ಸಿಧು 'ಪಾಕ್ ಆಲಿಂಗನ' ಟೀಕಿಸಿದ ಅಮರಿಂದರ್ ಗೆ ಪಾಕಿಸ್ತಾನದ ಸಂಗಾತಿ !

ಹೊಸದಿಲ್ಲಿ, ಆ.23: ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಪಾಕಿಸ್ತಾನದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಮಾರಂಭಕ್ಕೆ ತೆರಳಿದ್ದ ಭಾರತದ ಮಾಜಿ ಕ್ರಿಕೆಟಿಗ-ರಾಜಕಾರಣಿ ನವಜ್ಯೋತ್ ಸಿಂಗ್ ಸಿಧು ಅಲ್ಲಿನ ಸೇನಾ ಮುಖ್ಯಸ್ಥ ಖಮರ್ ಜಾವೇದ್ ಬಾಜ್ವಾ ಅವರನ್ನು ಆಲಂಗಿಸಿಕೊಡದ್ದು ವಿವಾದಕ್ಕೆ ಕಾರಣವಾಗಿತ್ತು. ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಕೂಡಾ, "ಸಿಧು ಅಪ್ಪುಗೆ ಒಳ್ಳೆಯ ಸಂಕೇತವಲ್ಲ; ಅದನ್ನು ತಪ್ಪಿಸಬಹುದಿತ್ತು" ಎಂದು ಪರೋಕ್ಷವಾಗಿ ಸಿಧು ನಡೆಯನ್ನು ಆಕ್ಷೇಪಿಸಿದ್ದರು.
ಆದರೆ ಹೀಗೆ ಸಿಧು ಅವರನ್ನು ಟೀಕಿಸಿದ ಅಮರಿಂದರ್‍ಗೆ ಪಾಕಿಸ್ತಾನದ ಸಂಗಾತಿ ಇದ್ದಾರೆ ಎನ್ನುವುದು ಎಷ್ಟೋ ಮಂದಿಗೆ ತಿಳಿದಿಲ್ಲ. ಫಸ್ಟ್‍ಲೇಡಿ ಆಫ್ ಪಂಜಾಬ್ ಎಂದೇ ಕರೆಯಲ್ಪಡುವ ಅರೂಸಾ ಅಲಂ ಅವರನ್ನು ಪಂಜಾಬ್ ಒಪ್ಪಿಕೊಂಡಿದೆ. ಪಂಜಾಬ್ ಮುಖ್ಯಮಂತ್ರಿಯ ದೀರ್ಘಕಾಲದ ಸಂಗಾತಿಯಾಗಿ ಪಾಕ್ ನ ಈ ಮಹಿಳೆ ಚಂಡೀಗಢದಲ್ಲಿ ಚಿರಪರಿಚಿತರು. ಇದಕ್ಕೆ ಗಡಿ ಅಡ್ಡ ಬಂದಿಲ್ಲ.
2004ರಲ್ಲಿ ಪಾಕಿಸ್ತಾನಕ್ಕೆ ತೆರಳಿದ್ದಾಗ ಅಮರೀಂದರ್ ಸಿಂಗ್ ಗೆ ಜಾವೇದ್ ಬಾಜ್ವಾರ ಪರಿಚಯವಾಗಿತ್ತು. ಆಕೆ ವಿವಾಹಿತೆ. ಇಬ್ಬರು ಮಕ್ಕಳೂ ಇದ್ದಾರೆ. ತನಿಖಾ ಪತ್ರಕರ್ತೆ ಎಂದು ಆಕೆಯನ್ನು ಬಣ್ಣಿಸಲಾಗಿತ್ತು. ಆಕೆಯ ತಾಯಿ ಪಾಕಿಸ್ತಾನದಲ್ಲಿ ಜನರಲ್ ರಾಣಿ ಎಂದೇ ಪರಿಚಿತ.
ಅಮರಿಂದರ್ ಅವರ ಅಧಿಕೃತ ನಿವಾಸದಲ್ಲೇ ವಾಸವಿರುವ ಅರೂಸಾ ಚುನಾವಣೆಯಲ್ಲೂ ವ್ಯಾಪಕ ಪ್ರಚಾರ ಮಾಡಿದ್ದರು. ಅಮರಿಂದರ್ ಅವರ ಪತ್ನಿ ಎಂದೇ ಎಲ್ಲರೂ ಗುರುತಿಸುತ್ತಾರೆ. ಹೀಗಿದ್ದ ಮೇಲೆ ಸಿಧು ಸಾರ್ವಜನಿಕವಾಗಿ ಆಲಿಂಗನ ಮಾಡಿದ್ದನ್ನು ಕ್ಯಾಪ್ಟನ್ ಹೇಗೆ ಪ್ರಶ್ನಿಸುತ್ತಾರೆ ಎಂದು 'ದ ಪ್ರಿಂಟ್'ನಲ್ಲಿ ಬರೆದ ಲೇಖನದಲ್ಲಿ ಪತ್ರಕರ್ತೆ ಶೋಭಾ ಡೇ ಪ್ರಶ್ನಿಸಿದ್ದಾರೆ.







