Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಪೌರಾಣಿಕ ನದಿಯ ಶೋಧದ ಹಿಂದಿನ ತರ್ಕವನ್ನು...

ಪೌರಾಣಿಕ ನದಿಯ ಶೋಧದ ಹಿಂದಿನ ತರ್ಕವನ್ನು ಹುಡುಕಲು ‘ಸರ್ಚಿಂಗ್ ಫಾರ್ ಸರಸ್ವತಿ’ಯ ಯತ್ನ

ನಿರ್ದೇಶಕ ಅಮಿತ್ ಮಧೇಸಿಯಾ

ವಾರ್ತಾಭಾರತಿವಾರ್ತಾಭಾರತಿ20 Aug 2018 9:52 PM IST
share

ಹೊಸದಿಲ್ಲಿ,ಆ.20: ತನ್ನ ಸಾಕ್ಷಚಿತ್ರವು ಈಗಿರುವ ನದಿಗಳೇ ಸಾಯುವ ಸ್ಥಿತಿಯಲ್ಲಿರುವಾಗ ಪೌರಾಣಿಕ ನದಿಯೊಂದನ್ನು ಹುಡುಕಲು ಸರಕಾರವು 50 ಕೋ.ರೂ.ಗಳನ್ನು ವ್ಯಯಿಸಲು ಹೊರಟಿರುವ ನಮ್ಮ ಇಂದಿನ ದಿನಗಳ ರೂಪಕವಾಗಿದೆ ಎಂದು ‘ಸರ್ಚಿಂಗ್ ಫಾರ್ ಸರಸ್ವತಿ(ಸರಸ್ವತಿಗಾಗಿ ಶೋಧ)’ಯ ನಿರ್ದೇಶಕ ಅಮಿತ್ ಮಧೇಸಿಯಾ ಹೇಳಿದ್ದಾರೆ.

ಅದು ಕಾಂಗ್ರೆಸ್ ಅಥವಾ ಬಿಜೆಪಿ ಆಗಿರಲಿ,ಸರಕಾರಗಳು ಸಾವಿರಾರು ವರ್ಷಗಳ ಹಿಂದೆ ಕಣ್ಮರೆಯಾಗಿದೆ ಎನ್ನಲಾಗಿರುವ ಸರಸ್ವತಿಯನ್ನು ಕಂಡು ಹಿಡಿಯಲು ಪ್ರಯತ್ನಿಸುತ್ತಲೇ ಇವೆ ಎಂದು ಹೇಳಿದ ಅವರು,ತಾನು ಮತ್ತು ತನ್ನ ಸಹ ನಿರ್ದೇಶಕಿ ಶಿರ್ಲೆ ಅಬ್ರಹಾಂ ಕೆಲವು ಸಮಯ ಈ ಕಥೆಯ ಹಿಂದೆಯೇ ಬಿದ್ದಿದ್ದೆವು. 2015ರಲ್ಲಿ ಹರ್ಯಾಣದ ಯಮುನಾ ನಗರ ಜಿಲ್ಲೆಯ ಮುಗಲ್ವಾಲಿ ಗ್ರಾಮದಲ್ಲಿ ಸರಸ್ವತಿ ನದಿಯು ಪತ್ತೆಯಾಗಿದೆ ಎಂಬ ವರದಿಯನ್ನು ಓದಿದಾಗ ತಮ್ಮ ಕುತೂಹಲ ಅಸಮಾಧಾನಕ್ಕೆ ಬದಲಾಗಿತ್ತು ಎಂದರು. ಇದರ ಫಲಿತಾಂಶವೇ 20 ನಿಮಿಷಗಳ ‘ಸರ್ಚಿಂಗ್ ಫಾರ್ ಸರಸ್ವತಿ’ ಆಗಿದೆ ಎಂದು ತಿಳಿಸಿದರು.

ನ್ಯೂಯಾರ್ಕ್ ಟೈಮ್ಸ್ ತನ್ನ ಒಪಿ-ಡಾಕ್ಸ್ ವಿಭಾಗದಲ್ಲಿ ಈ ಸಾಕ್ಷಚಿತ್ರವನ್ನು ಬಿಡುಗಡೆಗೊಳಿಸಿದೆ.

ಚಿತ್ರವು ನಮ್ಮ ಕಾಲದ ರೂಪಕವಾಗಿದೆ. ನಾವೂ ಕೇವಲ ಊಹಿಸಬಹುದಾದ ವಿಷಯಗಳನ್ನು ಪತ್ತೆ ಹಚ್ಚಲು ನಾವು ಪ್ರಯತ್ನಿಸುತ್ತಿದ್ದೇವೆ. ನಾವು ಮಹಾನ್ ಜನರು,ಭಾರತೀಯರು ಮತ್ತು ಹಿಂದುಗಳು ಮಹಾನ್ ಜನರು ಎಂದು ಹೇಳಿಕೊಳ್ಳಲು ನಾವು ಇವುಗಳಿಗೆ ಜೀವ ನೀಡಲು ಪ್ರಯತ್ನಿಸುತ್ತಿದ್ದೇವೆ. ಹಾಗೆ ಹೇಳುವುದು ನಮಗೆ ಸಮಸ್ಯೆಯಾಗಬಾರದು,ಆದರೆ ಅದಕ್ಕಾಗಿ ನಾವು ವಿನೂತನವಾದವುಗಳನ್ನು ಸಾಧಿಸಬೇಕು ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ ಮಧೇಸಿಯಾ,ಬ್ರಹ್ಮಾಂಡದ ನಿಗೂಢತೆಯನ್ನು ಅನ್ವೇಷಿಸಲು ವೈಜ್ಞಾನಿಕ ಪ್ರಗತಿ ಮತ್ತು ಪ್ರಯತ್ನಗಳಾಗಬೇಕು ಎಂದು ಹೇಳಿದರು.

ಕಲಿಯಲು ಬೇಕಾದಷ್ಟು ವಿಷಯಗಳಿವೆ. ಆದರೆ ನಾವು ನದಿಗಳನ್ನು ಹುಡುಕಲು ಪ್ರಯತ್ನಿಸುತ್ತಿದ್ದೇವೆ. ಇದರಿಂದ ಜನರಿಗೇನು ಲಾಭವಿದೆ? ಈ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಲು ನಾವು ಪ್ರಯತ್ನಿಸಿದ್ದೇವೆ ಎಂದ ಅವರು,ಹಾಲಿ ಇರುವ ನದಿಗಳೇ ಸಾಯುತ್ತಿರುವಾಗ ಪುರಾಣ ಕಾಲದ ನದಿಯನ್ನು ಯಾರು ಹುಡುಕುತ್ತಾರೆ ಎಂದು ಪ್ರಶ್ನಿಸಿದರು.

ತನ್ನ ಚಿತ್ರವು ಜನರ ನಂಬಿಕೆಯನ್ನು ಪ್ರಶ್ನಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಆದರೆ ತೆರಿಗೆದಾರರ ಹಣವನ್ನು ಇಂತಹ ಯೋಜನೆಗಾಗಿ ಪೋಲು ಮಾಡುತ್ತಿರುವುದು ತರ್ಕಕ್ಕೆ ನಿಲುಕುತ್ತಿಲ್ಲ ಎಂದರು.

ಸರಕಾರದ ಕ್ರಮಗಳನ್ನು ಪ್ರಶ್ನಿಸಿದ ಅವರು,ರಾಷ್ಟ್ರವಾದದ ವ್ಯಾಪಕ ವಿಷಯಗಳು ಈ ನದಿ ಶೋಧದ ಹಿಂದಿನ ಉದ್ದೇಶವಾಗಿರುವಂತಿದೆ ಎಂದರು.

ನಮ್ಮ ಭೂಮಿಯು 4.6 ಶತಕೋಟಿ ವರ್ಷಗಳಷ್ಟು ಹಳೆಯದಾಗಿದೆ. ನದಿಗಳು ಬರುತ್ತವೆ ಮತ್ತು ಹೋಗುತ್ತವೆ ಮತ್ತು ಆ ನದಿ ಕಳೆದುಹೋಗಿರಬಹುದು. ಆದರೆ ಈಗ ನೆಲದಡಿಯಿಂದ ನೀರನ್ನು ತೆಗೆದು ನದಿಯನ್ನು ಪತ್ತೆ ಹಚ್ಚಿದ್ದೇವೆ ಎಂದು ಹೇಳಿದರೆ ಪುರಾಣವನ್ನು ವಾಸ್ತವದೊಂದಿಗೆ ಸಮನ್ವಯಿಸುವುದರಿಂದ ಅದು ಸಮಸ್ಯಾತ್ಮಕವಾಗುತ್ತದೆ ಎಂದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X