ವ್ಯಾಪಾರ ಸಂಸ್ಕೃತಿ ಬೇಡ: ಪ್ರೊ.ಶಾಂತರಾಜು
ಬೆಂಗಳೂರು, ಆ. 26: ಜಾಹೀರಾತುಗಳ ಮೂಲಕ ಅಲ್ಪ ರಿಯಾಯಿತಿಯನ್ನು ನೀಡಿ ಪೂರ್ಣ ಕಿತ್ತುಕೊಳ್ಳುವ ವ್ಯಾಪಾರಿ ಸಂಸ್ಕೃತಿ ಬೇಡ ಎಂದು ಪ್ರೊ.ಶಾಂತರಾಜು ಸಲಹೆ ಮಾಡಿದ್ದಾರೆ.
ರವಿವಾರ ನಗರದ ಚಾಮರಾಜಪೇಟೆಯ ಕಸಾಪ ಸಭಾಂಗಣದಲ್ಲಿ ಆಯೋಜಿಸಿದ ‘ಸುಳ್ಳೇ ನಮ್ಮನೆ ದೇವರು’ ಕೃತಿ ಲೋಕಾರ್ಪಣೆ ಹಾಗೂ ಕನ್ನಡ ಆದರ್ಶ ದಂಪತಿ ಪ್ರಶಸ್ತಿ ಸಮಾರಂಭದಲ್ಲಿ ಮಾತನಾಡಿದ ಅವರು, ಜಾಹೀರಾತುಗಳು ವ್ಯಾಪಾರಿ ನಿಲುವಿನ ಮೂಲಕ ಜನರನ್ನು ದಾರಿ ತಪ್ಪಿಸಿ, ಹಣ ಸುಲಿಗೆ ಮಾಡುತ್ತಿದ್ದಾರೆಂದು ತಿಳಿಸಿದರು.
ರಾಜಕೀಯದವರು ನಮ್ಮನ್ನು ಹಿಡಿದಿಟ್ಟುಕೊಂಡಿದ್ದಾರೆ. ಎಲ್ಲಿಯವರೆಗೂ ಹೆಬ್ಬೆಟ್ಟಿನ ಧ್ವನಿ ಇರುತ್ತದ್ದೇಯೋ ಅಲ್ಲಿಯವರೆಗೂ ರಾಜಕೀಯ ರೋಗಗ್ರಸ್ಥವಾಗಿ ಇರುತ್ತದೆ ಎಂದರು. ವಿಮರ್ಶೆಯಿಂದಲೇ ಬದಕು ಪ್ರಾರಂಭವಾಗುತ್ತದೆ. ಯಾರಿಗೂ ಯಾರು ಸಮಾಜದಲ್ಲಿ ಕೀಳಲ್ಲ, ನಮ್ಮಲ್ಲಿ ಕೀಳಿರಿಮೆಯನ್ನು ಬೆಳೆಸಿಕೊಳ್ಳಬಾರದು. ಇನ್ನು ಸುಳ್ಳೇ ನಮ್ಮನೆ ದೇವರು ಕೃತಿ ಲೇಖಕರನ್ನು ಕುರಿತು ಹಾಸ್ಯವೆಂಬುದು ಅನುಭವದಿಂದ ತುಂಬಿತೆ ಹೊರತು, ಅನುಭವವೇ ಹಾಸ್ಯವಾಗಿರಲಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಾಸ್ಯ ಲೇಖಕ ಎಂ.ಎಸ್.ನರಸಿಂಹಮೂರ್ತಿ, ನಗರ ಜಿಲ್ಲಾ ಕಸಾಪ ಅಧ್ಯಕ್ಷ ಮಾಯಣ್ಣ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.





