ಕೊಡಗು ನಿರಾಶ್ರಿತರ ನೆರವಿಗಾಗಿ ಮಾಂಸಾಹಾರ ತ್ಯಜಿಸಿದ ಕೈದಿಗಳು
ಬೆಂಗಳೂರು, ಆ. 23: ಮಳೆ-ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿ ನೆಲೆ ಕಳೆದುಕೊಂಡ ಕೊಡಗು ಜಿಲ್ಲೆಯ ನಿರಾಶ್ರಿತರ ನೆರವಿಗೆ ಧಾವಿಸಿದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿನ ಕೈದಿಗಳು ಮಾಂಸಾಹಾರವನ್ನೆ ತ್ಯಜಿಸಿದ್ದು, ಈ ಸಂಬಂಧ ಕಾರಾಗೃಹ ಅಧಿಕಾರಿಗೆ ಪತ್ರ ಬರೆದಿದ್ದಾರೆ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಕೈದಿಗಳು, ನೆರೆ ಸಂತ್ರಸ್ತರಿಗೆ ನೆರವಾಗುವ ದೃಷ್ಟಿಯಿಂದ ಈ ವಾರ ನೀಡಲಾಗುವ ಮಾಂಸಾಹಾರವನ್ನು ನಿಲ್ಲಿಸುವಂತೆ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಜೈಲಿನಲ್ಲಿರುವ 4,500 ಕೈದಿಗಳ ಮಾಂಸಾಹಾರ ತ್ಯಾಗದಿಂದ ಉಳಿಯುವ 2 ಲಕ್ಷ ರೂ.ಕೊಡಗು ಸಂತ್ರಸ್ತರಿಗೆ ದೇಣಿಗೆಯಾಗಿ ಸಿಎಂ ಪರಿಹಾರ ನಿಧಿಗೆ ಕಳುಹಿಸಬೇಕೆಂದು ಕಾರಾಗೃಹ ಎಡಿಜಿಪಿ ಎನ್.ಎನ್.ಮೇಘರಿಕ್ ಅವರಿಗೆ ಕೋರಿದ್ದಾರೆ.
Next Story