ಅನಸ್, ರಾಜೀವ್ ಸೆಮಿ ಫೈನಲ್‌ಗೆ ಹೈಜಂಪ್‌ನಲ್ಲಿ ಚೇತನ್ ಪೈನಲ್‌ಗೆ

ಜಕಾರ್ತ, ಆ.25: ಏಶ್ಯನ್ ಗೇಮ್ಸ್ ನ ಅಥ್ಲೆಟಿಕ್ಸ್ ಸ್ಪರ್ಧೆಯ ಮೊದಲ ದಿನವಾದ ಶನಿವಾರ ಏಶ್ಯನ್ ಚಾಂಪಿಯನ್ ಮುಹಮ್ಮದ್ ಅನಸ್ ಹಾಗೂ ಅರೋಕಿಯಾ ರಾಜೀವ್ ಪುರುಷರ 400 ಮೀ. ಓಟದಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದಾರೆ.
400 ಮೀ. ಸ್ಪರ್ಧೆಯಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿರುವ ಅನಸ್ 45.63 ಸೆಕೆಂಡ್‌ನಲ್ಲಿ ಗುರಿ ತಲುಪಿ ತನ್ನ ಹೀಟ್‌ನಲ್ಲಿ ಅಗ್ರ ಸ್ಥಾನ ಪಡೆದರು. ರಾಜೀವ್ 46.82 ಸೆಕೆಂಡ್‌ನಲ್ಲಿ ಗುರಿ ತಲುಪಿ ಹೀಟ್-4ರಿಂದ ಸೆಮಿ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ.
ಇದೇ ವೇಳೆ ಹೈಜಂಪ್ ಸ್ಪರ್ಧೆಯಲ್ಲಿ 2.15 ಮೀ.ದೂರಕ್ಕೆ ಜಿಗಿದ ಚೇತನ್ ಬಾಲಸುಬ್ರಹ್ಮಣ್ಯ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ. ಕಣದಲ್ಲಿದ್ದ 13 ಸ್ಪರ್ಧಾಳುಗಳು ಅರ್ಹತಾ ಅಂಕ(2.20) ತಲುಪಲು ವಿಫಲರಾದರು. ಚೇತನ್ ಮೊದಲ ಪ್ರಯತ್ನದಲ್ಲಿ 2.05 ಮೀ. ದೂರಕ್ಕೆ ಜಿಗಿದರು. ಆನಂತರ 2.15 ಮೀ.ದೂರಕ್ಕೆ ನೆಗೆಯಲು ಯಶಸ್ವಿಯಾದರು.
Next Story





