ಆ.22: ಸ್ಪಂದನ ಟಿವಿ ವಾಹಿನಿಯಲ್ಲಿ ಬಕ್ರೀದ್ ಸಂಭ್ರಮ ಕಾರ್ಯಕ್ರಮ
ಉಡುಪಿ, ಆ.21: ಸ್ಪಂದನ ಟಿವಿ ವಾಹಿನಿಯಲ್ಲಿ ಬುಧವಾರ ಬೆಳಗ್ಗೆಯಿಂದ ಸಂಜೆಯವರೆಗೆ ಬಕ್ರೀದ್ ಸಂಭ್ರಮ ಕಾರ್ಯಕ್ರಮಗಳು ಪ್ರಸವಾರವಾಗಲಿವೆ.
ಬೆಳಗ್ಗೆ 7ಕ್ಕೆ ಮಲ್ಪೆ ಅಬೂಬಕರ್ ಜಾಮಿಯ ಮಸೀದಿಯ ಖತೀಬ್ ಇಮ್ರಾನುಲ್ಲಾ ಖಾಸಿಂ ಅವರಿಂದ ಬಕ್ರೀದ್ ಸಂದೇಶ ಪ್ರಸಾರವಾಗಲಿದೆ. ಈ ಸಂದೇಶ ಸಂಜೆ 4:30ಕ್ಕೆ ಮರು ಪ್ರಸಾರವಾಗಲಿದೆ. 8:30ಕ್ಕೆ ಬಕ್ರೀದ್ ಸಾಕ್ಷಚಿತ್ರ ಪ್ರಸಾರವಾಗಲಿದ್ದು, ಸಂಜೆ 6ಕ್ಕೆ ಮರು ಪ್ರಸಾರವಾಗಲಿದೆ.
ಬೆಳಗ್ಗೆ 9:30ಕ್ಕೆ ಪುನರೂರು ಜುಮಾ ಮಸೀದಿಯ ಖತೀಬ್ ಪಿ.ಎಂ.ಎ. ಮುಹಮ್ಮದ್ ಅಶ್ರಫ್ ರಝಾ ಅಮ್ಜದಿಯವರಿಂದ ಬಕ್ರೀದ್ ಸಂದೇಶ ಪ್ರಸಾರವಾಗಲಿದೆ ಹಾಗೂ ರಾತ್ರಿ 9ಕ್ಕೆ ಮರು ಪ್ರಸಾರವಾಗಲಿದೆ.
ಬೆಳಗ್ಗೆ 10ಕ್ಕೆ ಗಾಯಕ ಶೌಕತ್ ಪಡುಬಿದ್ರೆಯವರಿಂದ ಬಕ್ರೀದ್ ಸಂಭ್ರಮ ಕಾರ್ಯಕ್ರಮ ಪ್ರಸಾರವಾಗಿದೆ. ರಾತ್ರಿ 8ಕ್ಕೆ ಮರುಪ್ರಸಾರವಾಗಲಿದೆ.
ಮಧ್ಯಾಹ್ನ 12ಕ್ಕೆ ಹಾಗೂ ಸಂಜೆ 6:3ಕ್ಕೆ ಬಕ್ರೀದ್ ಸಂದೇಶ ಪ್ರಸಾರವಾಗಲಿದೆ. ಅಪರಾಹ್ನ 2ಕ್ಕೆ ಕೆ.ಎಚ್.ನೂರ್ ಮುಹಮ್ಮದ್‌ರ ದಫ್ ಕುರಿತಾದ ಕಾರ್ಯಕ್ರಮ ಸಫಾ ಮರ್ವಾ ದಫ್ ಹಾಡುಗಳು, ಇದು ರಾತ್ರಿ 10ಕ್ಕೆ ಮರು ಪ್ರಸಾರವಾಗಲಿದೆ. ಅಪರಾಹ್ನ 3 ಹಾಗೂ ರಾತ್ರಿ 9:30ಕ್ಕೆ ಬಕ್ರೀದ್ ಸಂದೇಶ ಪ್ರಸಾರವಾಗಲಿದೆ ಎಂದು ಪ್ರಕಟನೆ ತಿಳಿಸಿದೆ.







