ಲಂಡನ್‌ಗೆ ತೆರಳಲು ಅನುಮತಿ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ನಲಪಾಡ್

ಬೆಂಗಳೂರು, ಆ.23: ಲಂಡನ್‌ಗೆ ತೆರಳಲು ಅನುಮತಿ ಕೋರಿ ಉದ್ಯಮಿ ಪುತ್ರ ವಿದ್ವತ್ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಶಾಸಕ ಎನ್.ಎ.ಹಾರಿಸ್ ಪುತ್ರ ಮುಹಮದ್ ನಲಪಾಡ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿ ಕುರಿತು ಆಕ್ಷೇಪಣೆ ಸಲ್ಲಿಸಲು ಪ್ರಾಸಿಕ್ಯೂಷನ್ ಪರ ವಕೀಲ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ಮುಂದೂಡಿತು. ನನ್ನ ತಮ್ಮ ಲಂಡನ್‌ನಲ್ಲಿ ಇದ್ದಾನೆ. ಅವನನ್ನು ಭೇಟಿ ಮಾಡಲು ಆ. 25ರಿಂದ 15 ದಿನಗಳ ಕಾಲ ತೆರಳಲು ಉದ್ದೇಶಿಸಿದ್ದೇನೆ. ಹೀಗಾಗಿ, ಅವಕಾಶ ಕಲ್ಪಿಸಬೇಕು ಎಂದು ನಲಪಾಡ್ ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
ನಲಪಾಡ್ ಜಾಮೀನು ಮಂಜೂರು ಮಾಡಿದ್ದ ವೇಳೆ ನಗರ ಬಿಟ್ಟು ತೆರಳದಂತೆ ಷರತ್ತು ವಿಧಿಸಲಾಗಿತ್ತು. ಇದೀಗ ಈ ಷರತ್ತು ಸಡಿಲಿಸುವಂತೆ ಆತ ಕೋರಿದ್ದಾನೆ.
Next Story





