ಪಾಲೆಮ್‌ಬಾಂಗ್‌ನಲ್ಲಿ ಗುರುವಾರ ನಡೆದ ಏಶ್ಯನ್ ಗೇಮ್ಸ್‌ನ ಪುರುಷರ ಡಬಲ್ ಟ್ರಾಪ್ ಇವೆಂಟ್‌ನಲ್ಲಿ ಭಾರತದ 15ರ ಹರೆಯದ ಶೂಟರ್ ಶಾರ್ದೂಲ್ ವಿಹಾನ್ ಕೇವಲ ಒಂದು ಅಂಕದಿಂದ ಚಿನ್ನ ವಂಚಿತರಾಗಿ ಬೆಳ್ಳಿ ಪದಕ ಜಯಿಸಿದರು. ಭಾರತ ತಲಾ 4 ಚಿನ್ನ, ಬೆಳ್ಳಿ ಸಹಿತ ಒಟ್ಟು 18 ಪದಕ ಗೆದ್ದುಕೊಂಡು ಪದಕ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ.