ಪಾಕ್ ವಿಮಾನ ನಿಲ್ದಾಣಗಳಲ್ಲಿ ಪ್ರಭಾವಿಗಳಿಗೆ ವಿಐಪಿ ಸ್ಥಾನಮಾನ ರದ್ದತಿ ಜಾರಿಗೆ

ಇಸ್ಲಾಮಾಬಾದ್, ಆ. 27: ಪಾಕಿಸ್ತಾನದ ವಿಮಾನ ನಿಲ್ದಾಣಗಳಲ್ಲಿ ಪ್ರಭಾವಿಗಳಿಗೆ ಫೆಡರಲ್ ಇನ್ವೆಸ್ಟಿಗೇಶನ್ ಏಜನ್ಸಿ (ಎಫ್‌ಐಎ) ನೀಡಿರುವ ವಿಐಪಿ ಸ್ಥಾನಮಾನವನ್ನು ದೇಶದ ನೂತನ ಸರಕಾರ ನಿಷೇಧಿಸಿದೆ.
ಈ ನಿರ್ಧಾರವು ರವಿವಾರದಿಂದ ಜಾರಿಗೆ ಬಂದಿದೆ. ಇದನ್ನು ಜಾರಿಗೆ ತರುವಂತೆ ಆಂತರಿಕ ಸಚಿವಾಲಯವು ಎಫ್‌ಐಎಯ ವಲಸೆ ವಿಭಾಗದ ಎಲ್ಲ ಸಂಬಂಧಿತ ಅಧಿಕಾರಿಗಳಿಗೆ ಈ ಸಂಬಂಧ ಸೂಚನೆ ನೀಡಿದೆ.
‘‘ಎಲ್ಲ ಪ್ರಯಾಣಿಕರಿಗೆ ಯಾವುದೇ ತಾರತಮ್ಯವಿಲ್ಲದೆ ಸಮಾನ ಅವಕಾಶಗಳನ್ನು ನೀಡುವ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ನಾವು ನಿರ್ಧರಿಸಿದ್ದೇವೆ’’ ಎಂದು ವಾರ್ತಾ ಸಚಿವ ಫಾವದ್ ಚೌಧರಿ ರವಿವಾರ ‘ಡಾನ್’ ಪತ್ರಿಕೆಗೆ ಹೇಳಿದ್ದಾರೆ.
ರಾಜಕಾರಣಿಗಳು, ಸಂಸದರು, ಹಿರಿಯ ಅಧಿಕಾರಿಗಳು, ನ್ಯಾಯಾಧೀಶರು, ಸೇನಾ ಅಧಿಕಾರಿಗಳು ಮತ್ತು ಪತ್ರಕರ್ತರಿಗೆ ವಿಮಾನ ನಿಲ್ದಾಣಗಳಲ್ಲಿ ವಿಐಪಿ ಸ್ಥಾನಮಾನ ನೀಡಲಾಗುತ್ತಿತ್ತು.
Next Story





