ಬೆಂಗಳೂರು: ರಾಜ್ಯಮಟ್ಟದ ಕಥಾಕಮ್ಮಟ ಆಯೋಜನೆ
ಬೆಂಗಳೂರು, ಆ.27 ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ(ರಿ)ವು ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಹಯೋಗದಲ್ಲಿ ನವೆಂಬರ್ 9, 10 ಹಾಗೂ 11ರಂದು ಮೂರು ದಿನಗಳ ರಾಜ್ಯಮಟ್ಟದ ಕಥಾಕಮ್ಮಟವನ್ನು ಕುಪ್ಪಳ್ಳಿಯಲ್ಲಿ ಭಾಷಾತಜ್ಞ ಡಾ.ಕೆ.ವಿ.ನಾರಾಯಣ ನಿರ್ದೇಶನದಲ್ಲಿ ಹಮ್ಮಿಕೊಳ್ಳಲಾಗಿದೆ. ನಾಟಕಕಾರ ಡಾ.ಕೆ.ವೈ.ನಾರಾಯಣಸ್ವಾಮಿ ಸಂಚಾಲಕರಾಗಿರುತ್ತಾರೆ.
ಈ ಕಥಾಕಮ್ಮಟದಲ್ಲಿ ಭಾಗವಹಿಸುವವರಿಗೆ ಉಚಿತ ಅಧ್ಯಯನ ಸಾಮಗ್ರಿ, ವಸತಿ ಮತ್ತು ಊಟದ ವ್ಯವಸ್ಥೆ ಏರ್ಪಡಿಸಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ. ಹಿಂದಿನ ಕಮ್ಮಟಗಳಲ್ಲಿ ಭಾಗವಹಿಸಿರುವವರಿಗೆ ಆದ್ಯತೆಯಿಲ್ಲ. ಭಾಗವಹಿಸಲು ಆಸಕ್ತರಾಗಿರುವವರು ಸ್ವವಿವರಗಳನ್ನು ‘ಅಧ್ಯಕ್ಷರು, ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ(ರಿ), ನಂ.15, 2ನೇ ಅಡ್ಡರಸ್ತೆ, ನಿಸರ್ಗ ಬಡಾವಣೆ, ಉಲ್ಲಾಳ ಆರ್‌ಟಿಓ ಕಚೇರಿ ಹತ್ತಿರ, ಬೆಂಗಳೂರು-560091’ ಇಲ್ಲಿಗೆ ಕಳುಹಿಸಬಹುದು.
ಅಲ್ಲದೆ, ಇಮೇಲ್ ವಿಳಾಸ drbrtrust@gmail.com ಅಥವಾ ಪ್ರತಿಷ್ಠಾನದ ಅಂತರ್ಜಾಲ ತಾಣ www.besagarahalliramanna.org ನಲ್ಲಿ ನೀಡಿರುವ ನಮೂನೆಯನ್ನು ಭರ್ತಿ ಮಾಡಿ ಕಳುಹಿಸಬಹುದು. ವಿವಿರಗಳನ್ನು ಕಳುಹಿಸಲು ಅಕ್ಟೋಬರ್ 15 ಕೊನೆಯ ದಿನವಾಗಿದೆ.
ಹೆಚ್ಚಿನ ವಿವರಗಳಿಗೆ ಮೊಬೈಲ್ ಸಂಖ್ಯೆ 99803 05837, 97390 07127ಗೆ ಸಂಪರ್ಕಿಸಬಹುದು ಎಂದು ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಕೆ.ಪುಟ್ಟಸ್ವಾಮಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.





