ಕೊಡಗು ಜಿಲ್ಲೆಯ ಮೂವರು ಪೊಲೀಸರಿಗೆ ಮುಖ್ಯಮಂತ್ರಿ ಪದಕ
ಮಡಿಕೇರಿ,ಆ.26: ಕಳೆದ (2017)ಸಾಲಿನ ಮುಖ್ಯಮಂತ್ರಿಗಳ ಪದಕಕ್ಕಾಗಿ ಕೊಡಗು ಜಿಲ್ಲೆಯ ಮೂರು ಮಂದಿ ಪೊಲೀಸ್ ಸಿಬ್ಬಂದಿಗಳನ್ನು ಆಯ್ಕೆ ಮಾಡಲಾಗಿದೆ.
ಇವರಲ್ಲಿ ಮಡಿಕೇರಿಯ ಜಿಲ್ಲಾ ಅಪರಾಧ ಪತ್ತೆದಳದ ಇನ್ಸ್‍ಪೆಕ್ಟರ್ ಎಂ. ಮಹೇಶ್, ಜಿಲ್ಲಾ ನಿಯಂತ್ರಣ ಕೇಂದ್ರ (ನಿಸ್ತಂತು)ದ ಎಎಸ್‍ಐ ಬಿ.ಕೆ.ಸುರೇಶ್ ಹಾಗೂ ಸೋಮವಾರಪೇಟೆ ಪೊಲೀಸ್ ಠಾಣೆಯ ಸಿಹೆಚ್‍ಸಿ ಟಿ.ಎಸ್.ಸಾಜಿ ಅವರುಗಳು ಸೇರಿದ್ದಾರೆ.
ಈ ಕುರಿತು ಆ.25ರಂದು ಆಡಳಿತ ವಿಭಾಗದ ಐಜಿಪಿ ಅಮ್ರಿತ್‍ಪಾಲ್ ಅವರು ಆದೇಶ ಹೊರಡಿಸಿದ್ದಾರೆ.
Next Story





