ಕಾಶ್ಮೀರ: ಈದ್ ದಿನವೇ ಮೂವರು ಪೊಲೀಸರನ್ನು ಕೊಂದ ಉಗ್ರರು
ಅಶ್ರಫ್ ದಾರ್, ಫಯಾಝ್ ಅಹ್ಮದ್, ಯಾಕೂಬ್ ಶಾ ಮೃತ್ಯು

ಶ್ರೀನಗರ, ಆ.22: ಈದ್ ನ ದಿನವಾದ ಇಂದು ಭಯೋತ್ಪಾದಕರು ಪೊಲೀಸ್ ಇನ್ಸ್ ಪೆಕ್ಟರ್ ಮುಹಮ್ಮದ್ ಅಶ್ರಫ್ ದಾರ್ ರನ್ನು ಮನೆಯಲ್ಲೇ ಕೊಂದಿದ್ದಾರೆ. ಈದ್ ದಿನ ಉಗ್ರರು ಮೂವರು ಪೊಲೀಸರನ್ನು ಕೊಂದಿದ್ದಾರೆ.
ಪೊಲೀಸ್ ಇನ್ಸ್ ಪೆಕ್ಟರ್ ಮುಹಮ್ಮದ್ ಅಶ್ರಫ್ ದಾರ್ ಮನೆಗೆ ನುಗ್ಗಿದ ಸಶಸ್ತ್ರಧಾರಿಯೊಬ್ಬ ಗುಂಡಿನ ಮಳೆಗರೆದಿದ್ದಾನೆ. ಪರಿಣಾಮ ಅವರು ಮನೆಯಲ್ಲೇ ಮೃತಪಟ್ಟಿದ್ದಾರೆ.
ಇನ್ನೊಂದು ಘಟನೆಯಲ್ಲಿ ತರಬೇತಿ ನಿರತ ಪೊಲೀಸ್ ಕಾನ್ಸ್ ಟೇಬಲ್ ಫಯಾಝ್ ಅಹ್ಮದ್ ಶಾರನ್ನು ಉಗ್ರರು ಗುಂಡಿಕ್ಕಿ ಕೊಂದಿದ್ದಾರೆ. ಈದ್ ನಮಾಝ್ ಮುಗಿಸಿ ಅವರು ಮನೆಗೆ ಹಿಂದಿರುಗುತ್ತಿದ್ದಾಗ ಗುಂಡಿಕ್ಕಲಾಗಿದೆ.
ಮತ್ತೊಬ್ಬ ಪೊಲೀಸ್ ಅಧಿಕಾರಿ ಮುಹಮ್ಮದ್ ಯಾಕೂಬ್ ಶಾ ಅವರನ್ನೂ ಪುಲ್ವಾಮದಲ್ಲಿ ಗುಂಡಿಕ್ಕಿ ಉಗ್ರರು ಕೊಂದಿದ್ದಾರೆ.
Next Story





