ಬೋಳಂತೂರು: ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ ಪೂರ್ವಭಾವಿ ಸಮಾಲೋಚನಾ ಸಭೆ

ಬಂಟ್ವಾಳ, ಆ. 26: ಇಲ್ಲಿನ ಬೋಳಂತೂರು ಗ್ರಾಮೀಣ ಪ್ರದೇಶದಲ್ಲಿ ಕನಿಷ್ಟ 50 ಸೆಂಟ್ಸ್ ಮೇಲ್ಪಟ್ಟು ಕೃಷಿ ಜಮೀನು ಹೊಂದಿರುವ ರೈತರು ಒಟ್ಟಾಗಿ ಗುಂಪು ರಚಿಸುವ ಮೂಲಕ ತೋಟಗಾರಿಕೆ ನಿರ್ವಹಿಸಲು ಗುಂಪಿನ ಸದಸ್ಯರಿಗೆ ಇಲಾಖೆ ವತಿಯಿಂದ ಸಹಾಯಧನ ಲಭಿಸುತ್ತದೆ ಎಂದು ಬಂಟ್ವಾಳ ತೋಟಗಾರಿಕಾ ಸಹಾಯಕ ನಿರ್ದೇಶಕ ದಿನೇಶ್ ಹೇಳಿದ್ದಾರೆ.
ತಾಲೂಕಿನ ಬೋಳಂತೂರು ಮಹಾಬಲ ರೈ ಮನೆ ಬಳಿ ಸೋಮವಾರ ಏರ್ಪಡಿಸಿದ್ದ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ಪಿಂಗಾರ ತೋಟಗಾರಿಕೆ ರೈತ ಸಂಸ್ಥೆ ನಿರ್ದೇಶಕ ಜಯರಾಮ ರೈ ಬೋಳಂತೂರು, ಗ್ರಾಪಂ ಉಪಾಧ್ಯಕ್ಷ ಚಂದ್ರಶೇಖರ ರೈ ಮತ್ತಿತರರು ಸಲಹೆ ನೀಡಿದರು.
ಸಮಿತಿ ರಚನೆ:
ಇದೇ ವೇಳೆ ಸಂಜೀವಿನಿ ಕಾಳು ಮೆಣಸು ಬೆಳೆಗಾರರ ಸಂಘ ರಚಿಸಿ ಹೊಸ ಕಾಳು ಮೆಣಸು ಬೆಳೆ ಬೆಳೆಸಲು ನಿರ್ಧರಿಸಲಾಯಿತು.
ಅಧ್ಯಕ್ಷರಾಗಿ ಪ್ರಗತಿಪರ ಕೃಷಿಕ ಮಹಾಬಲ ರೈ, ಉಪಾಧ್ಯಕ್ಷರಾಗಿ ವೆಂಕಪ್ಪ ವೀರಕಂಭ, ಕಾರ್ಯದರ್ಶಿಯಾಗಿ ಗಂಗಾಧರ ಚೌಟ ಕೊಳ್ನಾಡು ಇವರನ್ನು ಆಯ್ಕೆಗೊಳಿಸಲಾಯಿತು.
Next Story





