ಬೆಂಗಳೂರು : ಏಶ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಗೆದ್ದ ಮಹಿಳಾ ಪೇದೆಗೆ ಅದ್ದೂರಿ ಸ್ವಾಗತ
ಬೆಂಗಳೂರು, ಆ.26: 18ನೆ ಏಶ್ಯನ್ ಗೇಮ್ಸ್‌ನ ಕಬ್ಬಡಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿರುವ ರಾಜ್ಯ ಪೊಲೀಸ್ ಇಲಾಖೆಯ ಮಹಿಳಾ ಪೊಲೀಸ್ ಪೇದೆ ಎನ್.ಉಷಾರಾಣಿ ಅವರಿಗೆ ಅದ್ದೂರಿ ಸ್ವಾಗತ ಕೋರಲಾಯಿತು.
ರವಿವಾರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾಜ್ಯ ಮೀಸಲು ಪಡೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಭಾಸ್ಕರ ರಾವ್ ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳು, ಉಷಾರಾಣಿ ಅವರಿಗೆ ಮೈಸೂರು ಪೇಟಾ, ಶಾಲು ಹೊದಿಸಿ ಅಭಿನಂದಿಸಿದರು.
ಶುಕ್ರವಾರ ಜಖಾರ್ತಾದಲ್ಲಿ ನಡೆದ 18ನೆ ಏಯನ್ ಗೇಮ್ಸ್‌ನ ಕಬ್ಬಡ್ಡಿ ವಿಭಾಗದಲ್ಲಿ 28 ವರ್ಷದ ಉಷಾರಾಣಿ ಬೆಳ್ಳಿ ಪದಕ ಗೆದ್ದಿದ್ದರು.ಬಳಿಕ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಸೇರಿ ಹಿರಿಯ ಅಧಿಕಾರಿಗಳು ಪ್ರಶಂಶಿಸಿದ್ದಾರೆ.
ಈ ಹಿಂದೆಯೂ ಉಷಾರಾಣಿ, 2016ನೆ ಸಾಲಿನ ಫೆಬ್ರವರಿ ತಿಂಗಳಿನಲ್ಲಿ ಗೋಹಾತಿಯಲ್ಲಿ ನಡೆದ 12 ನೆ ದಕ್ಷಿಣ ಏಶ್ಯನ್ ಫೆಡರೇಷಿಯನ್ ಗೇಮ್ಸ್‌ನ ಕಬ್ಬಡಿ ವಿಭಾಗದಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದರು.
Next Story





