ಹನೂರು : ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ವಾರ್ಷಿಕ ಮಹಾಸಭೆ

ಹನೂರು,ಆ.26 : ಹಾಲು ಉತ್ಪಾದಕರು ಗುಣಮಟ್ಟದ ಹಾಲನ್ನು ಒಕ್ಕೂಟಕ್ಕೆ ಪೂರೈಕೆ ಮಾಡುವ ಮೂಲಕ ಸರ್ಕಾರದ ಹೆಚ್ಚುವರಿ ಪ್ರೋತ್ಸಾಹ ಧನದ ಪ್ರಯೋಜನ ಪಡೆಯುವಂತೆ ಚಾಮುಲ್ ಅದ್ಯಕ್ಷ ಗುರುಮಲ್ಲಪ್ಪ ತಿಳಿಸಿದರು.
ಹನೂರು ಸಮೀಪದ ನಾಗನತ್ತ ಕ್ರಾಸ್ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ 2017-18ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಸಂಘದ ಆವರಣದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸಭೆಗೂ ಮುನ್ನ ಚಾಮುಲ್ ವಿಸ್ತರಣಾಧಿಕಾರಿ ಸೋಮಶೇಖರ್ ಈ ಸಂಘದ ಲೆಕ್ಕ ಪತ್ರವನ್ನು ಮಂಡಿಸಿ 2017-18ಸಾಲಿನಲ್ಲಿ 1,80,376ರೂ ನಿವ್ವಳಲಾಭ ಹೂಂದಿದೆ ಎಂದರು.
ಕಾರ್ಯಕ್ರವನ್ನು ಉದ್ದೇಶಿಸಿ ಮಾತನಾಡಿದ ಚಾಮುಲ್ ಅದ್ಯಕ್ಷರು, ರಾಜ್ಯ ಪಶುಪಾಲನೆ ಮತ್ತು ಪಶು ವೈದ್ಯ ಇಲಾಖೆಯಿಂದ ಬಂದಿರುವ ಸುತ್ತೋಲೆಯಂತೆ ಆಹಾರ ಖಾಯ್ದೆ ಅನ್ವಯ ಶೇ3.5 ಜಿಡ್ಡು, 8.5ರಷ್ಟ ಎಸ್‍ಎನ್‍ಎಫ್ ಇರುವ ಹಾಲಿಗೆ ಮಾತ್ರ ಸರ್ಕಾರದ ಪ್ರೋತ್ಸಾಹ ಧನ ನೀಡಲು ನಿರ್ದರಿಸಿದ್ದು , ಇದರಂತೆ ಹಾಲು ಉತ್ಪಾದಕರು ಗುಣ ಮಟ್ಟದ ಹಾಲು ಹಾಕುವುದರೂಂದಿಗೆ ಸಂಘದಲ್ಲಿರುವ ಸರ್ವ ಸದಸ್ಯರು ಕೂಡ ಸಣ್ಣ ಪುಟ್ಟ ವಿಚಾರದಲ್ಲಿ ವ್ಯತ್ಯಾಸ ಬಂದಾಗ ಸೌಜನ್ಯದಿಂದ ವರ್ತಿಸಿ ಸಂಘದ ಬೆಳವಣಿಗೆಗೆ ಒಮ್ಮತ್ತದಿಂದ ಸಹಕರಿಸಬೇಕು ಮತ್ತು ರಾಸುಗಳಿಗೆ ವಿಮೆ ಮಾಡಿಸುವಂತೆ ಜಾನುವಾರುಗಳ ಪಾಲಕರಿಗೆ ವಿಮಾ ಸೌಲಭ್ಯದ ಕುರಿತು ಸಮಗ್ರವಾದ ರೀತಿಯಲ್ಲಿ ಮಾಹಿತಿ ನೀಡಿದರು
ಚಾಮುಲ್ ಉಪವ್ಯವಸ್ಥಾಪಕ ಹೆಚ್ .ಸಿ ಶರತ್‍ಕುಮಾರ್ ಮಾತನಾಡಿ, ಕೊಳ್ಳೇಗಾಲ ತಾಲ್ಲೂಕಿನ ಶೇ 8 ರಷ್ಟು ಹಾಲು ಉತ್ಪಾದಕರು ತಮ್ಮ ಬ್ಯಾಂಕ್ ಖಾತೆಯಲ್ಲಿ ನಿಗದಿತ ಹಣವು ಜಮೆಮಾಡದೇ, ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸದೇ ಇರುವುದರಿಂದ ಮತ್ತು ಅವರ ಬ್ಯಾಂಕ್ ಖಾತೆಯೂ ಚಾಲನೆ ಇಲ್ಲದೆ ರದ್ದಾಗಿರುವುದರಿಂದ ಉತ್ಪಾದಕರ ಖಾತೆಗೆ ಹಣವು ಸರಿಯಾದ ರೀತಿಯಲ್ಲಿ ಹಣವನ್ನು ಜಮೆಮಾಡಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ಉತ್ಪಾದಕರು ತಮ್ಮ ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸಿ ಸರಿದೂಗಿಸಿಕೊಳ್ಳಬೇಕು ಎಂದು ತಿಳಿಸಿದರು
ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷೆ ಜಯಶೀಲ ,ಚಾಮುಲ್ ಉಪವ್ಯವಸ್ಥಾಪಕ ಹೆಚ್.ಸಿ ಶರತ್‍ಕುಮಾರ್, ವಿಸ್ತರಣಾಧಿಕಾರಿ ಬಿ.ಸೋಮಶೇಖರ್ , ಸಮಲೋಚನಾಧಿಕಾರಿ ಶರತ್ , ಮುಖ್ಯ ಕಾರ್ಯನಿರ್ವಾಹಕ ಜಿ.ಶಕುಂತಲ ಸೇರಿದಂತೆ ಹೂನ್ನಪ್ಪ, ಮಹದೇವಪ್ಪ ಇನ್ನಿತರರು ಹಾಜರಿದ್ದರು.







