ಸರ್ನೊಬಾಟ್ಗೆ ಮಹಾರಾಷ್ಟ್ರ ಸರಕಾರದಿಂದ 50 ಲಕ್ಷ ರೂ. ಬಹುಮಾನ
ಮುಂಬೈ, ಆ.22: ಏಶ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಜಯಿಸಿದ ಭಾರತದ ಮೊದಲ ಮಹಿಳಾ ಶೂಟರ್ ಎನಿಸಿಕೊಂಡಿರುವ ರಾಹಿ ಸರ್ನೊಬಾಟ್ಗೆ ಮಹಾರಾಷ್ಟ್ರ ಸರಕಾರ 50 ಲಕ್ಷ ರೂ. ಬಹುಮಾನ ಘೋಷಿಸಿದೆ. ಬುಧವಾರ ನಡೆದ ಅತ್ಯಂತ ಪೈಪೋಟಿಯಿಂದ ಕೂಡಿದ ಫೈನಲ್ ಪಂದ್ಯದಲ್ಲಿ ರಾಹಿ ಥಾಯ್ಲೆಂಡ್ನ ಪ್ರತಿಸ್ಪರ್ಧಿಯನ್ನು ಸೋಲಿಸಿ ಪದಕ ಜಯಿಸಿದ್ದರು.
‘‘ಚಿನ್ನ ವಿಜೇತರಿಗೆ 50 ಲಕ್ಷ ರೂ., ಬೆಳ್ಳಿ ವಿಜೇತರಿಗೆ 30 ಲಕ್ಷ ರೂ. ಹಾಗೂ ಕಂಚು ವಿಜೇತರಿಗೆ 20 ಲಕ್ಷ ರೂ. ಸರಕಾರದ ವತಿಯಿಂದ ಬಹುಮಾನ ಘೋಷಿಸಲು ನನಗೆ ತುಂಬಾ ಸಂತೋಷವಾಗುತ್ತಿದೆ’’ ಎಂದು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಟ್ವೀಟ್ ಮಾಡಿದ್ದಾರೆ.
Next Story