ಬೆಂಗಳೂರು: ನವ ವಿವಾಹಿತೆ ನಿಗೂಢ ಸಾವು

ಬೆಂಗಳೂರು, ಆ.27: ಅಸ್ಸಾಂ ರಾಜ್ಯದ ನವ ವಿವಾಹಿತೆಯೊಬ್ಬರು ಕಬ್ಬಿಣದ ಮೆಟ್ಟಲಿನ ಕಂಬಕ್ಕೆ ನೇಣು ಬಿಗಿದುಕೊಂಡು ಶಂಕಾಸ್ಪದವಾಗಿ ಮೃತಪಟ್ಟಿರುವುದು ವರದಿಯಾಗಿದೆ.
ಸಿಕೆ ಪಾಳ್ಯದ ಸೋನಾಥೋನ್(18) ಎಂದು ಮೃತ ಮಹಿಳೆಯನ್ನು ಗುರುತಿಸಲಾಗಿದೆ. ಅಸ್ಸಾಂ ಮೂಲದ ಸೋನಾಥೋನ್‌ಗೆ ಕಳೆದ ತಿಂಗಳಷ್ಟೇ ಮದುವೆಯಾಗಿತ್ತು ಎನ್ನಲಾಗಿದೆ. ಶನಿವಾರ ಆಕೆಯ ಶವ ನೇಣುಬಿಗಿದ ಸ್ಥಿತಿಯಲ್ಲಿ ಮನೆಯ ಮುಂಭಾಗ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಮನೆಯ ಹೊರಗಡೆ ಕಬ್ಬಿಣದ ಮೆಟ್ಟಿಲುಗಳಿಗೆ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ರೀತಿಯಲ್ಲಿ ಆಕೆಯ ಶವ ಪತ್ತೆಯಾಗಿದೆ. ಕೌಟುಂಬಿಕ ಕಲಹ ಹಿನ್ನೆಲೆಯಿಂದ ಮನನೊಂದು ರಾತ್ರಿ ಎಲ್ಲರೂ ಮಲಗಿದ ನಂತರ ಮನೆಯಿಂದ ಹೊರಗೆ ಬಂದು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಈ ಸಂಬಂಧ ಬನ್ನೇರುಘಟ್ಟ ಠಾಣಾ ಪೊಲೀಸರು ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.
Next Story





