ಮೂರನೇ ಟೆಸ್ಟ್: ಭಾರತ ವಿರುದ್ಧ ಇಂಗ್ಲೆಂಡ್ 173/4
ಬಟ್ಲರ್ ಅರ್ಧಶತಕ, ಇಶಾಂತ್‌ಗೆ 2 ವಿಕೆಟ್

ಟ್ರೆಂಟ್‌ಬ್ರಿಡ್ಜ್, ಆ.21: ಜೋಸ್ ಬಟ್ಲರ್(ಔಟಾಗದೆ 67) ಹಾಗೂ ಬೆನ್ ಸ್ಟೋಕ್ಸ್(ಔಟಾಗದೆ 42)ಮೂರನೇ ವಿಕೆಟ್‌ಗೆ ಸೇರಿಸಿದ 111 ರನ್ ಜೊತೆಯಾಟದ ನೆರವಿನಿಂದ ಇಂಗ್ಲೆಂಡ್ ತಂಡ ಭಾರತ ವಿರುದ್ಧ ಮೂರನೇ ಟೆಸ್ಟ್‌ನ 4ನೇ ದಿನದ ಚಹಾ ವಿರಾಮದ ವೇಳೆಗೆ 62 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 173 ರನ್ ಗಳಿಸಿದೆ.
ಮೂರನೇ ಟೆಸ್ಟ್ ಪಂದ್ಯದ ಗೆಲುವಿಗೆ 521 ರನ್ ಗುರಿ ಪಡೆದಿರುವ ಇಂಗ್ಲೆಂಡ್ 26ನೇ ಓವರ್‌ನಲ್ಲಿ 62 ರನ್‌ಗೆ 4 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆಗ ತಂಡವನ್ನು ಆಧರಿಸಿದ ಬಟ್ಲರ್ ಔಟಾಗದೆ 67(115 ಎಸೆತ, 13 ಬೌಂಡರಿ) ಹಾಗೂ ಸ್ಟೋಕ್ಸ್ ಔಟಾಗದೆ 42(111 ಎಸೆತ, 5 ಬೌಂಡರಿ)3ನೇ ವಿಕೆಟ್‌ಗೆ ಮುರಿಯದ ಜೊತೆಯಾಟ ನಡೆಸಿದ್ದಾರೆ.
ಭಾರತದ ವೇಗದ ಬೌಲರ್ ಇಶಾಂತ್ ಶರ್ಮಾ(2-43)ಇಂಗ್ಲೆಂಡ್ ಆರಂಭಿಕ ಆಟಗಾರರಾದ ಕುಕ್(17) ಹಾಗೂ ಜೆನ್ನಿಂಗ್ಸ್(13) ವಿಕೆಟ್‌ನ್ನು ಬೇಗನೇ ಉರುಳಿಸಿ ಆಂಗ್ಲರಿಗೆ ಆರಂಭಿಕ ಆಘಾತ ನೀಡಿದರು.
ನಾಯಕ ಜೋ ರೂಟ್(13) ವೇಗದ ಬೌಲರ್ ಬುಮ್ರಾಗೆ ವಿಕೆಟ್ ಒಪ್ಪಿಸಿದರು. ಯುವ ಆಟಗಾರ ಪೋಪ್ 16 ರನ್ ಗಳಿಸಿ ಮುಹಮ್ಮದ್ ಶಮಿಗೆ ವಿಕೆಟ್ ಒಪ್ಪಿಸಿದರು.





