Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. “ಮೋದಿಯ ಹೆಸರನ್ನೂ ಬದಲಿಸಿ, ಮತಗಳು...

“ಮೋದಿಯ ಹೆಸರನ್ನೂ ಬದಲಿಸಿ, ಮತಗಳು ಸಿಗಬಹುದು”

ರಾಮಲೀಲಾ ಮೈದಾನದ ಹೆಸರು ಬದಲಾವಣೆ ಬಗ್ಗೆ ಬಿಜೆಪಿಗೆ ಕೇಜ್ರಿವಾಲ್ ಚಾಟಿ

ವಾರ್ತಾಭಾರತಿವಾರ್ತಾಭಾರತಿ25 Aug 2018 7:17 PM IST
share
“ಮೋದಿಯ ಹೆಸರನ್ನೂ ಬದಲಿಸಿ, ಮತಗಳು ಸಿಗಬಹುದು”

ಹೊಸದಿಲ್ಲಿ,ಆ.25: ರಾಜಕೀಯ ಲಾಭಕ್ಕಾಗಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನು ಬಳಸಿಕೊಳ್ಳುತ್ತಿರುವುದಕ್ಕಾಗಿ ಆಡಳಿತ ಬಿಜೆಪಿಯ ಮೇಲೆ ಮುಗಿಬಿದ್ದಿರುವ ವಾಜಪೇಯಿಯವರ ಸೋದರಸೊಸೆ ಹಾಗೂ ಕಾಂಗ್ರೆಸ್ ನಾಯಕಿ ಕರುಣಾ ಶುಕ್ಲಾ ಅವರೊಂದಿಗೆ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರೂ ಕೈಜೋಡಿಸಿದ್ದಾರೆ. ದಿಲ್ಲಿಯ ರಾಮಲೀಲಾ ಮೈದಾನ ಸೇರಿದಂತೆ ಕೆಲವು ಹೆಗ್ಗುರುತುಗಳು ಮತ್ತು ಯೋಜನೆಗಳಿಗೆ ವಾಜಪೇಯಿಯವರ ನೆನಪಿನಲ್ಲಿ ಮರುನಾಮಕರಣಗೊಳಿಸುವ ಪ್ರಸ್ತಾವಗಳ ನಡುವೆಯೇ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿರುವ ಕೇಜ್ರಿವಾಲ್,‘ಇಂತಹ ಪ್ರಯತ್ನಗಳು ಬಿಜೆಪಿಗೆ ಮತಗಳನ್ನು ತರುವುದಿಲ್ಲ,ಆದರೆ ಪ್ರಧಾನಿಯ ಹೆಸರಿನಲ್ಲಿ ಜನರು ಮತಗಳನ್ನು ನೀಡುವುದಿಲ್ಲವಾದ್ದರಿಂದ ಅವರ ಹೆಸರನ್ನು ಬದಲಿಸಿ ಮತಗಳನ್ನು ತರಬಹುದು ’ಎಂದು ಶನಿವಾರ ಟ್ವಿಟರ್‌ನಲ್ಲಿ ಕುಟುಕಿದ್ದಾರೆ.

ದಿಲ್ಲಿ ಬಿಜೆಪಿ ವರಿಷ್ಠ ಮನೋಜ ತಿವಾರಿ ಮತ್ತು ಉತ್ತರ ದಿಲ್ಲಿ ಮಹಾನಗರ ಪಾಲಿಕೆಯ ಮೇಯರ್ ಆದೇಶಕುಮಾರ ಗುಪ್ತಾ ಅವರು ಇಂತಹ ಯಾವುದೇ ಯೋಜನೆಯನ್ನು ನಿರಾಕರಿಸಿದ್ದಾರೆ.

ರಾಮಲೀಲಾ ಮೈದಾನವನ್ನು ಮರುನಾಮಕರಣಗೊಳಿಸುವ ಪ್ರಶ್ನೆಯೇ ಇಲ್ಲ. ಕೆಲವರು ಅದರ ಸುತ್ತ ವಿವಾದವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಇದು ಸುಳ್ಳುಗಳನ್ನು ಹರಡುವ ಉದ್ದೇಶಪೂರ್ವಕ ಯತ್ನವಾಗಿದೆ ಎಂದು ತಿವಾರಿ ನುಡಿದರು.

ಎರಡು ಫುಟ್‌ಬಾಲ್ ಮೈದಾನಗಳಷ್ಟು ದೊಡ್ಡದಾಗಿರುವ ರಾಮಲೀಲಾ ಮೈದಾನವು ಪ್ರತಿಭಟನೆಗಳು ಮತ್ತು ಮತಪ್ರದರ್ಶನಗಳನ್ನು ನಡೆಸಲು ಮೊದಲ ಆಯ್ಕೆಯಾಗಿದೆ. ಪ್ರತಿವರ್ಷ ಅಲ್ಲಿ ನಡೆಯುವ ವೈಭವದ ರಾಮಲೀಲಾ ಪ್ರದರ್ಶನದಿಂದಾಗಿ ಅದು ಪ್ರಸಿದ್ಧವಾಗಿದೆ.

ಮರುನಾಮಕರಣದ ಹುಮ್ಮಸ್ಸಿನಲ್ಲಿದ್ದಂತೆ ಕಂಡು ಬರುತ್ತಿರುವ ಕೇಂದ್ರ ಮತ್ತು ಕೆಲ ರಾಜ್ಯಸರಕಾರಗಳು ಹಾಲಿ ಹೆಗ್ಗುರುತುಗಳು ಮತ್ತು ಕಾರ್ಯಕ್ರಮಗಳನ್ನು ವಾಜಪೇಯಿಯವರ ಹೆಸರಿನಿಂದ ಮರುನಾಮಕರಣ ಗೊಳಿಸಲು ಮತ್ತು ಯೋಜನೆಗಳನ್ನು ಅವರಿಗೆ ಅರ್ಪಿಸಲು ನಿರ್ಧರಿಸಿವೆ.

ಜೆಎನ್‌ಯುದ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್ ಆ್ಯಂಡ್ ಎಂಟರ್‌ಪ್ರೆನರ್ ಶಿಪ್, ಬುಂದೇಲಖಂಡ್ ಎಕ್ಸ್‌ಪ್ರೆಸ್‌ವೇ,ಛತ್ತೀಸಗಡದ ಮುಂಬರುವ ನೂತನ ರಾಜಧಾನಿ ನಯಾ ರಾಯಪುರ ಇತ್ಯಾದಿಗಳು ಪ್ರಸ್ತಾವಗಳ ಪಟ್ಟಿಯಲ್ಲಿವೆ.

 ಆದರೆ ಬಿಜೆಪಿಯ ಉದ್ದೇಶವನ್ನು ಶಂಕಿಸಿರುವ ಶುಕ್ಲಾ,ಬಿಜೆಪಿಯು ವಾಜಪೇಯಿಯವರ ಚಿತಾಭಸ್ಮದೊಂದಿಗೆ ರಾಷ್ಟ್ರಾದ್ಯಂತ ಸುತ್ತುತ್ತಿರುವ ಪರಿಯನ್ನು ಟೀಕಿಸಿದ್ದಾರೆ. ಇದೆಲ್ಲ ನಾಟಕ ಮತ್ತು ಅವರು ಮತಗಳಿಗಾಗಿ ಇದನ್ನುಮಾಡುತ್ತಿದ್ದಾರೆ. ಛತ್ತೀಸಗಡವನ್ನು ವಾಜಪೇಯಿಯವರೇ ಸೃಷ್ಟಿಸಿದ್ದರಾದರೂ ಮುಖ್ಯಮಂತ್ರಿ ರಮಣ ಸಿಂಗ್ ಮತ್ತು ಅವರ ಸಂಪುಟ ಸದಸ್ಯರು ಇತ್ತೀಚಿನವರೆಗೂ ಅವರನ್ನು ನೆನಪಿಸಿಕೊಂಡಿಯೇ ಇರಲಿಲ್ಲ ಎಂದು ಅವರು ಹೇಳಿದ್ದಾರೆ.

ಛತ್ತೀಸಗಡದ ಜಾಂಜಗಿರ್-ಚಂಪಾ ಕ್ಷೇತ್ರದ ಮಾಜಿ ಬಿಜೆಪಿ ಸಂಸದೆಯಾಗಿರುವ ಶುಕ್ಲಾ ರಾಜ್ಯದಲ್ಲಿ 2013ರ ಚುನಾವಣೆಗೆ ಮುನ್ನ ಪಕ್ಷವನ್ನು ತೊರೆದಿದ್ದರು ಮತ್ತು 2014ರಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದರು.

ಕಳೆದ 10ವರ್ಷಗಳಲ್ಲಿ ಬಿಜೆಪಿ ವಾಜಪೇಯಿಯವರ ಬಗ್ಗೆ ಚಿಂತಿಸಿಯೇ ಇರಲಿಲ್ಲ. ಈಗ ನಾಲ್ಕು ರಾಜ್ಯಗಳಲ್ಲಿ ಚುನಾವಣೆಗಳ ಹಿನ್ನೆಲೆಯಲ್ಲಿ ಅವರ ಸಾವನ್ನು ನಗದೀಕರಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಶುಕ್ಲಾ ಆರೋಪಿಸಿದ್ದಾರೆ.

ಆದರೆ ಈ ಆರೋಪವನ್ನು ನಿರಾಕರಿಸಿರುವ ಬಿಜೆಪಿ,ವಾಸ್ತವದಲ್ಲಿ ಶುಕ್ಲಾ ಅವರೇ ವಾಜಪೇಯಿಯವರ ಸಾವಿನ ಲಾಭವನ್ನು ಪಡೆಯಲು ಯತ್ನಿಸುತ್ತಿದಾರೆ ಎಂದು ಹೇಳಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X