ಕೊಳ್ಳೇಗಾಲ: ಕಾಂಗ್ರೆಸ್ ತೊರೆದು ಬಿಎಸ್ಪಿ ಸೇರ್ಪಡೆ ಮುಖಂಡರು

ಕೊಳ್ಳೇಗಾಲ,ಆ.24: ನಗರಸಭೆ ಮಾಜಿ ಅಧ್ಯಕ್ಷ ಹಾಗೂ ತಾಲೂಕು ಕ್ರೈಸ್ತ ಒಕ್ಕೂಟದ ಅಧ್ಯಕ್ಷ ಸೆಲ್ವರಾಜು ಕಾಂಗ್ರೆಸ್ ಪಕ್ಷವನ್ನು ತೊರೆದು ಶಿಕ್ಷಣ ಸಚಿವ ಎನ್.ಮಹೇಶ್ ನೇತೃತ್ವದಲ್ಲಿ ಬಹುಜನ ಸಮಾಜ ಪಾರ್ಟಿಯನ್ನು ಸೇರ್ಪಡೆಗೊಂಡರು.
ಪಟ್ಟಣದ ಮಾಜಿ ನಗರಸಭೆ ಅಧ್ಯಕ್ಷ ಸೆಲ್ವರಾಜುರವರ ನಿವಾಸಕ್ಕೆ ಭೇಟಿ ಕೊಟ್ಟ ಸಚಿವರು ಅವರಿಗೆ ಹಾರ ಹಾಕಿ, ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡರು.
ನಂತರ ಸಚಿವರು ಮಾತನಾಡಿ, ಇಂದಿನಿಂದ ಅಧಿಕೃತವಾಗಿ ಚುನಾವಣೆಯ ಪ್ರಚಾರ ಆರಂಭವಾಗಲಿದೆ. ನಗರಸಭೆ ಅಧಿಕಾರ ಹಿಡಿಯಲು ಎಲ್ಲ ರೀತಿಯ ವ್ಯವಸ್ಥೆಗೊಂಡಿದ್ದು ಮಾಡಿಕೊಂಡಿದ್ದೇವೆ. ಈ ಬಾರಿ ನಗರಸಭೆಯ ಅಧಿಕಾರ ಹಿಡಿಯಲಿದ್ದೇವೆ ಎಂದು ಹೇಳಿದರು.
ನಮ್ಮ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡು ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಕ್ರೈಸ್ತ ಮುಖಂಡರಾದ ಸೆಲ್ವರಾಜುರವರು ಬಿಎಸ್ಪಿಗೆ ಸೇರ್ಪಡೆಗೊಂಡಿದ್ದು ನಮ್ಮ ಪಕ್ಷಕ್ಕೆ ಒಂದು ಆನೆ ಬಲದಂತಾಗಿದೆ. ಅವರ ಅನುಭವ ನಗರಸಭೆಯ ಆಡಳಿತಕ್ಕೆ ಬೇಕಾಗಿದೆ. ನಗರಸಭೆ ಅಭಿವೃದ್ಧಿಗೆ ಅವರನ್ನು ಬಳಿಸಕೊಂಡು ಪಟ್ಟಣವನ್ನು ಹೊಸ ರೂಪ ತರಲು ಶ್ರಮಿಸುವುದಾಗಿ ತಿಳಿಸಿದರು.
ಈ ಸಂದರ್ಭ ಬಿಎಸ್ಪಿ ಜಿಲ್ಲಾಧ್ಯಕ್ಷ ಮರಳ್ಳಿ ಮಾದಪ್ಪ, ಟೌನ್ ಅಧ್ಯಕ್ಷ ಜಕಾವುಲ್ಲಾ, ಮುಖಂಡರುಗಳಾದ ಬಸವಣ್ಣ, ತಿಮ್ಮರಾಜೀಪುರ ಪುಟ್ಟಣ್ಣ, ಸಮೀವುಲ್ಲಾ, ವೀರಭದ್ರಯ್ಯ, ಈದ್ಗಾ ಮೊಹಲ್ಲಾ ಜಕಾವುಲ್ಲಾ, ಅಭ್ಯಥಿಗಳಾದ ರಾಮಕೃಷ್ಣ, ಸಚಿವರ ಆಪ್ತ ಪತ್ರಿಕಾ ಕಾರ್ಯದರ್ಶಿ ಬಸಂತ್‍ಮೋಟಾಯ್ ಸೇರಿದಂತೆ ಇನ್ನಿತರರು ಇದ್ದರು.







