ನಾವು ಕೇಂದ್ರದ ಅಡಿಯಾಳುಗಳಲ್ಲ: ರಕ್ಷಣಾ ಸಚಿವೆ ವಿರುದ್ಧ ಡಿಸಿಎಂ ಪರಮೇಶ್ವರ್ ಆಕ್ರೋಶ
ಬೆಂಗಳೂರು, ಆ. 25: ‘ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಒಂದು ವಾರ ಜಿಲ್ಲೆಯಲ್ಲಿದ್ದು ಪರಿಹಾರ ಕಾರ್ಯಗಳನ್ನು ನೋಡಿಕೊಳ್ಳುತ್ತಿದ್ದಾರೆ. ಹೀಗಾಗಿ ಅವರು ಕೊಟ್ಟಷ್ಟೇ ಗೌರವವನ್ನು ನೀವೂ ಅವರಿಗೆ ಕೊಡಬೇಕು’ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ, ಡಿಸಿಎಂ ಡಾ.ಜಿ.ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಟ್ವಿಟ್ ಮಾಡಿರುವ ಅವರು, ನಮ್ಮ ಸಹೋದ್ಯೋಗಿ ಮೇಲೆ ನೀವು ಹರಿಹಾಯ್ದಿದ್ದು ಅಸಮಾಧಾನ ಉಂಟು ಮಾಡಿದೆ. ಕೇಂದ್ರ ಸಚಿವರಾದ ಮಾತ್ರಕ್ಕೆ ರಾಜ್ಯದ ಜನಪ್ರತಿನಿಧಿಗಿಂತ ಅವರು ಮೇಲ್ದರ್ಜೆಯವರೇನಲ್ಲ ಎಂದು ಇದೇ ಸಂದರ್ಭದಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ರಾಜ್ಯ ಸರಕಾರಗಳು ನಮ್ಮ ಸಂವಿಧಾನದಿಂದ ಅಧಿಕಾರ ಪಡೆದಿವೆಯೇ ಹೊರತು ಕೇಂದ್ರ ಸರಕಾರದಿಂದ ಅಲ್ಲ. ರಾಜ್ಯ ಮತ್ತು ಕೇಂದ್ರ ಸರಕಾರಗಳು ಸಹಭಾಗಿತ್ವದಿಂದ ಕಾರ್ಯನಿರ್ವಹಿಸಲು ಸಂವಿಧಾನ ಅಧಿಕಾರದ ಹಂಚಿಕೆ ಮಾಡಿದೆ. ನಾವು ಕೇಂದ್ರದ ಅಡಿಯಾಳುಗಳಲ್ಲ. ನಾವು ಸಹವರ್ತಿಗಳು ಎಂದು ಪರಮೇಶ್ವರ್ ತಿರುಗೇಟು ನೀಡಿದ್ದಾರೆ.
Next Story