Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಮಾರ್ಕ್ಸ್‌ವಾದ ಸರ್ವಕಾಲಕ್ಕೂ ಪ್ರಸ್ತುತ:...

ಮಾರ್ಕ್ಸ್‌ವಾದ ಸರ್ವಕಾಲಕ್ಕೂ ಪ್ರಸ್ತುತ: ಅದಮಾರು ಶ್ರೀಪತಿ ಆಚಾರ್ಯ

‘ಮಾರ್ಕ್ಸ್200- ಕ್ಯಾಪಿಟಲ್ 150 ಮಾಲಿಕೆ’ಯ ಪುಸ್ತಕಗಳ ಬಿಡುಗಡೆ- ವಿಚಾರ ಸಂಕಿರಣ

ವಾರ್ತಾಭಾರತಿವಾರ್ತಾಭಾರತಿ19 Aug 2018 5:49 PM IST
share
ಮಾರ್ಕ್ಸ್‌ವಾದ ಸರ್ವಕಾಲಕ್ಕೂ ಪ್ರಸ್ತುತ: ಅದಮಾರು ಶ್ರೀಪತಿ ಆಚಾರ್ಯ

ಮಂಗಳೂರು, ಆ.19: ಮಾರ್ಕ್ಸ್‌ವಾದ ಅಪ್ರಸ್ತುತವೆಂದು ದೇಶಾದ್ಯಂತ ಗೇಲಿ ಮಾಡಲಾಗುತ್ತಿದೆ. ಕಳೆದ 60-70 ವರ್ಷಗಳಿಂದಲೂ ಟೀಕಿಸುವವರಿದ್ದಾರೆ. ಆದರೆ ಮಾರ್ಕ್ಸ್‌ವಾದ ಸರ್ವಕಾಲಕ್ಕೂ ಪ್ರಸ್ತುತ ಎಂದು ಅದಮಾರು ಶ್ರೀಪತಿ ಆಚಾರ್ಯ ತಿಳಿಸಿದ್ದಾರೆ.

ನಗರದ ಕರ್ನಾಟಕ ಬ್ಯಾಂಕ್ ನೌಕರರ ಸಂಘ ಸಭಾಂಗಣದಲ್ಲಿ ಕ್ರಿಯಾ ಪ್ರಕಾಶನ ಮತ್ತು ನವಕರ್ನಾಟಕ ಪ್ರಕಾಶನಗಳ ಸಂಯುಕ್ತಾಶ್ರಯದಲ್ಲಿ ರವಿವಾರ ಬೆಳಗ್ಗೆ ಹಮ್ಮಿಕೊಳ್ಳಲಾಗಿದ್ದ ‘ಮಾರ್ಕ್ಸ್ 200- ಕ್ಯಾಪಿಟಲ್ 150 ಮಾಲಿಕೆ’ಯ ಪುಸ್ತಕಗಳ ಬಿಡುಗಡೆ- ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಎಡಪಂಥೀಯ ಪಕ್ಷಗಳು ಸೋಲನ್ನನುಭವಿಸಿವೆ. ಮಾರ್ಕ್ಸ್‌ವಾದ ಸೋಲುತ್ತಿದೆ ಎಂದು ಧೃತಿಗೆಡುವ ಅಗತ್ಯವಿಲ್ಲ. ದೈರ್ಯವಾಗಿ ಮಾರ್ಕ್ಸ್‌ವಾದವನ್ನು ಸಮರ್ಥಿಸುಕೊಳ್ಳುವ ಕೆಲಸಕ್ಕೆ ಮುಂದಾಗಬೇಕು. ಡಾರ್ವಿನ್ ಸಿದ್ಧಾಂತ ಎಲ್ಲ ವಿಜ್ಞಾನಗಳ ವಿಜ್ಞಾನವಾಗಿದೆ. ಪ್ರಯೋಗ ಸೋಲಬಹುದು. ಆದರೆ ವಿಜ್ಞಾನ ಎಂದೂ ಸೋಲುವುದಿಲ್ಲ ಎಂದು ಹೇಳಿದರು.

ಸೋವಿಯತ್ ಕ್ರಾಂತಿ ಆಗದಿದ್ದರೆ ಮಾರ್ಕ್ಸ್‌ವಾದವನ್ನು ಹುಟ್ಟುಹಾಕಲಾಗುತ್ತಿರಲಿಲ್ಲ. ಮಾರ್ಕ್ಸ್‌ವಾದಕ್ಕೆ ಸಂಬಂಧಿಸಿದ ಲಕ್ಷಾಂತರ ಪುಸ್ತಕಗಳನ್ನು ಪ್ರಕಟಿಸಿ ಚಿಕ್ಕಾಸಿನಲ್ಲಿ ವಿತರಿಸಲಾಗುತ್ತಿದೆ ಎಂದರು.

ಬೆಂಗಳೂರಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಬೀದಿಗಿಳಿದು ಪ್ರತಿಭಟನೆ ಮಾಡಿದರು. ಹಾಗೆಯೇ ಮಹಾರಾಷ್ಟ್ರದಲ್ಲಿ ಸಹಸ್ರ ರೈತರು ಪಾದಯಾತ್ರೆ ಮಾಡಿ ಪ್ರತಿಭಟಿಸಿದರೂ ಸರಕಾರಗಳು ಸರಿಯಗಿ ಸ್ಪಂದಿಸಲಿಲ್ಲ. ಮಾರ್ಕ್ಸ್‌ವಾದ ಕೆಲವೆಡೆ ವಿಫಲವಾಗಿರಬಹುದು. ಆದರೆ ಮುಂದಿನ ದಿನಗಳಲ್ಲಿ ದೃಢವಾಗಿ ಬೇರೂರಲಿದೆ ಎಂದು ಆಶಯ ವ್ಯಕ್ತಪಡಿಸಿದರು.

‘ಬಂಡವಾಳದ ಕ್ರೌರ್ಯ’ ಎಂಬ ವಿಷಯದಲ್ಲಿ ಬೆಂಗಳೂರಿನಲ್ಲಿ ಉಪನ್ಯಾಸ ನೀಡಿದ ಪ್ರಗತಿಪರ ಚಿಂತಕ ಜಿ.ರಾಜಶೇಖರ್, ಸ್ವಾತಂತ್ರ ಎನ್ನುವುದು ಕೇವಲ ಭ್ರಮೆಯಾಗಿದೆ. ಬ್ರಿಟಿಷರ ಕೈಯಿಂದ ಕಿತ್ತುಕೊಂಡು ಈಗ ನಮ್ಮವರ ಕೈಯಲ್ಲೇ ಅಧಿಕಾರವಿದೆ. ಆದರೆ ಅಧಿಕಾರ ಬಂಡವಾಳಶಾಹಿಗಳ ಕೈಗೊಂಬೆಯಾಗಿದೆ. ಸಂಪತ್ತು ಮತ್ತು ಅಧಿಕಾರವನ್ನು ಸಂಪಾದಿಸಿದವರು ಉಳ್ಳವರೆನಿಸಿಕೊಳ್ಳುತ್ತಾರೆ. ಇವರೆಲ್ಲ ಕಾರ್ಮಿಕರು, ಬಡವರು, ದಲಿತರನ್ನು ಹತ್ತಿಕ್ಕುತ್ತಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ, ಕಾಂಗ್ರೆಸ್, ಜೆಡಿಯು ಮತ್ತಿತರ ರಾಷ್ಟ್ರೀಯ ಪಕ್ಷಗಳು ಅಭಿವೃದ್ಧಿಯ ಹೆಸರಲ್ಲಿ ಪರಿಸರವನ್ನು ಹಾಳುಗೆಡವುತ್ತಿವೆ. ಬಂಡವಾಳಶಾಹಿಗಳ ಹಿಂಸೆಗೆ ಜನರು ತತ್ತರಿಸಿ ಹೋಗಿದ್ದಾರೆ. ಇದಕ್ಕೆ ದೇಶದ ಜನತೆಯ ಸಮ್ಮತಿ ಇರುವುದೂ ಸತ್ಯವಾಗಿದೆ. ಇದೊಂದು ದೇಶದ ದೊಡ್ಡ ದುರಂತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ವಸಂತರಾಜ ಎನ್.ಕೆ. ಮಾತನಾಡಿ, ದೇಶದಲ್ಲಿ ಬಂಡವಾಳಶಾಹಿತ್ವವನ್ನು ಕೊನೆಗಾಣಿಸುವ ಅಗತ್ಯವಿದೆ. ಹಾಗಾಗಿ ಕನ್ನಡದಲ್ಲಿ ಮಾರ್ಕ್ಸ್‌ವಾದದ ಕುರಿತ ಪುಸ್ತಕಗಳ ಮಾಲೆಯನ್ನು ಹೊರತರಲಾಗುತ್ತಿದೆ. ಒಟ್ಟು ಏಳು ಪ್ರಕಟನೆಗಳನ್ನು ಬಿಡಿಯಾಗಿ ಪ್ರಕಟಿಸಲಾಗುತ್ತಿದೆ. ಜೊತೆಗೆ ಕಾರ್ಲ್ ಮಾಕ್ಸ್‌ನ ಕ್ಯಾಪಿಟಲ್ ಪುಸ್ತಕದ ಮೊದಲ ಸಂಪುಟವನ್ನು ಈ ವರ್ಷದಲ್ಲಿ ಬಿಡುಗಡೆ ಮಾಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

‘ಕಾರ್ಲ್‌ಮಾರ್ಕ್ ಪ್ರಾನ್ಸ್ ನಲ್ಲಿ ಅಂತರ್ಯುದ್ಧ’, ‘ಕಾರ್ಲ್‌ಮಾರ್ಕ್ಸ್ ತತ್ವಶಾಸ್ತ್ರದ ದಾರಿದ್ರ್ಯ’, ಕಾರ್ಲ್‌ಮಾರ್ಕ್ಸ್ ರಾಜಕೀಯ ಅರ್ಥಶಾಸ್ತ್ರದ ವಿಮರ್ಶೆಗೊಂದು ಕೊಡುಗೆ’, ‘ಭಾರತವನ್ನು ಕುರಿತು ಮಾರ್ಕ್ಸ್’ ಎಂಬ ನಾಲ್ಕು ಪುಸ್ತಕಗಳನ್ನು ಅದಮಾರು ಶ್ರೀಪತಿ ಆಚಾರ್ಯ ಲೋಕಾರ್ಪಣೆಗೊಳಿಸಿದರು.
 ಪುಸ್ತಕ ಬಿಡುಗಡೆ ಮತ್ತು ವಿಚಾರ ಸಂಕಿರಣ ಕಾರ್ಯಕ್ರಮದ ಅಧ್ಯಕ್ಷತೆಯನ್ನು ‘ಮಾರ್ಕ್ಸ್200- ಕ್ಯಾಪಿಟಲ್ 150 ಮಾಲಿಕೆ’ಯ ಪ್ರಧಾನ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ ವಹಿಸಿದ್ದರು.

ಕಾರ್ಯಕ್ರಮಕ್ಕೂ ಮೊದಲು ‘ಪ್ಯಾರೀಸ್ ಕಮ್ಯೂನ್’ ಫಿಲಂನ್ನು 30 ನಿಮಿಷಗಳ ಕಾಲ ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರೊ.ಕೆ.ರಾಜೇಂದ್ರ ಉಡುಪ, ಪ್ರೊ.ಜಿ.ಭಾಸ್ಕರ್ ಮಯ್ಯ, ನವಕರ್ನಾಟಕ ನಿರ್ದೇಶಕ ಮಂಡಳಿಯ ಸದಸ್ಯ ಪಿ.ವಿ.ಲೋಕೇಶ್, ವಾಸುದೇವ ಉಚ್ಚಿಲ, ಮುನೀರ್ ಕಾಟಿಪಳ್ಳ ಮತ್ತಿತರರು ಉಪಸ್ಥಿತರಿದ್ದರು.

ಸಮದರ್ಶಿ ವೇದಿಕೆಯ ಎಚ್.ವಿ. ರಾವ್ ಸ್ವಾಗತಿಸಿದರು. ಮನೋಜ್‌ಕುಮಾರ್ ವಾಮಂಜೂರು ಕವನ ವಾಚಿಸಿದರು. ಕಲ್ಲೂರು ನಾಗೇಶ್ ನಿರೂಪಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X