ಆಟೋಗೆ ಟ್ಯಾಂಕರ್ ಢಿಕ್ಕಿ : ಓರ್ವ ಮೃತ್ಯು

ಮಂಡ್ಯ, ಆ.26: ಪ್ರಯಾಣಿಕರ ಆಟೋಗೆ ಟ್ಯಾಂಕರ್ ಢಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿ, ಮಹಿಳೆಯೊಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ಮಳವಳ್ಳಿ ತಾಲೂಕು ಬೆಳಕವಾಡಿಯ ಮಹದೇಶ್ವರ ಪೆಟ್ರೋಲ್ ಬಂಕ್ ಬಳಿ ನಡೆದಿದೆ.
ಮಳವಳ್ಳಿ ತಾಲೂಕಿನ ಪೂರಿಗಾಲಿಯ ಮಾದಶೆಟ್ಟಿ ಎಂಬುವವರ ಪುತ್ರ ಸಿದ್ದರಾಜು(22) ಸಾವನ್ನಪ್ಪಿದ್ದು, ಸೋಮನಹಳ್ಳಿ ಗ್ರಾಮದ ಮಹಾದೇವಮ್ಮ ತೀವ್ರ ಗಾಯಗೊಂಡಿದ್ದಾರೆ. ಟ್ಯಾಂಕರ್ ಚಾಲಕ ಸುರೇಶ್ ಎಂಬಾತನನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





