ಕುಪ್ವಾರ: ನಾಲ್ವರು ಉಗ್ರರು ಶರಣಾಗತ

ಶ್ರೀನಗರ, ಆ. 26: ಜಮ್ಮು ಹಾಗೂ ಕಾಶ್ಮೀರದ ಕುಪ್ವಾರ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಒಳ ನುಸುಳುವುದನ್ನು ತಡೆಯಲು ಕಾರ್ಯಾಚರಣೆ ಆರಂಭಿಸಿದ ಬಳಿಕ ರವಿವಾರ ಅಲ್-ಖೈದಾದ ಸಹ ಸಂಘಟನೆಯಿಂದ ತರಬೇತಿ ಪಡೆದ ನಾಲ್ವರು ಉಗ್ರರು ಭದ್ರತಾ ಪಡೆಯ ಮುಂದೆ ಶರಣಾಗತರಾಗಿದ್ದಾರೆ.
ಅಲ್-ಬದರ್‌ನ ಮೂವರು ಉಗ್ರರಿಂದ ನಿರ್ದೇಶಿತರಾದ ನೂತನವಾಗಿ ನಿಯೋಜಿತರಾದ ನಾಲ್ವರು ಉಗ್ರರು ಗಡಿ ನುಸುಳಲು ಯೋಜಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಸೇನೆ ಪೊಲೀಸರೊಂದಿಗೆ ಸೇರಿ ಜಂಟಿ ಕಾರ್ಯಾಚರಣೆ ನಡೆಸಿತು. ಗುಂಡಿನ ಚಕಮಕಿ ಬಳಿಕ ಶರಣಾಗತರಾಗಲು ಉಗ್ರರಿಗೆ ಅವಕಾಶ ನೀಡಲಾಗಿತ್ತು. ಉಗ್ರರು ಶರಣಾಗತರಾದರು ಎಂದು ಶ್ರೀನಗರ ಮೂಲದ ರಕ್ಷಣಾ ವಕ್ತಾರ ಕರ್ನಲ್ ರಾಜೇಶ್ ಕಾಲಿಯಾ ತಿಳಿಸಿದ್ದಾರೆ.
Next Story





