Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆನಸೇ…!

ಓ ಮೆನಸೇ…!

ಪಿ.ಎ. ರೈಪಿ.ಎ. ರೈ27 Aug 2018 12:24 AM IST
share
ಓ ಮೆನಸೇ…!

ಮಹಿಳೆಯರು ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯ ಪ್ರವೇಶಿಸಲು ಬಯಸಿದ್ದರಿಂದಲೇ ಕೇರಳದಲ್ಲಿ ಪ್ರವಾಹ ಸೃಷ್ಟಿಯಾಗಿದೆ -ಪ್ರಭಾಕರನ್, ಹಿಂದೂ ಮಕ್ಕಳ್ ಸಂಘಟನೆಯ ನಾಯಕ

► ಪ್ರವೇಶವನ್ನು ತಡೆದುದಕ್ಕಾಗಿ ಪ್ರವಾಹ ಸೃಷ್ಟಿಯಾಗಿದೆ ಎನ್ನುವುದು ಮಹಿಳೆಯರ ವಾದ.

---------------------

ವಿದ್ಯಾರ್ಥಿಗಳು ಯಾವ ಕಾರಣಕ್ಕೂ ತಂತ್ರಜ್ಞಾನವನ್ನು ದುರುಪಯೋಗ ಪಡಿಸಿಕೊಳ್ಳಬಾರದು -ಆರ್.ವಿ.ದೇಶಪಾಂಡೆ, ಸಚಿವ

► ಉಳಿದವರಿಗೆ ದುರುಪಯೋಗ ಪಡಿಸಿಕೊಳ್ಳಲು ಅನುಮತಿ ಇದೆಯೇ?

---------------------

ರಾಜ್ಯ ಸರಕಾರದ ಉದಾಸೀನದಿಂದಾಗಿ ಕೃಷಿಕರು ಒತ್ತಡದಲ್ಲಿರಬೇಕಾದ ಸ್ಥಿತಿ ಬಂದಿದೆ -ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ

► ಮೊದಲು ಕೇಂದ್ರ ಸರಕಾರಕ್ಕೆ ನಿಮ್ಮ ಒತ್ತಡ ಬೀಳಬೇಕಾಗಿದೆ.

---------------------

ಸರಕಾರಿ ಇಲಾಖೆಗಳಿಂದ ಮುದ್ರಿಸಲಾದ ಮಾರಾಟವಾಗದ ಪುಸ್ತಕಗಳನ್ನು ಗ್ರಂಥಾಲಯ ಇಲಾಖೆಗೆ ಹಸ್ತಾಂತರಿಸಲಾಗುವುದು -ಜಯಮಾಲಾ, ಸಚಿವೆ

► ಗ್ರಂಥಾಲಯವೆಂದರೆ ರದ್ದಿ ಅಂಗಡಿಯೇ?

---------------------

ಕೊಡಗು ನಿರ್ವಸಿತರಿಗೆ ಶಾಶ್ವತವಾದ ಮನೆ ನಿರ್ಮಿಸಿ ಕೊಡುವ ಅಗತ್ಯವಿದೆ -ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

► ಅದನ್ನು ತಮ್ಮ ನಾಯಕರಾದ ನರೇಂದ್ರ ಮೋದಿಯವರ ಕಿವಿಗೂ ತಲುಪಿಸಿ.

---------------------

ನಾನು ಕರ್ನಾಟಕವನ್ನು ಒಂದು ನಿಮಿಷವೂ ಮರೆತಿಲ್ಲ -ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವೆ

► ಬರೇ ಒಂದು ನಿಮಿಷವನ್ನಷ್ಟೇ ಮರೆತಿಲ್ಲ ಎಂದು ಜನರು ಅರ್ಥೈಸಿಕೊಂಡಿದ್ದಾರೆ.

---------------------

ಪ್ರತಿಭೆ ಜಾತಿಯಿಂದ ಬರುವುದಿಲ್ಲ -ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

► ಕೆಲವೊಮ್ಮೆ ಅದು ಹಣದಿಂದಲೂ ಬರುತ್ತದೆ.

 ---------------------

ರಾಷ್ಟ್ರ ರಾಜಕಾರಣದಲ್ಲಿ ವಿಪಕ್ಷಗಳ ಧ್ರುವೀಕರಣ ಆಗುತ್ತಿದೆ -ಕೃಷ್ಣ ಭೈರೇಗೌಡ, ಸಚಿವ

► ಏನೇ ಆಗುವುದಿದ್ದರೂ ಚುನಾವಣೆಗೆ ಘೋಷಣೆ ಮುನ್ನ ಆದರೆ ಒಳಿತು. 

 ---------------------

ನಾನು ವಾಸ್ತು ಪ್ರಕಾರ ನಿಂತು ಮಳೆ ಸಂತ್ರಸ್ತರಿಗೆ ಬಿಸ್ಕೆಟ್ ನೀಡಿದ್ದೇನೆ -ಎಚ್.ಡಿ.ರೇವಣ್ಣ, ಸಚಿವ

► ಎಸೆದಿದ್ದೇನೆ ಎಂದರೆ ಚೆನ್ನಾಗಿತ್ತು.

---------------------

ರೈತರ ಸಾಲಮನ್ನಾ ಬಗ್ಗೆ ಯಾರಿಗೂ ಸಂಶಯ ಬೇಡ -ಎಚ್.ಶಿವಶಂಕರ ರೆಡ್ಡಿ, ಸಚಿವ

► ಸಂಶಯ ಬೇಡ ಎನ್ನುವ ಮನವಿಯೇ ಸಂಶಯ ಹುಟ್ಟಿಸುತ್ತಿದೆ.

---------------------

ದೇಶ ಬದಲಾಗುತ್ತಿದೆ ನಾವೂ ಬದಲಾಗಬೇಕು -ಫಾರೂಕ್ ಅಬ್ದುಲ್ಲಾ, ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ.

► ದೇಶ ಯಾವ ರೀತಿಯಲ್ಲಿ ಬದಲಾಗುತ್ತಿದೆ ಮತ್ತು ನೀವು ಯಾವ ರೀತಿ ಬದಲಾಗಲು ಹೊರಟಿದ್ದೀರಿ ಎನ್ನುವುದನ್ನು ವಿವರಿಸಿ ಹೇಳಿ.

---------------------

ಕಾಂಗ್ರೆಸ್‌ನಿಂದ ಪ್ರಯೋಜನ ಪಡೆದವರ ಮಕ್ಕಳು ಈಗ ಕೋಮುವಾದಿಗಳಾಗುತ್ತಿದ್ದಾರೆ -ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ.

► ಕಾಂಗ್ರೆಸ್‌ನಿಂದ ಪ್ರಯೋಜನ ಪಡೆದ ಹಿರಿಯ ರಾಜಕಾರಣಿಗಳೇ ಕೋಮುವಾದಿ ಪಕ್ಷ ಸೇರಿರುವಾಗ ಇನ್ನೇನಾಗುತ್ತದೆ?

---------------------

ಆಧುನಿಕ ಜಗತ್ತಿನಲ್ಲಿ ಭದ್ರತೆ ನೆಲೆಯೂರಬೇಕಾದರೆ ಭಾರತ ಮತ್ತು ಚೀನಾ ನಡುವೆ ಶಾಂತಿ ನೆಲೆಸಬೇಕು -ನರೇಂದ್ರ ಮೋದಿ, ಪ್ರಧಾನಿ

► ಭಾರತ-ಪಾಕ್ ಮಧ್ಯೆ ಶಾಂತಿ ನಿಮಗಿಷ್ಟವಿಲ್ಲವೇ?

---------------------

ಮುಖ್ಯಮಂತ್ರಿ ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ನೆರಳಿನಂತೆ ವರ್ತಿಸುತ್ತಿದ್ದಾರೆ -ಅನಂತ ಕುಮಾರ್ ಹೆಗಡೆ, ಕೇಂದ್ರ ಸಚಿವ.

► ಅವರ ನಡುವಿನ ಅನ್ಯೋನ್ಯತೆ ಅಷ್ಟರಮಟ್ಟಿಗೆ ಇದೆ ಎಂದು ಅನ್ನಿಸುವುದಿಲ್ಲ.

---------------------

ನಾನು ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕೆಂದುಕೊಂಡಿದ್ದೇನೆ -ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

► ಯಾವ ಪಕ್ಷದಿಂದ?

---------------------

5 ವರ್ಷ ಕುಮಾರಸ್ವಾಮಿಯೇ ಮುಖ್ಯಮಂತ್ರಿ ಎಂದು ಬರೆದುಕೊಟ್ಟಿದ್ದೇವೆ -ಡಿ.ಕೆ.ಶಿವಕುಮಾರ್, ಸಚಿವ

► ಅಂದರೆ ಸಿದ್ದರಾಮಯ್ಯರಿಗೆ ಅವಕಾಶವೇ ಇಲ್ಲ ಎನ್ನುವ ಸಂದೇಶವೇ?

---------------------

ಉತ್ತಮ ನಾಯಕರು ಇರದೆ ಪ್ರಜಾಪ್ರಭುತ್ವ ವ್ಯವಸ್ಥೆಯೊಂದು ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ -ಪ್ರಣವ್ ಮುಖರ್ಜಿ, ಮಾಜಿ ರಾಷ್ಟ್ರಪತಿ

► ತಮ್ಮ ಕುರಿತಂತೆ ಆತ್ಮವಿಮರ್ಶೆ ಇರಬೇಕು.

---------------------

ಭಾರತದ ಜೀವಾಳವಾಗಿರುವ ಬಹು ಸಂಸ್ಕೃತಿಯನ್ನು ಆರೆಸ್ಸೆಸ್ ಬುಡಮೇಲು ಮಾಡಲು ಹೊರಟಿದೆ -ರಾಹುಲ್ ಗಾಂ, ಕಾಂಗ್ರೆಸ್ ಅಧ್ಯಕ್ಷ

► ಆರೆಸ್ಸೆಸ್ ಇಂದು ಈ ಮಟ್ಟಿಗೆ ಬೆಳೆಯಲು ಕಾಂಗ್ರೆಸ್‌ನ ಕೊಡುಗೆಯೂ ಇದೆ, ಮರೆಯಬೇಡಿ.

---------------------

ಬಿಜೆಪಿ ಅಕಾರಕ್ಕೆ ಬಂದರೆ ರಾಜಕೀಯ ಭ್ರಷ್ಟಾಚಾರಕ್ಕೆ ಸಂಪೂರ್ಣ ಕಡಿವಾಣ ಹಾಕಲಾಗುವುದು -ರಘುಪತಿ ಭಟ್, ಶಾಸಕ

► ಉಡುಪಿ ಮಠದೊಳಗಿರುವ ರಾಜಕೀಯ ಭ್ರಷ್ಟಾಚಾರದ ಕುರಿತಂತೆ ಇರಬೇಕು.

---------------------

ಭಾರತಕ್ಕೆ ಸ್ವಾತಂತ್ರ ದೊರೆತದ್ದು ಉಪವಾಸ ಸತ್ಯಾಗ್ರಹದಿಂದಲ್ಲ -ಎಸ್.ಎಲ್ ಭೈರಪ್ಪ, ಸಾಹಿತಿ

► ಬಹುಶಃ ನಿಮ್ಮ ಬರಹ ಓದಿ ಬ್ರಿಟಿಷರು ಭಾರತ ಬಿಟ್ಟು ಓಡಿ ಹೋಗಿರಬೇಕು.

---------------------

ಅಟಲ್ ಬಿಹಾರಿ ವಾಜಪೇಯಿ ಸಾವಿನಲ್ಲೂ ಬಿಜೆಪಿ ರಾಜಕೀಯ ಮಾಡುತ್ತಿದೆ - ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ

► ಇಂದಿರಾಗಾಂ, ರಾಜೀವ್ ಗಾಂ ಸಾವಿನಲ್ಲಿ ನೀವು ಮಾಡಿದ ರಾಜಕೀಯ ಏನು ಕಡಿಮೆಯೇ?

---------------------

ಸದ್ಯಕ್ಕೆ ರಾಜಕೀಯ ಸನ್ಯಾಸ ಇಲ್ಲ -ಎಸ್.ಎಂ.ಕೃಷ್ಣ, ಮಾಜಿ ಮುಖ್ಯಮಂತ್ರಿ  

► ದೀಕ್ಷೆ ನೀಡಲು ಪೇಜಾವರ ಶ್ರೀಗಳು ತುದಿಗಾಲಲ್ಲಿ ನಿಂತಿದ್ದಾರೆ.

---------------------

ಉತ್ತರ ಪ್ರದೇಶದಲ್ಲಿ ನಮ್ಮ ಪಕ್ಷ ಅಕಾರಕ್ಕೆ ಬಂದರೆ ಇಟಾವಾ ಬಳಿ ವಿಷ್ಣು ನಗರ ನಿರ್ಮಿಸಲಾಗುವುದು -ಅಖಿಲೇಶ್ ಯಾದವ್, ಎಸ್ಪಿ ಮುಖ್ಯಸ್ಥ

► ಇರುವ ನಗರಗಳ ಸ್ಥಿತಿಯ ಬಗ್ಗೆ ಒಂದಿಷ್ಟು ಹೇಳಿ.

share
ಪಿ.ಎ. ರೈ
ಪಿ.ಎ. ರೈ
Next Story
X