ಈದುಲ್ ಅಝ್ ಹಾ ರಜೆಯನ್ನು ಮತ್ತೆ ಆ.22ಕ್ಕೆ ಬದಲಿಸಿದ ಕೇಂದ್ರ ಸರಕಾರ

ಹೊಸದಿಲ್ಲಿ,ಆ.20: ಕೇಂದ್ರ ಸರಕಾರವು ದಿಲ್ಲಿಯಲ್ಲಿನ ತನ್ನ ಕಚೇರಿಗಳಿಗಾಗಿ ಈದುಲ್ ಅಝ್ ಹಾ ರಜೆಯನ್ನು ಸೋಮವಾರ ಮತ್ತೆ ಆ.22ಕ್ಕೆ ಬದಲಿಸಿದೆ.
ದೇಶದ ವಿವಿಧ ಭಾಗಗಳಲ್ಲಿ ಚಂದ್ರದರ್ಶನದ ಮಾಹಿತಿಯನ್ನು ನೀಡುವ ದಿಲ್ಲಿ ಜಾಮಾ ಮಸೀದಿಯ ಶಾಹಿ ಇಮಾಮ್ ಸೈಯದ್ ಅಹ್ಮದ್ ಬುಖಾರಿ ಅವರ ನೇತೃತ್ವದ ರುಯಿಯಾತ್ ಹಿಲಾಲ್(ಚಂದ್ರದರ್ಶನವನ್ನು ನಿರ್ಧರಿಸುವ ಸಮಿತಿ)ನ ವರದಿಯ ಆಧಾರದಲ್ಲಿ ಈದುಲ್ ಅಝ್ ಹಾ (ಬಕ್ರೀದ್) ಪ್ರಯುಕ್ತ ದಿಲ್ಲಿ/ಹೊಸದಿಲ್ಲಿಯ ಎಲ್ಲ ಕೇಂದ್ರ ಸರಕಾರಿ ಆಡಳಿತಾತ್ಮಕ ಕಚೇರಿಗಳಿಗೆ ಆ.23ರ ಬದಲು ಆ.22ರಂದು ರಜೆ ನೀಡಲು ನಿರ್ಧರಿಸಲಾಗಿದೆ ಎಂದು ಸಿಬ್ಬಂದಿ ಸಚಿವಾಲಯದ ಹೇಳಿಕೆಯು ತಿಳಿಸಿದೆ.
ಸರಕಾರವು ಈ ಹಿಂದೆ ಘೋಷಿಸಿದ್ದ ಆ.22ರ ಈದುಲ್ ಅಝ್ ಹಾ ರಜೆಯನ್ನು ಆ.23ಕ್ಕೆ ಬದಲಿಸಿ ಆ.14ರಂದು ಆದೇಶವನ್ನು ಹೊರಡಿಸಿತ್ತು. ಈ ಆದೇಶವನ್ನು ಹಿಂದೆಗೆದುಕೊಂಡಿರುವುದಾಗಿ ಹೇಳಿಕೆಯು ತಿಳಿಸಿದೆ.
Next Story





