ಏಶ್ಯನ್ ಗೇಮ್ಸ್: ಭಾರತಕ್ಕೆ ಅವಳಿ ಚಿನ್ನ
ಇಂಡೋನೇಶ್ಯಾದ ಜಕಾರ್ತ ಹಾಗೂ ಪಾಲೆಂಬಾಂಗ್‌ನಲ್ಲಿ ನಡೆಯುತ್ತಿರುವ ಏಶ್ಯನ್ ಗೇಮ್ಸ್‌ನ 6ನೇ ದಿನವಾದ ಶುಕ್ರವಾರ ಭಾರತ ಎರಡು ಚಿನ್ನ, 1 ಬೆಳ್ಳಿ, 4 ಕಂಚು ಗೆದ್ದುಕೊಂಡಿದೆ. ಟೆನಿಸ್‌ನ ಪುರುಷರ ಡಬಲ್ಸ್‌ನಲ್ಲಿ ರೋಹನ್ ಬೋಪಣ್ಣ-ದಿವಿಜ್ ಶರಣ್ ಚಿನ್ನ ಗೆದ್ದುಕೊಂಡಿದ್ದಾರೆ. ರೋಯಿಂಗ್‌ನ ಕ್ವಾಡ್ರುಪಲ್ ಸ್ಕಲ್ಸ್ ಇವೆಂಟ್‌ನಲ್ಲಿ ಸವರ್ಣ್ ಸಿಂಗ್, ಭೋಕನಾಲ್ ದತ್ತ, ಓಂಪ್ರಕಾಶ್ ಹಾಗೂ ಸುಖ್‌ಮೀತ್ ಸಿಂಗ್ ಚಿನ್ನದ ಪದಕ ಜಯಿಸಿದ್ದಾರೆ.
Next Story





