ಬೆಂಗಳೂರು: ಲಾರಿ ಚಾಲಕನ ಮೇಲೆ ಹಲ್ಲೆ
ಬೆಂಗಳೂರು, ಆ.27: ನೆಲಮಂಗಲ ರಾಷ್ಟ್ರೀಯ ಹೆದ್ದಾರಿ 4ರ ಟೋಲ್‌ನಲ್ಲಿ ಲಾರಿ ಚಾಲಕನ ಮೇಲೆ ಟೋಲ್ ಸಿಬ್ಬಂದಿಯು ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಹಲ್ಲೆಯಿಂದ ಗಾಯಗೊಂಡಿರುವ ಲಾರಿ ಚಾಲಕ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಬೆಂಗಳೂರಿನಿಂದ ತುಮಕೂರು ಮಾರ್ಗವಾಗಿ ಬಂದ ಲಾರಿ ಚಾಲಕ ಜಾಸ್ ಟೋಲ್‌ನಲ್ಲಿ ಬಿಲ್‌ಗೆ ಹಣ ನೀಡಿದ್ದಾರೆ. ಮೊದಲು ಟಿಕೆಟ್ ನೀಡಿದ ಸಿಬ್ಬಂದಿ ನಂತರ ಮತ್ತೊಂದು ಟಿಕೆಟ್ ನೀಡಿದ್ದಾರೆ ಎನ್ನಲಾಗಿದೆ.
ಈ ವೇಳೆ ಲಾರಿ ಚಾಲಕ ಎರಡು ಹಣ ಪಡೆದಿರುವುದನ್ನು ಪ್ರಶ್ನಿಸಿ ನ್ಯಾಯವಾಗಿ ವ್ಯವಹರಿಸಿ ಎಂದಾಗ ಆಕ್ರೋಶಗೊಂಡ ಟೋಲ್ ಸಿಬ್ಬಂದಿ, ಚಾಲಕನ ಮೊಬೈಲ್ ಕಸಿದು ಲಾರಿಯಿಂದ ಹೊರಗೆಳೆದು ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಚಾಲಕ ನ್ಯಾಯ ನೀಡಿ ನ್ಯಾಯ ನೀಡಿ ಎಂದು ಕೇಳಿಕೊಂಡರೂ ಟೋಲ್ ಸಿಬ್ಬಂದಿ ಮಾನವೀಯತೆ ಇಲ್ಲದೆ ಥಳಿಸಿದ್ದಾರೆ ಎನ್ನಲಾಗಿದ್ದು, ಈ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊಕದ್ದಮೆ ದಾಖಲಾಗಿದೆ.
Next Story





