3ನೇ ಟೆಸ್ಟ್ ಗೆಲುವನ್ನು ಕೇರಳ ಜನತೆಗೆ ಅರ್ಪಿಸಿದ ಕೊಹ್ಲಿ

ಟ್ರೆಂಟ್‌ಬ್ರಿಡ್ಜ್, ಆ.22: ಇಂಗ್ಲೆಂಡ್ ವಿರುದ್ಧ 203 ರನ್ ಗೆಲುವು ಸಾಧಿಸಿದ ಭಾರತ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸ್ಪರ್ಧೆಯನ್ನು ಕಾಯ್ದುಕೊಂಡಿದೆ. ಮೂರನೇ ಟೆಸ್ಟ್ ಪಂದ್ಯದಲ್ಲಿ 97 ಹಾಗೂ 103 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ನಾಯಕ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
‘‘ಮೊದಲಿಗೆ ನಾನು ಈ ಪಂದ್ಯದ ಗೆಲುವನ್ನು ಪ್ರವಾಹದಿಂದ ಸಂತ್ರಸ್ತರಾಗಿರುವ ಕೇರಳದ ಜನತೆಗೆ ಸಮರ್ಪಿಸುವೆ. ಎಲ್ಲ ಆಟಗಾರರು ಮೂರನೇ ಪಂದ್ಯದ ಸಂಭಾವನೆಯನ್ನು ಕೇರಳ ಸರಕಾರಕ್ಕೆ ನೀಡಲಿದ್ದಾರೆ. ನಾವು ಇಷ್ಟು ಮಾಡಲು ಮಾತ್ರ ಸಾಧ್ಯ’’ ಎಂದು ಕೊಹ್ಲಿ ನುಡಿದರು.
ನಮ್ಮ ತಂಡ ಎಲ್ಲ ಮೂರು ವಿಭಾಗಗಳಲ್ಲಿ ತೃಪ್ತಿಕರ ಪ್ರದರ್ಶನ ನೀಡಿದೆ. ಇದು ನಮಗೆ ಪರಿಪೂರ್ಣ ಟೆಸ್ಟ್ ಪಂದ್ಯವಾಗಿತ್ತು. ದಕ್ಷಿಣ ಆಫ್ರಿಕದಲ್ಲಿ ನಡೆದ 5 ಟೆಸ್ಟ್ ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಮಾತ್ರ ಕಳಪೆ ಪ್ರದರ್ಶನ ನೀಡಿದ್ದೆವು ಎಂದು ಕೊಹ್ಲಿ ಹೇಳಿದ್ದಾರೆ.
Next Story





