ಜಯಪುರ: ಗುಡ್ಡ ಕುಸಿದು ಅಡಿಕೆ ತೋಟಕ್ಕೆ ಹಾನಿ

ಜಯಪುರ, ಆ.23: ಮಲೆನಾಡಿನಲ್ಲಿ ಸುರಿದ ಭಾರೀ ಮಳೆಯಿಂದ ಅತ್ತಿಕುಡಿಗೆ ಗ್ರಾಮ ಪಂ. ವ್ಯಾಪ್ತಿಯ ಕಲ್ಲುಗುಡ್ಡೆಯ ಗಿರಿಜನ ಜನಾಂಗದ ಶಾರದಾ ಎಂಬವರ ಜಮೀನಿನ ಮೇಲ್ಭಾಗದ ಗುಡ್ಡ ಕುಸಿದು ಜಮೀನಿನಲ್ಲಿದ್ದ ಅಡಿಕೆ, ಕಾಫಿ ಹಾಗೂ ಕಾಳುಮೆಣಸು ಬೆಳೆಗಳು ಸಂಪೂರ್ಣ ನಾಶವಾಗಿದೆ.
ಸುಮಾರು 5 ರಿಂದ 6 ಲಕ್ಷದಷ್ಟು ಹಾನಿಯಾಗಿದ್ದು, ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು, ಗ್ರಾ.ಪಂ ಸದಸ್ಯ ನಾಗಭೂಷಣ್, ಆದಿವಾಸಿ ಹಸಲರ ಸಂಘದ ಜಿಲ್ಲಾ ಸಂಚಾಲಕ ನಾರಾಯಣ್, ಹಸಲರ ಸಂಘದ ನ.ರಾ ಪುರ ತಾಲ್ಲೂಕು ಅಧ್ಯಕ್ಷ ಗೋಪಾಲ್, ಸ್ಥಳೀಯರಾದ ಬಿ.ಎಸ್ ಯೋಗೀಶ್, ರೇವತಿ, ಬಿ.ಎಂ ಕೃಷ್ಣ, ಮಂಜುನಾಥ ಬಿ.ಎಸ್, ನಾರಾಯಣ ಭೇಟಿ ನೀಡಿ ಪರಿಹಾರಕ್ಕಾಗಿ ಅಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಿದ್ದಾರೆ.
Next Story





