ಪಿಯುಸಿಎಲ್ ಜಿಲ್ಲಾಧ್ಯಕ್ಷರಾಗಿ ಕೆ.ಬಿ.ಓಬಳೇಶ್, ಪ್ರಧಾನ ಕಾರ್ಯದರ್ಶಿ ಪಾರಿಜಾತಾ ಆಯ್ಕೆ
ಬೆಂಗಳೂರು, ಆ.23: ಪಿಯುಸಿಎಲ್(ಪಿಪಲ್ಸ್ ಯುನಿಯನ್ ಪಾರ್ ಸಿವಿಲ್ ಲಿಬರ್ಟಿಸ್) ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಕೆ.ಬಿ.ಓಬಳೇಶ್, ಪ್ರಧಾನ ಕಾರ್ಯದರ್ಶಿ ಪಾರಿಜಾತಾ, ಉಪಾಧ್ಯಕ್ಷ ಪುರುಷೋತ್ತಮ ಹಾಗೂ ಖಜಾಂಚಿಯಾಗಿ ರಿಚಾರ್ಡ್ಸ್ ಆಯ್ಕೆಯಾಗಿದ್ದಾರೆ.
ಕಳೆದ ಆ.8ರಂದು ನಗರದಲ್ಲಿ ನಡೆದ ಸರ್ವಸದಸ್ಯರ ಸಭೆಯಲ್ಲಿ ಜಿಲ್ಲಾ ಘಟಕವನ್ನು ಪುನರ್ ರಚಿಸಿ, ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಪಿಯುಸಿಎಲ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾರಿಜಾತಾ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಪಿಯುಸಿಎಲ್ ಕುರಿತು: ಪಿಯುಸಿಎಲ್ (ಪಿಪಲ್ಸ್ ಯೂನಿಯನ್ ಪಾರ್ ಸಿಲ್ ಲಿಬರ್ಟೀಸ್) 1975ರಲ್ಲಿ ರಾಷ್ಟ್ರ ಮಟ್ಟದಲ್ಲಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸಾಮಾನ್ಯ ನಾಗರೀಕರ ಬದುಕುವ ಹಕ್ಕುಗಳನ್ನು ಸಂರಕ್ಷಿಸಲು ಹುಟ್ಟಿಕೊಂಡ ಜನರ ಒಕ್ಕೂಟವಾಗಿದೆ. ಸಮಾಜವಾದಿ ನಾಯಕ ಜಯಪ್ರಕಾಶ ನಾರಾಯಣರವರ ನೇತೃತ್ವದಲ್ಲಿ ರಚನೆಗೊಂಡ ಮಾನವ ಹಕ್ಕುಗಳ ಸಂಘಟನೆಯಾಗಿದೆ.
ಪಿಯುಸಿಎಲ್‌ಗೆ ಕಳೆದ 43 ವರ್ಷಗಳಲ್ಲಿ ಅನೇಕ ಮಾನವ ಹಕ್ಕು ಪರಿಣಿತರು, ಗಣ್ಯರು ರಾಷ್ಟ್ರ ಮಟ್ಟದಲ್ಲಿ ನಾಯಕತ್ವ ವಹಿಸಿದ್ದಾರೆ. ಮಾನವ ಹಕ್ಕುಗಳ ಹೋರಾಟಗಾರ ಜಸ್ಟೀಸ್ ರಾಜೇಂದರ್ ಸಚಾರ್‌ರಂತಹ ಮಾನವ ಹಕ್ಕು ಪ್ರತಿಪಾದಕರು ರಾಷ್ಟ್ರಿೀಯ ಅಧ್ಯಕ್ಷರಾಗಿ ಮುನ್ನಡೆಸಿದ್ದಾರೆ.







