ಉಡುಪಿ: ಕಲ್ಮಾಡಿ ಚರ್ಚ್‌ನ ಪ್ರತಿಷ್ಠಾಪನಾ ಮಹೋತ್ಸವ

ಉಡುಪಿ, ಆ.22: ವೆಲಂಕಣಿ ಮಾತೆಯ ಪ್ರಸಿದ್ಧ ಕ್ಷೇತ್ರವಾಗಿರುವ ಕಲ್ಮಾಡಿ ಸ್ಟೆಲ್ಲಾ ಮಾರಿಸ್ ಚರ್ಚ್‌ನ ಪ್ರತಿಷ್ಠಾಪನಾ ಮಹೋತ್ಸವವು ಇತ್ತೀಚೆಗೆ ವಿಜೃಂಭಣೆಯಿಂದ ಜರಗಿತು.
ಉಡುಪಿಯ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತೀ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೋ ಪ್ರಧಾನ ಧರ್ಮಗುರುಗಳಾಗಿ ದಿವ್ಯ ಬಲಿಪೂಜೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂದು ಸ್ವಾತಂತ್ರ್ಯ ಕೇವಲ ದೇಶಕ್ಕಲ್ಲ, ದೇಶದಲ್ಲಿ ಬದುಕುವ ಎಲ್ಲರಿಗೂ ಎಲ್ಲಾ ರೀತಿಯ ಸ್ವಾತಂತ್ರ್ಯ ಸಿಗಬೇಕಾದ ಅಗತ್ಯತೆ ಇದೆ ಎಂದರು.
ಕಲ್ಮಾಡಿ ಚರ್ಚಿನ ಧರ್ಮಗುರು ಫಾ.ಆಲ್ಬನ್ ಡಿಸೋಜ, ಫಾ.ಚೇತನ್, ಫಾ.ಫ್ರೆಡ್ರಿಕ್ ಹಾಗೂ ಧರ್ಮಪ್ರಾಂತ್ಯದ ಇತರ ಧರ್ಮಗುರುಗಳು ಉಪಸ್ಥಿತರಿದ್ದರು. ಮಹೋತ್ಸವದ ಮುನ್ನಾದಿನದ ಬಲಿಪೂಜೆಯನ್ನು ಬಳ್ಳಾರಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಅತೀ ವಂ.ಹೆನ್ರಿ ಡಿಸೋಜ ಅರ್ಪಿಸಿದರು.
Next Story





