ಶ್ರೀಕೃಷ್ಣ ಜನ್ಮಾಷ್ಟಮಿ: ರಾಜ್ಯಮಟ್ಟದ ಮೊಬೈಲ್ ಫೋಟೋಗ್ರಾಫಿ ಸ್ಪರ್ಧೆ
ಉಡುಪಿ, ಆ. 26: ಉಡುಪಿ ಶ್ರೀಕೃಷ್ಣಮಠ, ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ಉಡುಪಿಯಲ್ಲಿ ಸೆ. 2 ಮತ್ತು 3ರಂದು ನಡೆಯುವ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿ ಹಬ್ಬದ ಅಂಗವಾಗಿ ಉಡುಪಿ ಪ್ರೆಸ್ ಫೊಟೋ ಗ್ರಾಫರ್ಸ್ ಅಸೋಸಿಯೇಶನ್ ದಶಮಾನೋತ್ಸವದ ಪ್ರಯುಕ್ತ ಉಡುಪಿಯ ಕಿದಿಯೂರು ಹೊಟೇಲ್ ಹಾಗೂ ಕುಂದಾಪುರ ಹೊಂಡಾ ಶೋರೂಮ್ ಪ್ರಾಯೋಜಕತ್ವದಲ್ಲಿ ಕಿದಿಯೂರು ಉಪ್ಪಾಮೂಡ್ಸ್ ಆಫ್ ಶ್ರೀಕೃಷ್ಣ ಜನ್ಮಾಷ್ಟಮಿ ರಾಜ್ಯಮಟ್ಟದ ಮೊಬೈಲ್ ಛಾಯಾಚಿತ್ರ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಸ್ಪರ್ಧೆಯಲ್ಲಿ ಭಾಗವಹಿಸಲು ಯಾವುದೇ ಶುಲ್ಕ ಇಲ್ಲ. ಮೊಬೈಲ್‌ನಲ್ಲಿಯೇ ತೆಗೆದ ಚಿತ್ರಗಳಾಗಿರಬೇಕು. ಒಬ್ಬರು ಗರಿಷ್ಠ 4 ಚಿತ್ರ ಕಳಿಸಬಹುದು. ಎಲ್ಲವೂ ಬಹುವರ್ಣದಲ್ಲಿಯೇ ಇರಬೇಕು. 5x7(ಕ್ಯಾಬಿನೇಟ್ ಸೈಜ್) ಇಂಚು ಅಗಲದ ಚಿತ್ರಗಳನ್ನೇ ಕಳುಹಿಸಬೇಕು. ಚಿತ್ರದ ಹಿಂಬದಿಯಲ್ಲಿ ಪರ್ಮನೆಂಟ್ ಮಾರ್ಕರ್ ಪೆನ್‌ನಿಂದ ಹೆಸರು, ಮೊಬೈಲ್ ಸಂಖ್ಯೆ ಹಾಗು ವಿಳಾಸವನ್ನು ಸ್ಪಷ್ಟವಾಗಿ ಬರೆದು ಪ್ಯಾಕ್‌ಮಾಡಿ ಸೆ.20ರೊಳಗೆ ಜನಾರ್ದನ್ ಕೊಡವೂರು, (9448252363) ಭಾಮಾ, ಕೆನರಾ ಬ್ಯಾಂಕ್ ಬಳಿ, ಕೊಡವೂರು- 576106 ಅಥವಾ ಆಸ್ಟ್ರೋ ಮೋಹನ್, ಸಂಚಾಲಕರು, ಹೇಮಾದ್ರಿ, ಮ.ನಂ. 1-1-99 ಬಿ1, ಬಿಎಡ್ ಕಾಲೇಜು ರಸ್ತೆ, ಕುಂಜಿಬೆಟ್ಟು, ಉಡುಪಿ 576102 ಇಲ್ಲಿಗೆ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿದ ಚಿತ್ರಗಳನ್ನು ಹಿಂದಿರುಗಿಸಲಾಗುವುದಿಲ್ಲ. ಆಯ್ಕೆಯಾದ ಚಿತ್ರಗಳಿಗೆ ಪ್ರಥಮ 3333ರೂ., ದ್ವಿತೀಯ 2222 ರೂ., ತೃತೀಯ 1111 ರೂ. ನಗದು ಹಾಗೂ 5 ಸಮಾಧಾನಕರ ಬಹುಮಾನ ಮತ್ತು ಆಕರ್ಷಕ ಸ್ಮರಣಿಕೆ ಹಾಗು ಅಭಿನಂದನಾ ಪತ್ರ ನೀಡಲಾಗುವುದು. ಸ್ಪರ್ಧೆಗೆ ಕಳಿಸುವ ಚಿತ್ರಗಳು ಉಡುಪಿಯಲ್ಲಿ ಈ ಬಾರಿ(2018) ನಡೆಯುವ ಜನ್ಮಾಷ್ಟಮಿ ವಿಟ್ಲಪಿಂಡಿ ಮಹೋತ್ಸವಕ್ಕೆ ಮಾತ್ರ ಸಂಬಂಧಪಟ್ಟದ್ದಾಗಿರಬೇಕು ಎಂದು ಉಪ್ಪಾಅಧ್ಯಕ್ಷ ಜನಾರ್ದನ ಕೊಡವೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







