ಉತ್ತರ ಪ್ರದೇಶ: ಜಾನುವಾರುಗಳ ಎಲುಬು ಸಾಗಿಸುತ್ತಿದ್ದ ವಾಹನಕ್ಕೆ ಬೆಂಕಿ

ಮೊರಾದಾಬಾದ್ (ಉತ್ತರ ಪ್ರದೇಶ), ಆ.28: ಬಕ್ರೀದ್ ವೇಳೆ ಬಲಿ ನೀಡಿದ ಪ್ರಾಣಿಗಳ ಎಲುಬುಗಳನ್ನು ಸಾಗಿಸುತ್ತಿದ್ದ ವಾಹನಕ್ಕೆ ನಾಲ್ವರು ಆಗಂತುಕರು ಬೆಂಕಿ ಹಚ್ಚಿದ ಘಟನೆ ಕಟ್ಗರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವಾಹನದ ಚಾಲಕ ಹಾಗೂ ನಿರ್ವಾಹಕನಿಗೆ ನಾಲ್ವರು ಬೇಕಾಬಿಟ್ಟಿ ಥಳಿಸಿದ್ದು, ಅವರು ತಪ್ಪಿಸಿಕೊಂಡು ಕಟ್ಗರ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಈ ಸಂಬಂಧ ಎಫ್‍ಐಆರ್ ದಾಖಲಿಸಿಕೊಂಡಿದ್ದು, ದುಷ್ಕರ್ಮಿಗಳಿಗಾಗಿ ಶೋಧ ನಡೆದಿದೆ ಎಂದು ಸರ್ಕಲ್ ಆಫೀಸರ್ ಸುದೇಶ್ ಕುಮಾರ್ ಹೇಳಿದ್ದಾರೆ.
Next Story





