಳುವ ಸ್ಥಿತಿಯಾಗಿದ್ದು, ಸಾಕಷ್ಟು ಆಹಾರವನ್ನು ಸೇವಿಸದೆ ಹಸಿದುಕೊಂಡಿರುವುದು ಇದಕ್ಕೆ ಕಾರಣವಾಗಿದೆ. ಶರೀರಕ್ಕೆ ತನ್ನ ಕಾರ್ಯಚಟುವಟಿಕೆಗಳಿಗೆ ಆಹಾರದ ಮೂಲಕ ಶಕ್ತಿ ದೊರೆಯದಿದ್ದಾಗ ಅದು ಮಾಂಸಖಂಡಗಳನ್ನೇ ಬಳಸಿಕೊಳ್ಳಲು ಆರಂಭಿಸುತ್ತದೆ ಮತ್ತು ಈ ಅಪಾಯಕಾರಿ ಸ್ಥಿತಿಯನ್ನುಂಟು ಮಾಡುತ್ತದೆ.

►ಅಪೌಷ್ಟಿಕತೆ

ಇದು ಜನರು ಶೀಘ್ರ ದೇಹತೂಕ ಇಳಿಸಿಕೊಳ್ಳಲು ಹಸಿವೆಯಿಂದ ಇರುವಾಗ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆಯಾಗಿದೆ. ಶರೀರಕ್ಕೆ ಸಾಕಷ್ಟು ಪೌಷ್ಟಿಕಾಂಶಗಳು ಸಿಗದಿದ್ದಾಗ ಅದು ದುರ್ಬಲಗೊಳ್ಳುವುದು ಸಹಜವಾಗಿದೆ. ಇದು ಪೌಷ್ಟಿಕಾಂಶ ಕೊರತೆಗೆ ಕಾರಣವಾಗುತ್ತದೆ ಮತ್ತು ಗಂಭೀರ ಪ್ರಕರಣಗಳಲ್ಲಿ ಅಂಗಾಂಗ ವೈಫಲ್ಯಕ್ಕೂ ಕಾರಣವಾಗಬಹುದು.

►ಎಲೆಕ್ಟ್ರೋಲೈಟ್ ಅಸಮತೋಲನ

 ತ್ವರಿತವಾಗಿ ದೇಹತೂಕವನ್ನು ಇಳಿಸಿಕೊಳ್ಳಲು ಸ್ವಲ್ಪವೇ ಆಹಾರವನ್ನು ಸೇವಿಸುತ್ತಿದ್ದರೆ ಶರೀರಕ್ಕೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಖನಿಜಾಂಶಗಳು ದೊರೆಯುತ್ತವೆ. ಸೋಡಿಯಂ,ಗ್ಲುಕೋಸ್,ಪೊಟ್ಯಾಷಿಯಂ,ಕ್ಯಾಲ್ಸಿಯಂ,ಕಬ್ಬಿಣ ಇತ್ಯಾದಿಗಳಂತಹ ಖನಿಜಗಳು ಶರೀರಕ್ಕೆ ಸಾಕಷ್ಟು ಪ್ರಮಾಣದಲ್ಲಿ ದೊರೆಯದಿದ್ದಾಗ ಅದು ಎಲೆಕ್ಟ್ರೋಲೈಟ್ ಅಥವಾ ವಿದ್ಯುದ್ವಿಚ್ಛೇದಗಳ ಅಸಮತೋಲನವನ್ನುಂಟು ಮಾಡುತ್ತದೆ ಮತ್ತು ಇದು ವಾಂತಿ,ಜ್ವರ,ಅತಿಸಾರದಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ.

►ಪಿತ್ತಕಲ್ಲುಗಳು

ಪಿತ್ತಕಲ್ಲುಗಳು ಸಾಮಾನ್ಯವಾಗಿ ಬೊಜ್ಜು ಅಥವಾ ಅತಿಯಾದ ತೂಕವನ್ನು ಹೊಂದಿರುವವರಲ್ಲಿ ಕಾಣಿಸಿಕೊಳ್ಳುತ್ತವೆ. ಆದರೆ ಕೆಲವು ಪ್ರಕರಣಗಳಲ್ಲಿ,ಜನರು ದೇಹತೂಕವನ್ನು ಇಳಿಸಿಕೊಳ್ಳಲು ಅನಾರೋಗ್ಯಕರ ವಿಧಾನವನ್ನು ಅನುಸರಿಸಿದಾಗ ಶರೀರದಲ್ಲಿಯ ಪಿತ್ತರಸವು ಸೂಕ್ತವಾಗಿ ವಿಲೇವಾರಿಯಾಗುವುದಿಲ್ಲ. ಇದರಿಂದಾಗಿ ಯಕೃತ್ತಿನಲ್ಲಿಯ ಪಿತ್ತರಸವು ಗಟ್ಟಿಯಾಗುತ್ತದೆ ಮತ್ತು ಪಿತ್ತಕೋಶದಲ್ಲಿ ಕಲ್ಲುಗಳ ರೂಪದಲ್ಲಿ ಸಂಗ್ರಹಗೊಳ್ಳುತ್ತದೆ. ಇದನ್ನೇ ನಾವು ಪಿತ್ತಕಲ್ಲುಗಳು ಎಂದು ಕರೆಯುತ್ತೇವೆ. ಇವುಗಳನ್ನು ನಿವಾರಿಸಲು ಶಸ್ತ್ರಚಿಕಿತ್ಸೆ ಅಗತ್ಯವಾಗಬಹುದು.

►ಹೃದ್ರೋಗಗಳು

ಶರೀರದ ತೂಕವನ್ನು ಇಳಿಸಿಕೊಳ್ಳಲು ಆಹಾರ ಸೇವನೆಯನ್ನು ತುಂಬ ಕಡಿಮೆ ಮಾಡಿದಾಗ ಶರೀರಕ್ಕೆ ಸಾಕಷ್ಟು ಪೌಷ್ಟಿಕಾಂಶಗಳು ದೊರೆಯುವುದಿಲ್ಲ ಮತ್ತು ಇದರಿಂದ ರಕ್ತದೊತ್ತಡವು ತುಂಬ ಕಡಿಮೆಯಾಗುತ್ತದೆ. ಇಂತಹ ಸ್ಥಿತಿಯಲ್ಲಿ ಶರೀರದ ವಿವಿಧ ಭಾಗಗಳಿಗೆ ರಕ್ತವನ್ನು ಪೂರೈಸಲು ಹೃದಯವು ಹೆಚ್ಚು ಶ್ರಮಿಸಬೇಕಾಗುತ್ತದೆ. ಇದು ಹಲವಾರು ಹೃದ್ರೋಗಗಳಿಗೆ ಮತ್ತು ಹೃದಯ ವೈಫಲ್ಯಕ್ಕೂ ಕಾರಣವಾಗಬಹುದು.

►ಋತುಚಕ್ರದಲ್ಲಿ ಏರುಪೇರು.

  ಮಹಿಳೆಯರು ತೂಕವನ್ನು ಇಳಿಸಿಕೊಳ್ಳುವ ಭರದಲ್ಲಿ ಆಹಾರ ಸೇವನೆಯನ್ನು ಕಡಿಮೆ ಮಾಡಿದಾಗ ಅಥವಾ ಹಣ್ಣುಗಳು ಮತ್ತು ತರಕಾರಿಗಳನ್ನು ಮಾತ್ರ ಸೇವಿಸುತ್ತಿದ್ದರೆ ಅದು ಋತುಚಕ್ರಕ್ಕೆ ಮತ್ತು ಫಲವತ್ತತೆಗೆ ಗಂಭೀರ ಹಾನಿಯನ್ನುಂಟು ಮಾಡಬಹುದು. ಶರೀರಕ್ಕೆ ಸಾಕಷ್ಟು ಪೌಷ್ಟಿಕಾಂಶಗಳು ಸಿಗದಿದ್ದಾಗ ಹಾರ್ಮೋನ್‌ಗಳ ಅಸಮತೋಲನವುಂಟಾಗುತ್ತದೆ ಮತ್ತು ಇದು ಋತುಚಕ್ರದಲ್ಲಿ ಏರುಪೇರುಗಳಿಗೆ ಕಾರಣವಾಗುತ್ತದೆ.

►ಮಲಬದ್ಧತೆ

ಜನರು ತ್ವರಿತವಾಗಿ ದೇಹತೂಕವನ್ನು ಇಳಸಿಕೊಳ್ಳಲು ಸರಿಯಾದ ಆಹಾರಕ್ರಮವನ್ನು ಅನುಸರಿಸದಿದ್ದಾಗ ಅದು ಅಜೀರ್ಣ ಮತ್ತು ಮಲಬದ್ಧತೆಯನ್ನುಂಟು ಮಾಡುತ್ತದೆ. ಶರೀರಕ್ಕೆ ಸಾಕಷ್ಟು ನಾರು ದೊರೆಯದಿದ್ದಾಗ ಮಲವು ಕರುಳಿನಲ್ಲಿ ಗಟ್ಟಿಯಾಗುತ್ತದೆ ಮತ್ತು ಇದು ಮಲಬದ್ಧತೆಗೆ ಕಾರಣವಾಗುತ್ತದೆ.

►ಖಿನ್ನತೆ

 ಖಿನ್ನತೆ ಗಂಭೀರ ಮಾನಸಿಕ ರೋಗವಾಗಿದೆ. ಕಡಿಮೆ ಆಹಾರ ಸೇವನೆಗೂ ಖಿನ್ನತೆಗೂ ಏನು ಸಂಬಂಧ ಎಂದು ಕೆಲವರು ಪ್ರಶ್ನಿಸಬಹುದು. ಆದರೆ ಕಡಿಮೆ ಆಹಾರ ಸೇವನೆಯಿಂಂದ ಮಿದುಳಿಗೆ ಸಾಕಷ್ಟು ಪೌಷ್ಟಿಕಾಂಶಗಳು ದೊರೆಯುವುದಿಲ್ಲ. ಇದು ಮಿದುಳಿನ ರಾಸಾಯನಿಕಗಳಲ್ಲಿ ಅಸಮತೋಲನನ್ನುಂಟು ಮಾಡಿ ಖಿನ್ನತೆ ಮತ್ತು ಉದ್ವೇಗಕ್ಕೆ ಕಾರಣವಾಗುತ್ತದೆ.

►ಕ್ಯಾನ್ಸರ್

ಕಡಿಮೆ ಆಹಾರ ಸೇವನೆಯಿಂದ ಶರೀರವು ಪೌಷ್ಟಿಕಾಂಶಗಳಿಂದ ವಂಚಿತವಾದಾಗ ಕೆಲವು ರಾಸಾಯನಿಕ ಬದಲಾವಣೆಗಳಿಂದಾಗಿ ಸ್ತನ ಕ್ಯಾನ್ಸರ್,ಮೂತ್ರಪಿಂಡಕ್ಯಾನ್ಸರ್,ಕರುಳಿನ ಕ್ಯಾನ್ಸರ್‌ನಂತಹ ಕೆಲವು ವಿಧಗಳ ಕ್ಯಾನ್ಸರ್‌ವುಂಟಾಗಬಹುದು. ಜಂಕ್ ಫುಡ್ ಮತ್ತು ಸಂಸ್ಕರಿತ ಆಹಾರಗಳನ್ನು ಸುದೀರ್ಘ ಅವಧಿಯಿಂದ ಸೇವಿಸುತ್ತಿದ್ದರೆ ಅದರಿಂದ ಎಲ್ಲ ರಾಸಾಯನಿಕಗಳು ಶರೀರದ ಕೊಬ್ಬು ಕೋಶಗಳಲ್ಲಿ ಸಂಗ್ರಹವಾಗಿರುತ್ತವೆ ಎನ್ನುವುದನ್ನು ಇಲ್ಲಿ ಗಮನಿಸಬೇಕು. ದೇಹತೂಕವನ್ನು ಕಡಿಮೆ ಮಾಡಿಕೊಳ್ಳುವ ಸಂದರ್ಭದಲ್ಲಿ ಕೊಬ್ಬು ಶಕ್ತಿಯಾಗಿ ಪರಿವರ್ತನೆಗೊಳ್ಳುತ್ತದೆ ಮತ್ತು ಕೊಬ್ಬು ಕೋಶಗಳಲ್ಲಿ ಸಂಗ್ರಹಗೊಂಡಿರುವ ವಿಷವಸ್ತುಗಳು ಬಿಡುಗಡೆಗೊಳ್ಳುತ್ತವೆ. ಈ ವಿಷವಸ್ತುಗಳು ಅಂತಿಮವಾಗಿ ಕ್ಯಾನ್ಸರ್‌ಗೆ ಕಾರಣವಾಗುತ್ತವೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X