ಕೊಡಗು ಗ್ರಾಮ ದತ್ತು ಯೋಜನೆಯ ಕಚೇರಿ ಉದ್ಘಾಟನೆ

ಉಡುಪಿ, ಆ. 26: ಕೊಡಗಿನ ಪ್ರಕೃತಿ ವಿಕೋಪಕ್ಕೆ ಗುರಿಯಾದ ಜನರ ಪುನರ್ವಸತಿಗಾಗಿ ಗ್ರಾಮ ದತ್ತು ಯೋಜನೆಯ ದೇಣಿಗೆ ಸ್ವೀಕಾರಕ್ಕಾಗಿ ಮಠದಲ್ಲಿ ಆರಂಭಿಸಲಾದ ಕಚೇರಿಯನ್ನು ಶ್ರೀಕೃಷ್ಣ ಮಠದ ಪರ್ಯಾಯ ಪಲಿಮಾರು ಮಠಾಧೀಶ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ಇಂದು ಉದ್ಘಾಟಿಸಿದರು.
ಪ್ರಕೃತಿ ವಿಕೋಪಗಳು ಅನಿರೀಕ್ಷಿತ. ನಾವು ಅದನ್ನು ತಿರಸ್ಕರಿಸದೆ ಇದೊಂದು ದೇವರ ಪರೀಕ್ಷೆ ಎಂದು ಅರಿಯಬೇಕು. ಇಂತಹ ಸಂದರ್ಭದಲ್ಲಿ ತನು, ಮನ ಮತ್ತು ಧನದಿಂದ ಸಹಕರಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಪರ್ಯಾಯ ಪಲಿಮಾರು ಸ್ವಾಮೀಜಿ ತಿಳಿಸಿದರು.
ಈ ಯೋಜನೆಗೆ ರೋಟರಿ ಡಿಸ್ಟ್ರಿಕ್ಟ್ ಗವರ್ನರ್ ಅಭಿನಂದನ್ ಎ.ಶೆಟ್ಟಿ ಮತ್ತು ಲಲಿತಾ ಇಂಟರ್‌ನ್ಯಾಶನಲ್ ಪಬ್ಲಿಕ್ ಸ್ಕೂಲ್ ನ ಅಧ್ಯಕ್ಷೆ ಶಶಿಕಲಾ ಈ.ಆರ್. ದಾವಣಗೆರೆ ಸಹಕಾರ ನೀಡಲು ಮುಂದೆ ಬಂದಿದ್ದಾರೆ. ಈ ಸಂದರ್ಭದಲ್ಲಿ ರಾಘವೇಂದ್ರ ಆಚಾರ್ಯ ಬಾಲಾಜಿ, ಚ್ಚಿದಾನಂದ ರಾವ್ ಉಪಸ್ಥಿತರಿದ್ದರು.
Next Story





