ಮಿಲ್ಲತ್ ಕ್ರೆಡಿಟ್ ಕೋ ಆಪರೇಟಿವ್‌ಗೆ ಬಿ. ಇಬ್ರಾಹೀಂ ಪುನರಾಯ್ಕೆ

ಮಂಗಳೂರು, ಆ.24: ಮಿಲ್ಲತ್ ಕ್ರೆಡಿಟ್ ಕೋ ಆಪರೇಟಿವ್ ಆಡಳಿತ ಮಂಡಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಮಾಜಿ ರಾಜ್ಯಸಭಾ ಸದಸ್ಯ, ಹಿರಿಯ ನ್ಯಾಯವಾದಿ ಬಿ. ಇಬ್ರಾಹೀಂ ಮೂರನೇ ಬಾರಿಗೆ ಪುನರಾಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಅಬ್ದುಲ್ ಅಝೀಝ್ ಕುದ್ರೋಳಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಜ್ಯೋತಿ ಲಕ್ಷ್ಮಿ ತಿಳಿಸಿದ್ದಾರೆ.
ಸಭೆಯಲ್ಲಿ ಸಂಸ್ಥೆಯ ನಿರ್ದೇಶಕರಾದ ಅಬ್ದುಲ್ ರಝಾಕ್ ಎಂ., ನಿಸಾರ್ ಫಕೀರ್ ಮುಹಮ್ಮದ್, ಅಬ್ದುಲ್ಲಾ ಬಿನ್ ಅಮೀನ್, ಮುನೀರ್ ಅಹ್ಮದ್, ರತ್ನಾಕರ ರಾವ್, ಎನ್.ಪಿ. ಪುಷ್ಪರಾಜನ್, ನೂರ್ ಅಮೀನಾ, ಶಹೀದಾ ಹಾಗೂ ಕಾರ್ಯದರ್ಶಿ ಶೆರಿನ್ ಬಾನು ಉಪಸ್ಥಿತರಿದ್ದರು.
Next Story





