ಗೌರಿ ಲಂಕೇಶ್ ಪ್ರಕರಣದ ತನಿಖಾಧಿಕಾರಿ ಸೇರಿ 122 ಪೊಲೀಸರಿಗೆ ಮುಖ್ಯಮಂತ್ರಿ ಪದಕ
ದ.ಕ ಜಿಲ್ಲೆಯ ಐವರು ಪೊಲೀಸರು ಆಯ್ಕೆ
ಎಂ.ಸುಂದರ್, ಸುನೀಲ್ ನಾಯಕ್, ಎನ್.ಎ.ಚಂದ್ರಶೇಖರ್, ರವೀಶ್ ನಾಯಕ್
ಬೆಂಗಳೂರು, ಆ.25: ವೃತ್ತಿಯಲ್ಲಿ ಗಣನೀಯ ಸೇವೆ ಸಲ್ಲಿಸಿದ ಕರ್ನಾಟಕದ 122 ಪೊಲೀಸರಿಗೆ 2017ನ ಸಾಲಿನ ಮುಖ್ಯಮಂತ್ರಿ ಪದಕ ಘೋಷಣೆಯಾಗಿದೆ.
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿಯ ತನಿಖಾಧಿಕಾರಿ ಎಂ.ಎನ್.ಅನುಚೇತ್ ಸೇರಿ 10 ಡಿಸಿಪಿ, ಜಿಲ್ಲಾ ಎಸ್ಪಿ , 11 ಎಸಿಪಿ, ಡಿವೈಎಸ್ಪಿ, 28 ಇನ್ಸ್ಪೆಕ್ಟರ್, 14 ಪಿಎಸ್ಸೈ 15 ಎಎಸ್ಸೈ, 25 ಮುಖ್ಯಪೇದೆ ಹಾಗೂ 17 ಪೇದೆಗಳ ಜೊತೆಗೆ, ಇಬ್ಬರು ಕೆಎಸ್ಆರ್ಪಿ ಅನುಯಾಯಿಗಳಿಗೂ ಪದಕ ಘೋಷಿಸಲಾಗಿದೆ.
ಪ್ರಶಸ್ತಿ ಪುರಸ್ಕೃತರು: ಡಿಸಿಪಿ- ಜಿಲ್ಲಾ ಎಸ್ಪಿ: ಎಂ.ಎನ್.ಅನುಚೇತ್, ಟಿ.ಪಿ.ಶಿವಕುಮಾರ್, ಬಿ.ಸಿ.ಕಲ್ಲಪ್ಪ, ಎಸ್.ಸಿದ್ದರಾಜು, ಎಸ್.ಕೆ.ಸೌಮ್ಯಲತಾ. ಎಸಿಪಿ-ಡಿವೈಎಸ್ಪಿ: ಎಂ.ಎಚ್.ಮಂಜುನಾಥ್ ಚೌಧರಿ, ಬಿ.ಪಿ.ಸುರೇಶ್ ಕುಮಾರ್, ಕೆ.ಪುರುಷೋತ್ತಮ, ವಜೀರ್ ಅಲಿ ಖಾನ್, ಪ್ರಭಾಕರ ಬಾರ್ಕಿ, ವಿ.ಸಿ.ಗೋಪಾಲ್ ರೆಡ್ಡಿ.
ಇನ್ಸ್ಪೆಕ್ಟರ್: ಟಿ. ಮುತ್ತುರಾಜು, ಕೆ.ಎನ್.ಯಶವಂತ್ ಕುಮಾರ್, ಎಂ.ಎಸ್.ಬೊಲೆತ್ತಿನ್, ಆರ್.ಎಂ. ಅಜಯ್, ಬಿ.ರಾಮಚಂದ್ರ, ಬಿ.ಅಂಜನ್ ಕುಮಾರ್, ರಮೇಶ್ ಜಗತಾಪ್, ಇ.ಎಸ್.ಸಮಂತು, ಬಿ.ಜಿ.ಶಂಕರಪ್ಪ, ಎಂ.ಎಲ್.ಸುಬ್ರಹ್ಮಣ್ಯಸ್ವಾಮಿ, ಕೆ.ಆರ್.ರವಿಕುಮಾರ್, ಎಂ.ಆರ್.ಪುಟ್ಟಮಾದಯ್ಯ, ಎಚ್.ಡಿ.ಕುಲಕರ್ಣಿ.
ಪಿಎಸ್ಸೈ: ಕೆ.ಬಿ.ರವಿ, ಡಿ.ಎಚ್.ಕೃಷ್ಣಪ್ಪ, ಎಸ್.ಕೃಷ್ಣಮೂರ್ತಿ, ಎಂ.ಕೆ.ಮುರಳೀಧರ, ಡಿ.ಪಿ.ಶರತ್ಕುಮಾರ್.
ಎಎಸ್ಸೈ: ಕೆ.ಎಂ.ಸವಿತಾ, ಬಿ.ಎಂ.ತ್ಯಾಗರಾಜು, ವಿ.ಮುನಿರಾಜು, ಆರ್.ರಾಜಗೋಪಾಲ್, ಎಂ.ಎಸ್.ಫಿಲಿಪ್ ಭಾಸ್ಕರ್, ಸಿ.ನಾಗರಾಜ್, ಎನ್.ಮುನಿರಾಜು.
ಮುಖ್ಯ ಪೇದೆ: ಬಿ.ಕಾಳನಾಯ್ಕ, ಅಲ್ತಾಫ್ ಹುಸೇನ್ ಎನ್.ದಖನಿ, ಎನ್.ಬಾಬು, ಮುನಿಯಲ್ಲಪ್ಪ, ಎಂ.ಗೋವಿಂದ, ವೈ.ವಿ.ಜಗದೀಶ್, ಎಸ್.ಕೃಷ್ಣೋಜಿ ರಾವ್, ಎಸ್.ವಾಸುದೇವ, ಆರ್.ರಮೇಶ್, ಎಂ.ಕುಮಾರಸ್ವಾಮಿ, ಎಂ.ಗಣೇಶ್ ರಾವ್, ಎಂ.ಎನ್.ಶಿವಸ್ವಾಮಿ, ಬಿ.ಜೆ.ಪುರುಷೋತ್ತಮ.
ಪೇದೆ: ಎಚ್.ಎಂ.ಲೋಕೇಶ್, ಎಚ್.ಎನ್.ಗಿರೀಶ್, ಹನುಮಂತ ಎಂ.ದೊಡ್ಡಮನಿ, ಜಿ.ಕೆ.ಸತೀಶ್, ಎಸ್.ಎ.ರವಿ, ಎಚ್.ಶ್ರೀಧರ.
ದ.ಕ ಜಿಲ್ಲೆಯ 5 ಪೊಲೀಸರು ಆಯ್ಕೆ
2018ನೇ ಸಾಲಿನ ಮುಖ್ಯಮಂತ್ರಿಗಳ ಪದಕಕ್ಕೆ ದ.ಕ. ಜಿಲ್ಲೆಯ ಐವರು ಪೊಲೀಸರು ಆಯ್ಕೆಯಾಗಿದ್ದಾರೆ.
ಮಂಗಳೂರು ಸಿಸಿಬಿ ಘಟಕದ ಎನ್.ಎ.ಚಂದ್ರಶೇಖರ್, ದ.ಕ. ಜಿಲ್ಲಾ ಡಿಸಿಐಬಿ ಪೊಲೀಸ್ ಇನ್ಸ್ಪೆಕ್ಟರ್ ಸುನೀಲ್ ವೈ. ನಾಯಕ್, ಉಳ್ಳಾಲ ಪೊಲೀಸ್ ಠಾಣೆಯ ಎಸ್ಸೈ ಎಂ.ಸುಂದರ್, ಉರ್ವ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ರವೀಶ್ ಎಸ್. ನಾಯಕ್, ಬಂಟ್ವಾಳ ಪೊಲೀಸ್ ಠಾಣೆಯ ಉದಯ ರೈ ಮುಖ್ಯಮಂತ್ರಿಗಳ ಪದಕಕ್ಕೆ ಆಯ್ಕೆಯಾಗಿದ್ದಾರೆ.ಶೀಘ್ರ ಪ್ರದಾನ
ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿರುವ ಐಜಿಪಿ (ಆಡಳಿತ) ಅಮ್ರಿತ್ ಪಾಲ್, ‘ಪ್ರಶಸ್ತಿ ಪ್ರದಾನ ದಿನಾಂಕವನ್ನು ಸದ್ಯದಲ್ಲೇ ನಿಗದಿಪಡಿಸಲಾಗುವುದು’ ಎಂದಿದ್ದಾರೆ.