ಕುಂದಾಪುರ ಪುರಸಭಾ ಚುನಾವಣೆ: ಸುಳ್ಳು ಮಾಹಿತಿ ನೀಡಿ ಸ್ಪರ್ಧೆ; ದೂರು ದಾಖಲು
ಕುಂದಾಪುರ, ಆ.21: ಆ.31ರಂದು ನಡೆಯುವ ಕುಂದಾಪುರ ಪುರಸಭಾ ಚುನಾವಣೆಯಲ್ಲಿ ಮೀನು ಮಾರ್ಕೆಟ್ ವಾರ್ಡಿನಿಂದ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ನಾಗರಾಜ ಕಾಮಧೇನು ಅವರು ಕೋಟೇಶ್ವರದ ಖಾಯಂ ನಿವಾಸಿಯಾಗಿದ್ದು ಅವರು ಅಲ್ಲಿಯೇ ರೇಷನ್ ಕಾರ್ಡ್ ಹಾಗೂ ಮತದಾರರ ಗುರುತು ಚೀಟಿಯನ್ನು ಹೊಂದಿದ್ದಾರೆ ಎಂದು ಅದೇ ವಾರ್ಡಿನಿಂದ ಕಾಂಗ್ರೆಸ್ ಟಿಕೇಟ್‌ನಲ್ಲಿ ಸ್ಪರ್ಧಿಸುತ್ತಿರುವ ಹಾಲಿ ಪುರಸಭಾ ಸದಸ್ಯ ಶ್ರೀಧರ ಶೇರಿಗಾರ್ ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.
ನಾಗರಾಜ್ ಅವರು ಚುನಾವಣಾಧಿಕಾರಿಗಳಿಗೆ ಸಲ್ಲಿಸಿದ ನಾಮಪತ್ರದಲ್ಲಿ ತಾನು ವೆಸ್ಟ್‌ಬ್ಲಾಕ್ ವಾರ್ಡಿನಲ್ಲಿ ವಾಸ್ತವ್ಯವಿರುವುದಾಗಿ ಸುಳ್ಳು ಮಾಹಿತಿ ನೀಡಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಆದುದರಿಂದ ಅವರ ನಾಮಪತ್ರವನ್ನು ತಿರಸ್ಕರಿಸಬೇಕು ಎಂದು ಅವರು ದಾಖಲೆ ಸಮೇತ ಸಲ್ಲಿಸಿದ ದೂರಿನಲ್ಲಿ ಆರೋಪಿಸಿದ್ದಾರೆ.
Next Story





