ಬಂಟಕ್: ಎನ್ನೆಸ್ಸೆಸ್ ಘಟಕದ ಪದಪ್ರದಾನ

ಶಿರ್ವ, ಆ.21: ಬಂಟಕಲ್ಲಿನ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾ ಲಯದ 2018-19ನೆ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಪದ ಪ್ರದಾನ ಸಮಾರಂಭವು ಇತ್ತೀಚೆಗೆ ಕಾಲೇಜಿನ ಆವರಣದಲ್ಲಿ ಜರಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮೂಡಬಿದ್ರಿ ಜೈನ್ ಹೈಸ್ಕೂಲ್‌ನ ಮುಖ್ಯೋಪಾಧ್ಯಾಯ ಮುನಿರಾಜ ರೆಂಜಾಲ ಮಾತನಾಡಿ, ಶೈಕ್ಷಣಿಕ ಅಧ್ಯಯನವು ವಿದ್ಯಾರ್ಥಿಗಳಿಗೆ ಸೈದ್ದಾಂತಿಕ ಜ್ಞಾನವನ್ನು ನೀಡುತ್ತವೆ. ಹಾಗೆಯೇ ರಾಷ್ಟ್ರೀಯ ಸೇವಾ ಯೋಜನಾ ಘಟಕದಂತಹ ಕಾರ್ಯಕ್ರಮಗಳು ಜೀವನಕ್ಕೆ ಬೇಕಾದ ಪ್ರಾಯೋಗಿಕ ಜ್ಞಾನವನ್ನು ನೀಡುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಕಾರ್ಯ ದರ್ಶಿ ರತ್ನಕುಮಾರ್ ವಹಿಸಿದ್ದರು. ಸಂಸ್ಥೆಯ ಪ್ರಾಂಶುಪಾಲ ಡಾ.ತಿರು ಮಲೇಶ್ವರ ಭಟ್ ನೂತನ ಪದಾಧಿಕಾರಿಗಳು ಹಾಗೂ ಸದಸ್ಯರನ್ನು ಅಭಿನಂದಿಸಿದರು. ಎನ್ನೆಸ್ಸೆಸ್ ಸಂಯೋಜಕ ಕಿಶೋರ್ ಕುಮಾರ್ ಆರೂರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಎನ್ನೆಸ್ಸೆಸ್ ವಿಭಾಗಗಳ ಸಂಯೋಜಕರಾದ ಬಿ.ಎನ್.ರಾಮಚಂದ್ರ, ಗಣೇಶ್ ಶೆಟ್ಟಿ, ನಾರಾಯಣ್ ನಾಯಕ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಎನ್ನೆಸ್ಸೆಸ್ ವಿದ್ಯಾರ್ಥಿ ಘಟಕದ ಅಧ್ಯಕ್ಷೆ ಮೇಘ ಸಾಮಗ, ಉಪಾಧ್ಯಕ್ಷೆ ಅಶ್ವಿನ್ ಹೆಬ್ಬಾರ್, ಕಾರ್ಯದರ್ಶಿ ಆಶಿಶ್ ಪ್ರಭು, ಕೋಶಾಧಿಕಾರಿ ಪ್ರಖ್ಯಾತ್ ಪ್ರಮಾಣ ವಚನ ಸ್ವೀಕರಿಸಿದರು. ಲಾವಣ್ಯ ಸ್ವಾಗತಿಸಿದರು. ಅನಿರುದ್ಧ್ ವಂದಿಸಿದರು. ಚೈತ್ರ ಕಾರ್ಯಕ್ರಮ ನಿರೂಪಿಸಿದರು.







