ಶಿವಮೊಗ್ಗ: ನದಿಗೆ ಹಾರುವುದಾಗಿ ಹೇಳಿ ಹೋದವ ನಾಪತ್ತೆ
ಶಿವಮೊಗ್ಗ, ಆ.27: ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಬೇಸತ್ತ ವ್ಯಕ್ತಿಯೋರ್ವ ನದಿಗೆ ಹಾರುವುದಾಗಿ ಹೇಳಿ ನಾಪತ್ತೆಯಾಗಿರುವ ಘಟನೆ ಭದ್ರಾವತಿಯಲ್ಲಿ ನಡೆದಿದೆ.
ಭದ್ರಾವತಿ ಉಜ್ಜನಿಪುರದ ನಿವಾಸಿ ಅಂಗವೈಕಲ್ಯತೆ ಹೊಂದಿದ್ದ ದಿನೇಶ್ ಮೊನ್ನೆರಾತ್ರಿ 11.30ಕ್ಕೆ ತನ್ನ ಗೆಳೆಯ ನಾಗರಾಜ್ ಎಂಬಾತನಿಗೆ ಕರೆಮಾಡಿ ಮನೆ ಸಾಕಾಗಿದೆ ನದಿಗೆ ಹಾರುವುದಾಗಿ ಹೇಳಿದ್ದಾನೆ. ಆತನನ್ನು ಹುಡುಕಲು ನದಿ ಬಳಿ ಬಂದಾಗ ಸೇತುವೆ ಮೇಲೆ ಮೊಬೈಲ್ ಇಟ್ಟು, ಅದೇ ಸ್ಥಳದಲ್ಲಿ ಬೈಕ್ ಬಿಟ್ಟು ನಾಪತ್ತೆಯಾಗಿದ್ದಾನೆ. ಈ ಸಂಬಂದ ಭದ್ರಾವತಿ ಪೊಲೀಸರಿಗೆ ದಿನೇಶ್ ಕುಟುಂಬದವರು ದೂರು ನೀಡಿ ಪತ್ತೆಗೆ ಕ್ರಮಕೈಗೊಳ್ಳುವಂತೆ ಕೋರಿದ್ದಾರೆ.
Next Story





