400 ಮೀ. ಓಟ: ಹಿಮಾ ದಾಸ್, ನಿರ್ಮಲಾ ಫೈನಲ್‌ಗೆ ಪ್ರವೇಶ
ಜಕಾರ್ತ, ಆ.25: ಭಾರತದ ಓಟಗಾರ್ತಿಯರಾದ ಹಿಮಾ ದಾಸ್ ಹಾಗೂ ನಿರ್ಮಲಾ ಶೆರೊನ್ ಏಶ್ಯನ್ ಗೇಮ್ಸ್‌ನ ಮಹಿಳೆಯರ 400 ಮೀ. ಓಟದಲ್ಲಿ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ.
ಇಲ್ಲಿ ಶನಿವಾರ ನಡೆದ 400 ಮೀ.ಅರ್ಹತಾ ಸುತ್ತಿನ ಹೀಟ್-1ರಲ್ಲಿ 51 ಸೆಕೆಂಡ್‌ನಲ್ಲಿ ಗುರಿ ತಲುಪಿದ ಕಿರಿಯ ಓಟಗಾರ್ತಿ ಹಿಮಾ ಫೈನಲ್‌ಗೆ ತೇರ್ಗಡೆಯಾದರು. ಹೀಟ್-3ರಲ್ಲಿ 54.09 ಸೆಕೆಂಡ್‌ನಲ್ಲಿ ಗುರಿ ಪೂರೈಸಿದ ನಿರ್ಮಲಾ ಫೈನಲ್‌ನಲ್ಲಿ ಸ್ಥಾನ ಪಡೆದಿದ್ದಾರೆ.
ಮಹಿಳೆಯರ 10,000 ಮೀ. ಮ್ಯಾರಥಾನ್‌ನಲ್ಲಿ ಭಾರತದ ಸಂಜೀವನಿ ಬಾಬುರಾವ್ ಜಾಧವ್ ಹಾಗೂ ಸೂರ್ಯ ಲೋಕನಾಥನ್ ಕ್ರಮವಾಗಿ ಆರನೇ ಹಾಗೂ 9ನೇ ಸ್ಥಾನ ಪಡೆದು ಪದಕ ಗೆಲ್ಲಲು ವಿಫಲರಾಗಿದ್ದಾರೆ. ಶ್ರೀಶಂಕರ್ ಫೈನಲ್‌ಗೆ: ಪುರುಷರ ಲಾಂಗ್‌ಜಂಪ್‌ನ ಅರ್ಹತಾ ಸುತ್ತಿನಲ್ಲಿ ತನ್ನ ಮೊದಲ ಪ್ರಯತ್ನದಲ್ಲಿ 7.83 ಮೀ. ದೂರಕ್ಕೆ ಜಿಗಿದ ಶ್ರೀಶಂಕರ್ ಫೈನಲ್ ಸುತ್ತಿಗೆ ಪ್ರವೇಶಿಸಿದ್ದಾರೆ.
Next Story





