‘ಗಂಜಿ ಕೇಂದ್ರ’ ಪದ ಬಳಕೆ ಬೇಡ : ವಾರ್ತಾ ಇಲಾಖೆ ನಿರ್ದೇಶಕ ವಿಶುಕುಮಾರ್

ಬೆಂಗಳೂರು, ಆ. 19: ನೆರೆ ಪೀಡಿತ ಪ್ರದೇಶಗಳಲ್ಲಿನ ‘ನಿರಾಶ್ರಿತರ ಪರಿಹಾರ ಕೇಂದ್ರ’ಗಳನ್ನು ಮಾಧ್ಯಮಗಳಲ್ಲಿ ‘ಗಂಜಿ ಕೇಂದ್ರ’ ಎಂದು ಬರೆಯುತ್ತಿರುವ ಬಗ್ಗೆ ನಿರಾಶ್ರಿತರಿಂದ ಆಕ್ಷೇಪಣೆ ಕೇಳಿ ಬರುತ್ತಿವೆ. ಆದುದರಿಂದ ಮಾಧ್ಯಮಗಳು ನಿರಾಶ್ರಿತರ ಪರಿಹಾರ ಕೇಂದ್ರ ಎಂದೇ ಬಳಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್ ಮನವಿ ಮಾಡಿದ್ದಾರೆ.
ಮಾಧ್ಯಮಗಳು ನಿರಾಶ್ರಿತರ ಭಾವನೆಗಳಿಗೆ ಬೆಲೆ ನೀಡಿ ಇನ್ನು ಮುಂದೆ ಗಂಜಿ ಕೇಂದ್ರ ಎನ್ನುವುದರ ಬದಲಿಗೆ ನಿರಾಶ್ರಿತರ ಪರಿಹಾರ ಕೇಂದ್ರ ಎನ್ನುವ ಪದ ಬಳಸಬೇಕು. ಆಂಗ್ಲ ಭಾಷೆಯಲ್ಲಿ ಕೂಡ ಇದನ್ನು ರಿಲೀಫ್ ಸೆಂಟರ್ (Relief center) ಎಂದೇ ಕರೆಯಲಾಗುತ್ತಿದೆ. ಭಾಷಾಂತರದ ದೃಷ್ಟಿಯಿಂದ ಇದು ಸರಿ ಹೊಂದುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





